Dailyhunt Logo
  • Light mode
    Follow system
    Dark mode
    • Play Story
    • App Story
SHOCKING: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಕೂದಲೆಳೆ ಅಂತರದಲ್ಲಿ ಪಾರಾದ ಸೆಕ್ಯುರಿಟಿ ಗಾರ್ಡ್! -VIDEO

SHOCKING: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಕೂದಲೆಳೆ ಅಂತರದಲ್ಲಿ ಪಾರಾದ ಸೆಕ್ಯುರಿಟಿ ಗಾರ್ಡ್! -VIDEO

Navasamaja.com 2 weeks ago

ಕೇರಳ : ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ (Electric Pole) ಡಿಕ್ಕಿ ಹೊಡೆದ ಪರಿಣಾಮ, ಸಮೀಪದಲ್ಲೇ ಕುಳಿತಿದ್ದ ಸೆಕ್ಯುರಿಟಿ ಗಾರ್ಡ್‌ (Security Guard) ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಕೇರಳದ ಕೋಯಿಕ್ಕೋಡ್ (Kadiyangad) ಜಿಲ್ಲೆಯ ಕಡಿಯಂಗಾಡ್‌ನಲ್ಲಿ ನಡೆದಿದೆ.

ಆಗಸ್ಟ್‌ 26ರಂದು ಕಡಿಯಂಗಾಡ್‌ನ ಕೆಫೆ ರೆಸ್ಟೋ ಹೋಟೆಲ್‌ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಿಳಿ ಬಣ್ಣದ ಕಾರೊಂದು ಏಕಾಏಕಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ನುಗ್ಗಿದೆ. ಈ ವೇಳೆ ಅಲ್ಲಿದ್ದ ವಿದ್ಯುತ್‌ ಕಂಬಕ್ಕೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ.

ಕಾರು ಬರುತ್ತಿರುವುದನ್ನು ಗಮನಿಸಿದ ಸೆಕ್ಯುರಿಟಿ ಗಾರ್ಡ್‌ ಅಪಾಯವನ್ನು ಅರಿತು ತಕ್ಷಣ ಅಲ್ಲಿಂದ ದೂರಕ್ಕೆ ಜಿಗಿದಿದ್ದಾರೆ. ವಿದ್ಯುತ್‌ ಕಂಬವು ಕಾರಿನ ಹೊಡೆತವನ್ನು ತಡೆದಿದ್ದರಿಂದ ಗಾರ್ಡ್‌ಗೆ ಗಂಭೀರ ಅಪಾಯ ತಪ್ಪಿದೆ.

ಕಾರು ನಿಯಂತ್ರಣ ತಪ್ಪಲು ನಿಖರ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja