Dailyhunt Logo
  • Light mode
    Follow system
    Dark mode
    • Play Story
    • App Story
SHIVAMOGGA: ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ: ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು

SHIVAMOGGA: ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ: ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು

Navasamaja.com 7 hrs ago

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ (Shivamogga) ನಗರದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ನಿಗೂಢವಾಗಿ ನಾಪತ್ತೆಯಾಗಿರುವ (Missing) ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಕಳೆದ ಒಂದು ತಿಂಗಳಿನಿಂದ ಇವರ ಪತ್ತೆಯಾಗದ ಹಿನ್ನೆಲೆಯಲ್ಲಿ ಇಡೀ ಕುಟುಂಬವೇ (Family) ನಾಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮತ್ತು ಆತಂಕವನ್ನು ಮೂಡಿಸಿದೆ.

ನಗರದ ಬುದ್ಧನಗರದ ನಿವಾಸಿಗಳಾದ ಮೊಹಮ್ಮದ್ ಇಕ್ಬಾಲ್ (62 ವರ್ಷ), ನಸ್ರತ್ ಬಾನು (54 ವರ್ಷ), ಮೊಹಮ್ಮದ್ ಫಾಜಿಲ್ (35 ವರ್ಷ) ಮತ್ತು ಮೊಹಮ್ಮದ್ ಆದಿಲ್ (32 ವರ್ಷ) ಕಳೆದ ಏಪ್ರಿಲ್ 15ರಿಂದ ಕಾಣೆಯಾದ ದುರ್ದೈವಿಗಳಾಗಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಏಪ್ರಿಲ್ ನಲ್ಲಿ ಮನೆಯಿಂದ ಹೋದವರು ಮರಳಿ ಬಾರದ ಹಿನ್ನೆಲೆಯಲ್ಲಿ ಹಾಗೂ ಎಲ್ಲೂ ಪತ್ತೆಯಾಗದ ಕಾರಣ, ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ನಾಪತ್ತೆ ಪ್ರಕರಣ (Missing Case) ದಾಖಲಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಫೋಟೊದಲ್ಲಿರುವ ಈ ನಾಲ್ಕು ಜನರಲ್ಲಿ ಇಬ್ಬರು ಯುವಕರು ಹಾಗೂ ವೃದ್ಧ ದಂಪತಿಗಳ ಬಗ್ಗೆ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಅಥವಾ ಸಮೀಪದ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕಾಗಿ ಸಾರ್ವಜನಿಕರಲ್ಲಿ ಪೊಲೀಸರು ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಲಾಡ್ಜ್ ರೂಮ್ ನಲ್ಲಿ ಗನ್ ಬುಲೆಟ್ ‌ಗಳ ಸಂಗ್ರಹ - ಓರ್ವ ಆರೋಪಿ ಸೆರೆ!

ಬೆಂಗಳೂರು: ಬೆಂಗಳೂರು ಹೃದಯಭಾಗದಲ್ಲಿರುವ ಗಾಂಧಿನಗರದ ಲಾಡ್ಜ್‌ ಒಂದರಲ್ಲಿ ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ ಜೀವಂತ ಗುಂಡುಗಳು ಪತ್ತೆಯಾಗಿದೆ.

ಈ ಸಂಬಂಧ ಉಪ್ಪಾರಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

​ಮೆಜೆಸ್ಟಿಕ್ ಸಮೀಪದ ಗಾಂಧಿನಗರದಲ್ಲಿರುವ ಲಾಡ್ಜ್‌ನ ಸಿಬ್ಬಂದಿಗೆ ಶಂಕಿತನ ನಡೆ ಹಾಗೂ ಆತನ ಬಳಿಯಿದ್ದ ವಸ್ತುಗಳ ಬಗ್ಗೆ ಅನುಮಾನ ಬಂದಿದೆ. ತಕ್ಷಣ ಜಾಗೃತರಾದ ಸಿಬ್ಬಂದಿ ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಲಭ್ಯವಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಲಾಡ್ಜ್ ರೂಮ್ ಮೇಲೆ ತಕ್ಷಣ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಜೀವಂತ ಗುಂಡುಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಸ್ಥಳದಲ್ಲೇ ಇದ್ದ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಗುಂಡುಗಳನ್ನು ಬೆಂಗಳೂರಿಗೆ ತಂದ ಉದ್ದೇಶವೇನು? ಯಾವುದೇ ರೌಡಿ ಗ್ಯಾಂಗ್‌ಗೆ ಪೂರೈಸಲು ತರಲಾಗುತ್ತಿತ್ತೇ? ಅಥವಾ ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿತ್ತೇ? ಎಂಬ ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja