Dailyhunt
SHOCKING: ಮಾವು ಸವಿಯುವ ಮುನ್ನ ಎಚ್ಚರ, ಆರೋಗ್ಯಕ್ಕೆ ಹಾನಿ ಮಾಡ್ಬೋದು ಈ ಹಣ್ಣು-VIDEO

SHOCKING: ಮಾವು ಸವಿಯುವ ಮುನ್ನ ಎಚ್ಚರ, ಆರೋಗ್ಯಕ್ಕೆ ಹಾನಿ ಮಾಡ್ಬೋದು ಈ ಹಣ್ಣು-VIDEO

Navasamaja.com 1 month ago

ಬೆಂಗಳೂರು: ಬೇಸಿಗೆ ಬಂತೆಂದರೆ ಸಾಕು ಹಣ್ಣುಗಳ ರಾಜ ಮಾವಿನ ಹಣ್ಣಿನ (Mango)ಘಮ ಎಲ್ಲೆಡೆ ಪಸರಿಸುತ್ತದೆ. ಆದರೆ, ಈ ಬಾರಿ ಮಾವಿನ ಹಣ್ಣು ಸವಿಯುವ ಮುನ್ನ ನೀವು ತುಸು ಹೆಚ್ಚು (Shocking) ಜಾಗರೂಕರಾಗಿರಬೇಕು.ಯಾಕೆ ಅಂತೀರಾ? ಇಲ್ಲಿದೆ ನೋಡಿ.

ರಾಸಾಯನಿಕಗಳಿಂದ ತುಂಬಿದೆ ಮಾವು

ಅತಿಯಾದ ಲಾಭದ ಆಸೆಗೆ ಬಿದ್ದ ಕೆಲವು ವ್ಯಾಪಾರಿಗಳು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ಮಾರಕ ರಾಸಾಯನಿಕಗಳನ್ನು ಬಳಸಿ ಕಾಯಿಗಳನ್ನ ಹಣ್ಣುಗಳನ್ನಾಗಿ ಮಾಡುತ್ತಿದ್ದಾರೆ. ಈ ಬಗ್ಗೆ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಬೆಂಗಳೂರಿನಲ್ಲೂ ಇಂತಹ ಹಣ್ಣುಗಳ ಮಾರಾಟದ ಬಗ್ಗೆ ಭೀತಿ ಶುರುವಾಗಿದೆ.

ಸಾಮಾನ್ಯವಾಗಿ ನಾವು ಅಂಗಡಿಗಳಲ್ಲಿ ಬಹಳ ಸುಂದರವಾಗಿ, ಹಳದಿಯಾಗಿ ಅಥವಾ ಗೋಲ್ಡನ್‌ ಬಣ್ಣದ ಮಾವಿನ ಹಣ್ಣು ಕಂಡರೆ ಸಾಕು ಮುಗಿಬಿದ್ದು ಖರೀದಿ ಮಾಡುತ್ತೇವೆ. ಆದರೆ ಈ ರೀತಿ ಖರೀದಿ ಮಾಡುವುದು ನಮ್ಮ ಆರೋಗ್ಯವನ್ನ ಹಾಳು ಮಾಡುತ್ತದೆ. ಈ ಹಣ್ಣುಗಳು ನೋಡಲು ಆಕರ್ಷಕವಾಗಿದ್ದರೂ, ಒಳಗಡೆ ಕಚ್ಚಾ ಇರುತ್ತದೆ ಮತ್ತು ವಿಷವನ್ನ ಹೊಂದಿರುತ್ತದೆ. ಏಕೆಂದರೆ ನೈಸರ್ಗಿಕವಾಗಿ ಹಣ್ಣಾದ ಮಾವು ಎಂದಿಗೂ ಹಣ್ಣಿನಾದ್ಯಂತ ಒಂದೇ ಬಣ್ಣವನ್ನು ಹೊಂದಿರುವುದಿಲ್ಲ. ಇಂತಹ ರಾಸಾಯನಿಕಯುಕ್ತ ಹಣ್ಣುಗಳನ್ನ ತಿನ್ನುವುದರಿಂದ ಗಂಟಲು ಉರಿ, ವಾಕರಿಕೆ, ವಾಂತಿ ಮತ್ತು ಭೇದಿಯಂತಹ ಸಮಸ್ಯೆಗಳು ತಕ್ಷಣವೇ ಕಾಣಿಸಿಕೊಳ್ಳಬಹುದು. ಇದಿಷ್ಟೇ ಅಲ್ಲದೇ, ನರಮಂಡಲದ ಹಾನಿ ಹಾಗೂ ಉಸಿರಾಟದ ತೊಂದರೆಯೂ ಎದುರಾಗಬಹುದು.

ಅಸಲಿಮತ್ತುನಕಲಿಹಣ್ಣುಗುರುತಿಸುವುದುಹೇಗೆ?
ಮಾವಿನ ಹಣ್ಣು ಅತಿಯಾಗಿ ಅಥವಾ ಎಲ್ಲ ಕಡೆ ಒಂದೇ ಸಮನಾದ ಹಳದಿ ಬಣ್ಣವಿದ್ದರೆ ಅದು ರಾಸಾಯನಿಕ ಬಳಸಿ ಹಣ್ಣು ಮಾಡಿದ್ದಾಗಿರುವ ಸಾಧ್ಯತೆ ಹೆಚ್ಚು. ಹಣ್ಣಿನಿಂದ ನೈಸರ್ಗಿಕ ವಾಸನೆ ಬರುವ ಬದಲು ರಾಸಾಯನಿಕ ವಾಸನೆ ಬರುತ್ತಿದ್ದರೆ ಅದನ್ನು ಖರೀದಿಸಬೇಡಿ. ಹಣ್ಣನ್ನು ಬೇಕಿಂಗ್ ಸೋಡಾ ಮಿಶ್ರಿತ ನೀರಿನಲ್ಲಿ ತೊಳೆದಾಗ ಅನಿರೀಕ್ಷಿತವಾಗಿ ಬಣ್ಣ ಬದಲಾದರೂ ಅದನ್ನ ತಿನ್ನಲು ಹೋಗಬೇಡಿ. ಇನ್ನು 'ಆರ್ಗ್ಯಾನಿಕ್' ಎಂಬ ಲೇಬಲ್ ಅಡಿಯಲ್ಲಿ ಮಾರಾಟವಾಗುವ ಹಣ್ಣುಗಳ ಬಗ್ಗೆ ಸಹ ನೀವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಜನರ ಆರೋಗ್ಯದ ಜೊತೆ ಆಟ ಆಡುತ್ತಿರುವ ಈ ರೀತಿಯ ವ್ಯಾಪಾರಿಗಳ ವಿರುದ್ಧ ಹೈದರಾಬಾದ್ ಪೊಲೀಸ್ ಇಲಾಖೆಯ ವಿಶೇಷ ತಂಡ ಕಣ್ಣಿಟ್ಟಿದ್ದು, ಸಜ್ಜನರ್ ಅವರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬೆಂಗಳೂರಿನ ಪೊಲೀಸರು ಮತ್ತು ಆರೋಗ್ಯ ಇಲಾಖೆಯೂ ಇಂತಹ ಕಲಬೆರಕೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕಿದೆ. ನಿಮ್ಮ ಗಮನಕ್ಕೆ ರಾಸಾಯನಿಕಯುಕ್ತ ಹಣ್ಣುಗಳ ಮಾರಾಟ ಬಂದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

Dailyhunt
Disclaimer: This content has not been generated, created or edited by Dailyhunt. Publisher: Navasamaja