Dailyhunt Logo
  • Light mode
    Follow system
    Dark mode
    • Play Story
    • App Story
SHOCKING: ಸರ್ಕಾರಿ ಉದ್ಯೋಗ ಸಿಗುತ್ತಿದ್ದಂತೆ ಪತಿ, ಮಗನನ್ನು ತೊರೆದ ಶಿಕ್ಷಕಿ!

SHOCKING: ಸರ್ಕಾರಿ ಉದ್ಯೋಗ ಸಿಗುತ್ತಿದ್ದಂತೆ ಪತಿ, ಮಗನನ್ನು ತೊರೆದ ಶಿಕ್ಷಕಿ!

Navasamaja.com 4 months ago

ಬಿಹಾರ: ಹೆಂಡತಿ ಓದಿ ದೊಡ್ಡ ಅಧಿಕಾರಿಯಾಗಲಿ, ಅವಳ ಕನಸು ನನಸಾಗಲಿ ಎಂದು ತನ್ನ ಪೂರ್ವಜರ ಆಸ್ತಿಯನ್ನೇ ಮಾರಿ, ಹಗಲಿರುಳು ಕೂಲಿ ಕೆಲಸ ಮಾಡಿ ಓದಿಸಿದ ಪತಿಗೆ (Husband) ಈಗ ಬಿಗ್ ಶಾಕ್ ಎದುರಾಗಿದೆ. ಬಿಹಾರ (Bihar) ಸಾರ್ವಜನಿಕ ಸೇವಾ ಆಯೋಗದ (BPSC) ಪರೀಕ್ಷೆ ಪಾಸ್ ಮಾಡಿ ಸರ್ಕಾರಿ ಶಿಕ್ಷಕಿಯಾಗಿ (Government Teacher) ನೇಮಕಗೊಂಡ ಮಹಿಳೆಯೊಬ್ಬ ಳು (Women), ತನಗೆ ಉದ್ಯೋಗ ಸಿಗುತ್ತಿದ್ದಂತೆ ಪತಿ ಹಾಗೂ 10 ವರ್ಷದ ಹೆತ್ತ ಮಗನನ್ನು ತೊರೆದು ಹೋಗಿರುವ ಘಟನೆ ಬಿಹಾರದ ಹಾಜಿಪುರದಲ್ಲಿ ಬೆಳಕಿಗೆ ಬಂದಿ ದೆ .

ಸಂತ್ರಸ್ತ ಪತಿ ಅಮನ್ ಕುಮಾರ್ ಮತ್ತು ಗುಂಜನ್ ಕುಮಾರಿ ಅವರ ವಿವಾಹ 2013 ರಲ್ಲಿ ನಡೆದಿತ್ತು. ದಂಪತಿಗೆ ಆರುಷ್ ಆರ್ಯ ಎಂಬ 10 ವರ್ಷದ ಮಗನಿದ್ದಾನೆ. ಮದುವೆಯಾಗುವಾಗ ಗುಂಜನ್ ಕೇವಲ ದ್ವಿತೀಯ ಪಿಯುಸಿ (ಇಂಟರ್‌ಮೀಡಿಯೇಟ್) ಓದಿದ್ದರು. ಆದರೆ ತನಗೆ ಶಿಕ್ಷಕಿಯಾಗಬೇಕು ಎಂಬ ದೊಡ್ಡ ಆಸೆ ಇದೆ ಎಂದು ಪತಿಯ ಬಳಿ ಹೇಳಿಕೊಂಡಿದ್ದರು. ಅಪ್ರತಿಮ ಆರ್ಥಿಕ ಸಂಕಷ್ಟಗಳಿದ್ದರೂ ಪತ್ನಿಯ ಆಸೆಗೆ ಬೆಂಬಲ ನೀಡಲು ನಿರ್ಧರಿಸಿದ ಅಮನ್, ಹಗಲಿರುಳು ಕೂಲಿ ಕೆಲಸ ಮಾಡಿ ಆಕೆಯನ್ನು ಓದಿಸಿದ. ಅಷ್ಟೇ ಅಲ್ಲದೆ, 2022ರಲ್ಲಿ ಪತ್ನಿಯ ಉನ್ನತ ಶಿಕ್ಷಣ ಹಾಗೂ ಪರೀಕ್ಷಾ ಸಿದ್ಧತೆಗೆ ಭಾರಿ ಹಣದ ಅಗತ್ಯ ಬಿದ್ದಾಗ, ಅಮನ್ ಕಿಂಚಿತ್ತೂ ಯೋಚಿಸದೆ ತಮ್ಮ ಪಾಲಿನ ಒಂದೂವರೆ 'ಕಠಾ' (Kattha) ವಿಸ್ತೀರ್ಣದ ಪೂರ್ವಜರ ಜಮೀನನ್ನೇ ಮಾರಿ ಹಣ ಹೊಂದಿಸಿದ.

ಪತಿಯ ಪರಿಶ್ರಮ ಮತ್ತು ತ್ಯಾಗದ ಫಲವಾಗಿ ಗುಂಜನ್ ಪದವಿ ಹಾಗೂ ಬಿ.ಇಡಿ (B.Ed) ಕೋರ್ಸ್‌ಗಳನ್ನು ಯಶಸ್ವಿಯಾಗಿ ಮುಗಿಸಿದರು. ಬಳಿಕ ಬಿಪಿಎಸ್‌ಸಿ ನಡೆಸಿದ ಕಠಿಣ ಶಿಕ್ಷಕರ ನೇಮಕಾತಿ ಪರೀಕ್ಷೆಗೂ (TRE-02) ಸಿದ್ಧತೆ ನಡೆಸಿ, ಕೊನೆಗೂ 6 ರಿಂದ 8ನೇ ತರಗತಿಯವರೆಗಿನ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾದಳು. ಸುಪೌಲ್ ಜಿಲ್ಲೆಯ ತ್ರಿವೇಣಿಗಂಜ್‌ನಲ್ಲಿ ತರಬೇತಿ ಮುಗಿಸಿದ ಆಕೆಗೆ, ಬಿಹಾರದ ಬಿದುಪುರ್ ಬ್ಲಾಕ್‌ನ ಶಾಲೆಯೊಂದರಲ್ಲಿ ಪೋಸ್ಟಿಂಗ್ ಕೂಡ ಸಿಕ್ಕಿತು.

ಕೆಲಸ ಸಿಗುತ್ತಿದ್ದಂತೆ ಕಾಲೇಜು ಸ್ನೇಹಿತನೊಂದಿಗೆ ಸಂಬಂಧ?

ಟ್ವಿಸ್ಟ್ ಸಿಗುವುದೇ ಇಲ್ಲಿ! ತರಬೇತಿ ಅವಧಿಯಲ್ಲಿ ಗುಂಜನ್, ಅದೇ ನೇಮಕಾತಿ ಪ್ರಕ್ರಿಯೆಯಲ್ಲೇ ಶಿಕ್ಷಕನಾಗಿ ಆಯ್ಕೆಯಾಗಿದ್ದ ತನ್ನ ಹಳೆಯ ಕಾಲೇಜು ಸ್ನೇಹಿತ ಪ್ರೇಮ್ ಪ್ರಕಾಶ್ ಜೈಸ್ವಾಲ್ ಎಂಬಾತನಿಗೆ ಹತ್ತಿರವಾಗಿದ್ದಾಳೆ ಎಂದು ಪತಿ ಅಮನ್ ಗಂಭೀರವಾಗಿ ಆರೋಪಿಸಿದ್ದಾನೆ. ಅವರಿಬ್ಬರೂ ನಿರಂತರ ಸಂಪರ್ಕದಲ್ಲಿದ್ದು, ತರಬೇತಿಯ ಸಮಯದಲ್ಲಿ ಪದೇ ಪದೇ ರಹಸ್ಯವಾಗಿ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.

ನನ್ನ ಇಡೀ ಜೀವನವನ್ನೇ ಪಣಕ್ಕಿಟ್ಟು, ಆಸ್ತಿ ಮಾರಿ ಆಕೆಯನ್ನು ಓದಿಸಿದೆ. ಆದರೆ ಇಂದು ಕೈತುಂಬಾ ಸಂಬಳ ಬರುವ ಸರ್ಕಾರಿ ಕೆಲಸ ಸಿಗುತ್ತಿದ್ದಂತೆ, ನನ್ನೊಂದಿಗೆ ಇದ್ದ ಎಲ್ಲಾ ಸಂಬಂಧಗಳನ್ನು ಕಳೆದುಕೊಂಡು, ತನ್ನನ್ನು ನಂಬಿದ್ದ 10 ವರ್ಷದ ಮಗನನ್ನೂ ಬೀದಿಗೆ ತಳ್ಳಿ ಆಕೆ ಬೇರೆಯವನೊಂದಿಗೆ ಹೋಗಿದ್ದಾಳೆ ಎಂದು ಪತಿ ಕಣ್ಣೀರು ಹಾಕಿದ್ದಾನೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja