Dailyhunt Logo
  • Light mode
    Follow system
    Dark mode
    • Play Story
    • App Story
SIR : ರಾಜ್ಯದಲ್ಲಿ ಶೇ.80 ಎಸ್.ಐ.ಆರ್ ಅರ್ಜಿ ವಿತರಣೆ ಪೂರ್ಣ - ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ

SIR : ರಾಜ್ಯದಲ್ಲಿ ಶೇ.80 ಎಸ್.ಐ.ಆರ್ ಅರ್ಜಿ ವಿತರಣೆ ಪೂರ್ಣ - ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ

Navasamaja.com 1 week ago

ಬೆಂಗಳೂರು: ರಾಜ್ಯಾದ್ಯಂತ ಸದ್ಯ ಮತಪಟ್ಟಿ ಸಮಗ್ರ ಪರಿಷ್ಕರಣಾ ಪ್ರಕ್ರಿಯೆ (SIR) ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿದ್ದು, ಒಟ್ಟು 5.54 ಕೋಟಿಗೂ ಅಧಿಕ ನಾಗರಿಕರಿಗೆ ಅರ್ಜಿಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ. ಈ ಪೈಕಿ ಈಗಾಗಲೇ ಸುಮಾರು ಶೇಕಡಾ 80.85 ರಷ್ಟು ವಿತರಣಾ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (Chief election officer) ಅನ್ಭುಕುಮಾರ್ (Anbukkumar) ಅವರು ಪ್ರಕಟಿಸಿದ್ದಾರೆ.

ಈ ಮಹತ್ವದ ಅಭಿಯಾನ ಜುಲೈ 29 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಅವರು ಕೋರಿದ್ದಾರೆ.

ಇನ್ನು ಅರ್ಜಿಗಳನ್ನು ಕಡ್ಡಾಯವಾಗಿ ಮನೆ ಮನೆಗೆ ಭೇಟಿ ನೀಡಿ ವಿತರಿಸಬೇಕೇ ಹೊರತು ಯಾವುದೇ ಕಾರಣಕ್ಕೂ ಸಾರಾಸಗಟಾಗಿ ಒಂದೇ ಸ್ಥಳದಲ್ಲಿ ಒಟ್ಟಿಗೆ ನೀಡುವಂತಿಲ್ಲ ಎಂದು ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದ್ದು, ಇಂಟರ್ನೆಟ್ ಮೂಲಕ ನೋಂದಾಯಿಸಿದರೆ ಅದು ನೇರವಾಗಿ ಬಿಎಲ್‌ಒ ಲಾಗಿನ್‌ಗೆ ವರ್ಗಾವಣೆಯಾಗುವುದರಿಂದ ಮತ್ತೆ ಭೌತಿಕವಾಗಿ ಫಾರಂ ತುಂಬಿ ಕೊಡುವ ಅಗತ್ಯವಿರುವುದಿಲ್ಲ. ಹಿಂದೆ ಹೆಸರು ಬಿಟ್ಟುಹೋಗಿದ್ದರೂ ಸಹ ಈಗ ಹೊಸದಾಗಿ ಮತ್ತೊಮ್ಮೆ ವಿವರಗಳನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಮತದಾರರ ಚೀಟಿಯಲ್ಲಿ ಹೆಸರು ಅಥವಾ ವಿಳಾಸ ತಿದ್ದುಪಡಿ ಮಾಡಬೇಕಿದ್ದಲ್ಲಿ ಅರ್ಜಿ ನಮೂನೆ 8 ಅನ್ನು ಬಳಸಬೇಕಾಗಿದ್ದು, ಇದನ್ನು ಜುಲೈ 29 ರೊಳಗೆ ಅಥವಾ ಆಗಸ್ಟ್ 5 ರ ನಂತರ ಸಲ್ಲಿಸಬಹುದಾಗಿದೆ. ಇದೇ ವೇಳೆ, 2026 ರ ಅಕ್ಟೋಬರ್ 1 ರ ಅನ್ವಯ 18 ವರ್ಷ ವಯಸ್ಸು ಪೂರ್ಣಗೊಳ್ಳುವ ನೂತನ ಯುವ ಮತದಾರರು ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಫಾರಂ ಸಂಖ್ಯೆ 6 ರ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಬಿಎಲ್‌ಒ ವ್ಯಾಪ್ತಿಯಲ್ಲಿ ಸೂಕ್ತ ಸಂಖ್ಯೆಯ ಅರ್ಜಿಗಳನ್ನು ಲಭ್ಯವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja