Dailyhunt Logo
  • Light mode
    Follow system
    Dark mode
    • Play Story
    • App Story
SIR: ಬಾಂಗ್ಲಾ ವಲಸಿಗರಿಗೆ ಕರ್ನಾಟಕದ ವೋಟರ್ ಲಿಸ್ಟ್‌ನಲ್ಲಿ ಸ್ಥಾನ: ಶೋಭಾ ಕರಂದ್ಲಾಜೆ ಕಿಡಿ

SIR: ಬಾಂಗ್ಲಾ ವಲಸಿಗರಿಗೆ ಕರ್ನಾಟಕದ ವೋಟರ್ ಲಿಸ್ಟ್‌ನಲ್ಲಿ ಸ್ಥಾನ: ಶೋಭಾ ಕರಂದ್ಲಾಜೆ ಕಿಡಿ

Navasamaja.com 1 week ago

ಬೆಂಗಳೂರು: ಕರ್ನಾಟಕದಲ್ಲಿ (Karnataka) ಮುಂಬರುವ ಚುನಾವಣೆಗಳನ್ನು (Election) ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಅಕ್ರಮವಾಗಿ ಮತದಾರರ (Voter) ಪಟ್ಟಿ ಸಿದ್ಧಪಡಿಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (shobha karandlaje) ಅವರು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮಗಳನ್ನು ತಡೆಯುವಂತೆ ಆಗ್ರಹಿಸಿ ಈಗಾಗಲೇ ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ಪತ್ರಗಳನ್ನು ಬರೆದಿದ್ದೇನೆ. ಜಿಬಿಎನ 27 ವಾರ್ಡ್‌ ಗಳಲ್ಲಿ ಎರಡೆರಡು ಎಸ್‌‍ಐಆರ್‌ ನಡೆಯುತ್ತಿದೆ. ರಾಹುಲ್‌ ಗಾಂಧಿ ಅವರನ್ನು ತೃಪ್ತಿಪಡಿಸಲು ಕಾಂಗ್ರೆಸ್‌‍ ಈ ಕೆಲಸ ಮಾಡುತ್ತಿದೆ. ರಾಜ್ಯ ಚುನಾವಣಾ ಆಯೋಗ ಇನ್ನೊಂದು ಎಸ್‌‍ಐಆರ್‌ (SIR) ಮಾಡುತ್ತಿದೆ. ತಕ್ಷಣ ಇದನ್ನು ನಿಲ್ಲಿಸಲು ಪತ್ರದಲ್ಲಿ ಕೋರಿದ್ದೇನೆ. ಪಶ್ಚಿಮ ಬಂಗಾಳದಿಂದ ಹೊರಹಾಕಲ್ಪಟ್ಟ ಸಾವಿರಾರು ಬಾಂಗ್ಲಾದೇಶಿ ಅಲ್ಪಸಂಖ್ಯಾತರು ಕರ್ನಾಟಕದಲ್ಲಿ ಆಶ್ರಯ ಪಡೆದಿದ್ದಾರೆ ಎಂದಿದ್ದಾರೆ.

8 ವರ್ಷಗಳ ಹಿಂದೆ ರೈಲಿನಲ್ಲಿ ಯುವಕರನ್ನು ವೋಟ್‌ ಹಾಕಿಸಲು ಕರೆತಂದಿದ್ದರು. ಆ ಅಕ್ರಮ ಬಾಂಗ್ಲಾದೇಶಿ ಮತದಾರರನ್ನು ಸಕ್ರಮ ಮಾಡಲು ಕಾಂಗ್ರೆಸ್‌‍ ಮುಂದಾಗಿದೆ. ಕಾಂಗ್ರೆಸ್‌‍ ನಾಯಕರ ಮೌಖಿಕ ಆದೇಶದ ಮೇಲೆ ಇಂತಹವರನ್ನ ವೋಟರ್‌ ಲೀಸ್ಟ್‌ನಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ. ನಿಯಮಾವಳಿಗಳ ಪ್ರಕಾರ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆದರೆ, ಪ್ರಸ್ತುತ ಮಸೀದಿಗಳಲ್ಲಿ ಎನ್ಯುಮರೇಷನ್ ಫಾರಂಗಳನ್ನು ಹಂಚಲಾಗುತ್ತಿದ್ದು, ಅವರಿಗೆ ನಕಲಿ ವಿಳಾಸ ಮತ್ತು ಮನೆ ನಂಬರ್‌ಗಳನ್ನು ಸೃಷ್ಟಿಸಿ ನೀಡಲಾಗುತ್ತಿದೆ.

ಸೈಬರ್ ಕೇಂದ್ರಗಳ ಮೂಲಕ ನಕಲಿ ಜನನ ಪ್ರಮಾಣಪತ್ರಗಳನ್ನು ಸೃಷ್ಟಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಶಾಶ್ವತ ನಿವಾಸಿ ದೃಢೀಕರಣ ಪತ್ರಗಳನ್ನು ನೀಡುವ ಮೂಲಕ ಅಕ್ರಮ ಮತದಾರರನ್ನು ಸಕ್ರಮಗೊಳಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಬಿಎಲ್‌ಒಗಳಿಗೆ ಯಾವುದೇ ಸೂಕ್ತ ತರಬೇತಿ ನೀಡಿಲ್ಲ. ಕೇವಲ ಕಾಂಗ್ರೆಸ್‌ನ ಬಿಎಲ್‌ಎಗಳ ಸಮ್ಮುಖದಲ್ಲಿ 27 ವಾರ್ಡ್‌ಗಳಲ್ಲಿ ಎರಡೆರಡು ಎಸ್‌ಐಆರ್ ಪ್ರಕ್ರಿಯೆಗಳು ನಡೆಯುತ್ತಿವೆ. ಇದು ಸಂಪೂರ್ಣವಾಗಿ ಚುನಾವಣಾ ಆಯೋಗದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಈಗ ಆಗಿರುವ ಎಸ್‌‍ಐಆರ್‌ ಮರುಪರಿಶೀಲನೆ ಆಗಬೇಕು. ಸಿಎಂ ಆದೇಶದಂತೆ ಅಕ್ರಮ ಮತದಾರರನ್ನು ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಬಿಎಲ್‌ಓಗಳಿಗೆ ಸರಿಯಾದ ತರಬೇತಿ ಕೊಟ್ಟಿಲ್ಲ. ಕೇವಲ ಕಾಂಗ್ರೆಸ್‌‍ನ ಬಿಎಲ್‌ಎಗಳ ಮುಂದೆ ಎಸ್‌‍ಐಆರ್‌ ಆಗುತ್ತಿದೆ. ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ನಾನು ಈ ನಿಟ್ಟಿನಲ್ಲಿ ಪತ್ರ ಬರೆದಿದ್ದೇನೆ.ಕೇಂದ್ರ ಚುನಾವಣಾ ಆಯೋಗ ಹೇಗೆ ಪರಿಗಣಿಸುತ್ತದೆಯೋ ನೋಡಬೇಕು. ನ್ಯಾಯಾಲಯಕ್ಕೂ ಹೋಗುವ ಬಗ್ಗೆ ನಾವು ತೀರ್ಮಾನ ಮಾಡಿದ್ದೇವೆ. ಅಲ್ಪಸಂಖ್ಯಾತರು ಯಾರು ಈ ರಾಜ್ಯದವರು ಇದ್ದಾರೋ ಅವರು ಸೇರುವ ಬಗ್ಗೆ ನಮ ತಕರಾರು ಇಲ್ಲ. ಆದರೆ ಅಕ್ರಮವಾಗಿರುವವರನ್ನು ಸಕ್ರಮ ಮಾಡುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಸದ್ಯ ನಡೆದಿರುವ ಮತದಾರರ ಪಟ್ಟಿ ಪರಿಶೀಲನಾ ಪ್ರಕ್ರಿಯೆಯನ್ನು (ಎಸ್‌ಐಆರ್) ತಕ್ಷಣವೇ ಸ್ಥಗಿತಗೊಳಿಸಿ, ಮರುಪರಿಶೀಲನೆ ನಡೆಸಲು ಕೇಂದ್ರ ಚುನಾವಣಾ ಆಯೋಗವು ಮಧ್ಯಪ್ರವೇಶಿಸಬೇಕು ಎಂದಿದ್ದಾರೆ.

: SEEMANTH KUMAR: ಕರ್ತವ್ಯ ಲೋಪ ಎಸಗಿದರೆ ಅಮಾನತು ಫಿಕ್ಸ್: ಪೊಲೀಸ್ ಸಿಬ್ಬಂದಿಗೆ ಕಮಿಷನರ್ ಎಚ್ಚರಿಕೆ

Dailyhunt
Disclaimer: This content has not been generated, created or edited by Dailyhunt. Publisher: Navasamaja