Dailyhunt
SHOCKING: ಸಚಿವರ ಸಭೆಗೆ ವಿಷದ ಬಾಟಲಿ ಜೊತೆ ಬಂದ ರೈತ, ಸಾಮೂಹಿಕ ಆತ್ಮಹ*ತ್ಯೆ ಬೆದರಿಕೆ!

SHOCKING: ಸಚಿವರ ಸಭೆಗೆ ವಿಷದ ಬಾಟಲಿ ಜೊತೆ ಬಂದ ರೈತ, ಸಾಮೂಹಿಕ ಆತ್ಮಹ*ತ್ಯೆ ಬೆದರಿಕೆ!

Navasamaja.com 1 week ago

ದೇವನಹಳ್ಳಿ: ತಮ್ಮ ಹಕ್ಕಿನ ಜಮೀನಿಗಾಗಿ ಕಳೆದ ದಶಕಗಳಿಂದ ಹೋರಾಡುತ್ತಿರುವ ರೈತರೊಬ್ಬರು, (Farmer) ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಚಿವರ ಸಮ್ಮುಖದಲ್ಲೇ ಆತ್ಮಹತ್ಯೆಯ (Sucide) ಎಚ್ಚರಿಕೆ (Warning) ನೀಡಿರುವ ಆತಂಕಕಾರಿ ಘಟನೆ ನಡೆದಿದೆ.

ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಈ ಘಟನೆ ನಡೆದಿದೆ. ಅಗಲಗುರ್ಕಿ ಗ್ರಾಮದ ನಿವಾಸಿ ಅಂಜಿನಪ್ಪ ಎಂಬ ರೈತರು, ಸಚಿವ ಕೆ.ಎಚ್. ಮುನಿಯಪ್ಪ ಅವರ ಮುಂದೆಯೇ ವಿಷದ ಬಾಟಲಿಯನ್ನು ಪ್ರದರ್ಶಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಆಂಜಿನಪ್ಪ ಅವರ 20 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ದೀರ್ಘಕಾಲದ ವ್ಯಾಜ್ಯವಿದ್ದು, ಈ ವಿಚಾರದಲ್ಲಿ ದೇವನಹಳ್ಳಿ ತಾಲೂಕು ಅಧಿಕಾರಿಗಳು ತಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಅಧಿಕಾರಿಗಳ ವಿಳಂಬ ಧೋರಣೆ ಹಾಗೂ ಕಿರುಕುಳದಿಂದ ಬೇಸತ್ತ ರೈತ, ಸಭೆಗೆ ವಿಷದ ಬಾಟಲಿ ಹಿಡಿದುಕೊಂಡೇ ಆಗಮಿಸಿದ್ದರು.

"ಮುಂಬರುವ ಅಂಬೇಡ್ಕರ್ ಜಯಂತಿಯ ಒಳಗಾಗಿ ನನ್ನ ಜಮೀನಿನ ವ್ಯಾಜ್ಯವನ್ನು ಬಗೆಹರಿಸದಿದ್ದರೆ, ನಾನು ಮತ್ತು ನನ್ನ ಇಡೀ ಕುಟುಂಬ ಸಾರ್ವಜನಿಕವಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ" ಎಂದು ಆಂಜಿನಪ್ಪ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದಾಗಲೇ ಈ ಬೆಳವಣಿಗೆ ನಡೆದಿದ್ದು, ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಸಚಿವರು ಕ್ಷಣಕಾಲ ಆತಂಕಕ್ಕೊಳಗಾದರು.

ನ್ಯಾಯಕ್ಕಾಗಿ ಅಲೆದು ಸುಸ್ತಾಗಿರುವ ರೈತನ ಈ ನಡೆ, ಜಿಲ್ಲಾಡಳಿತದ ಕಾರ್ಯವೈಖರಿಯ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂಓದಿ:ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆ!

Dailyhunt
Disclaimer: This content has not been generated, created or edited by Dailyhunt. Publisher: Navasamaja