Dailyhunt Logo
  • Light mode
    Follow system
    Dark mode
    • Play Story
    • App Story
SIR: ಅಂಗನವಾಡಿ, ಖಾಸಗಿ ಕಚೇರಿಗಳಲ್ಲಿ SIR - ನಿಯಮ ಚಿಂದಿ ಉಡಾಯಿಸುತ್ತಿರುವ ಬಿಎಲ್‌ಒಗಳು!

SIR: ಅಂಗನವಾಡಿ, ಖಾಸಗಿ ಕಚೇರಿಗಳಲ್ಲಿ SIR - ನಿಯಮ ಚಿಂದಿ ಉಡಾಯಿಸುತ್ತಿರುವ ಬಿಎಲ್‌ಒಗಳು!

Navasamaja.com 4 months ago

ಬೆಂಗಳೂರು/ಕೋಲಾರ: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿವಾದ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ರಾಮನಗರ ಮತ್ತು ಜಯನಗರದ ಬೆನ್ನಲ್ಲೇ, ಈಗ ಕೋಲಾರ(Kolar) ಹಾಗೂ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲೂ ಬೂತ್ ಮಟ್ಟದ ಅಧಿಕಾರಿಗಳು (BLO) ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಲಾರ: ಸಮುದಾಯ ಭವನ, ಅಂಗನವಾಡಿಗಳಲ್ಲೇ ಬಿಡಾರ!
ಕೋಲಾರ ನಗರದ ಬಹುತೇಕ ಬಡಾವಣೆಗಳಲ್ಲಿ ಕಳೆದ ಎರಡು ದಿನಗಳಿಂದ ಈ ವಿಶೇಷ ಸರ್ವೆ ಕಾರ್ಯ ಭರದಿಂದ ಸಾಗುತ್ತಿದೆ. ನಿಯಮಗಳ ಪ್ರಕಾರ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ಹೋಗಿ ಪರಿಶೀಲನೆ ನಡೆಸಬೇಕು. ಆದರೆ, ಇಲ್ಲಿನ ಬಿಎಲ್‌ಒಗಳು ಮನೆ ಮನೆಗೆ ತೆರಳುವ ಬದಲು ಬಡಾವಣೆಯ ಪ್ರಮುಖ ಜಾಗಗಳಾದ ಸ್ಥಳೀಯ ಶಾಲೆಗಳು, ಸಮುದಾಯ ಭವನಗಳು, ಅರಳಿ ಕಟ್ಟೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಸಾರ್ವಜನಿಕರನ್ನೇ ತಾವಿದ್ದ ಜಾಗಕ್ಕೆ ಕರೆಸಿಕೊಂಡು ಅರ್ಜಿ ಭರ್ತಿ ಮಾಡುವ ಕೆಲಸ ಮಾಡುತ್ತಿರುವುದು ಈಗ ದೊಡ್ಡ ವಿವಾದ ಸೃಷ್ಟಿಸಿದೆ.

ಬಿಟಿಎಂ ಲೇಔಟ್: ಖಾಸಗಿ ಕಚೇರಿಯಲ್ಲಿ 'ಜನಜಾತ್ರೆ', ಸಾರ್ವಜನಿಕರ ಆಕ್ರೋಶಕ್ಕೆ ಓಡಿದ ಅಧಿಕಾರಿಗಳು!
ಇತ್ತ ರಾಜಧಾನಿ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಅಧಿಕಾರಿಗಳ ಅತಿರೇಕದ ವರ್ತನೆ ಬೆಳಕಿಗೆ ಬಂದಿದೆ. ಇಲ್ಲಿನ ಬಿಎಲ್‌ಒಗಳು ನಿಯಮಗಳನ್ನು ಮರೆತು ಖಾಸಗಿ ಕಚೇರಿಗಳು ಮತ್ತು ಧಾರ್ಮಿಕ ಕೇಂದ್ರಗಳ ಮುಂದೆ ಟೇಬಲ್ ಹಾಕಿಕೊಂಡು ಸಾಮೂಹಿಕವಾಗಿ ಪ್ರಕ್ರಿಯೆ ನಡೆಸಿದ್ದಾರೆ.

ಖಾಸಗಿ ಜಾಗದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಇಡೀ ಏರಿಯಾದ ಜನರು ಒಂದೇ ಕಡೆ ಸಾಮೂಹಿಕವಾಗಿ ಜಮಾಯಿಸಿದ್ದು, ಅಲ್ಲಿ ಜನಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಖಾಸಗಿ ಜಾಗದಲ್ಲಿ ಸಾಂವಿಧಾನಿಕ ಚುನಾವಣಾ ಪ್ರಕ್ರಿಯೆ ನಡೆಸುತ್ತಿರುವುದಕ್ಕೆ ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮುಗಿಬಿದ್ದಿದ್ದಾರೆ. ಸಾರ್ವಜನಿಕರ ವಿರೋಧ ಮತ್ತು ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಬಿಎಲ್‌ಒಗಳು ಸ್ಥಳದಿಂದ ತರಾತುರಿಯಲ್ಲಿ ಕಾಲ್ಕಿತ್ತಿದ್ದಾರೆ.

ಬಿಎಲ್‌ಒಗಳು ಮನೆ ಮನೆಗೆ ಹೋಗದೆ ಈ ರೀತಿ ಖಾಸಗಿ ಮತ್ತು ಧಾರ್ಮಿಕ ಕೇಂದ್ರಗಳನ್ನು ಬಳಸಿಕೊಳ್ಳುತ್ತಿರುವುದು ಪಾರದರ್ಶಕ ಮತಪಟ್ಟಿ ಪರಿಷ್ಕರಣೆಗೆ ಅಧಿಕಾರಿಗಳೇ ಅಡ್ಡಿಪಡಿಸುತ್ತಿದ್ದಾರಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja