Dailyhunt Logo
  • Light mode
    Follow system
    Dark mode
    • Play Story
    • App Story
SONAM WANGCHUK :  ಘಜಿನಿ ಥರಾ ಮೆಮೋರಿ ಲಾಸ್‌ ಆಗಿರಬೇಕು - ನಾವು ಭೇಟಿಯೇ ಆಗಿರಲಿಲ್ಲ ಎಂದ ಅಮೀರ್‌ ಖಾನ್‌ ಗೆ ವಾಂಗ್ಚುಕ್‌ ಕೌಂಟರ್‌!

SONAM WANGCHUK : ಘಜಿನಿ ಥರಾ ಮೆಮೋರಿ ಲಾಸ್‌ ಆಗಿರಬೇಕು - ನಾವು ಭೇಟಿಯೇ ಆಗಿರಲಿಲ್ಲ ಎಂದ ಅಮೀರ್‌ ಖಾನ್‌ ಗೆ ವಾಂಗ್ಚುಕ್‌ ಕೌಂಟರ್‌!

Navasamaja.com 2 weeks ago

ಮುಂಬೈ : ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ '3 Idiots' ಚಿತ್ರದ ಪ್ರಖ್ಯಾತ ಪಾತ್ರ 'ಫುನ್ಸುಖ್ ವಾಂಗ್ಡು' ತನ್ನ ಜೀವನದಿಂದ ಪ್ರೇರಿತಗೊಂಡಿದ್ದಲ್ಲ ಮತ್ತು ಆ ಸಿನಿಮಾ ಮಾಡುವ ಸಮಯದಲ್ಲಿ ತಮಗೆ ಲಡಾಖ್‌ನ ಪರಿಸರ ಪ್ರೇಮಿ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ (Sonam Wangchuk) ಅವರ ಪರಿಚಯವೇ ಇರಲಿಲ್ಲ ಎಂಬ ನಟ ಅಮಿರ್ ಖಾನ್ (Aamir Khan) ಅವರ ಹೇಳಿಕೆಗೆ ಸೋನಮ್ ವಾಂಗ್‌ಚುಕ್ ಅತ್ಯಂತ ತೀಕ್ಷ್ಣ ಹಾಗೂ ಹಾಸ್ಯಸ್ಪದ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಆಮಿರ್ ಖಾನ್‌ಗೆ 'ಶಾರ್ಟ್ ಟರ್ಮ್ ಮೆಮೊರಿ ಲಾಸ್' (ತಾತ್ಕಾಲಿಕ ನೆನಪಿನ ಶಕ್ತಿ ನಷ್ಟ) ಆಗಿರಬೇಕು ಎಂದು ಉಲ್ಲೇಖಿಸಿ, ಆಮಿರ್ ಅಭಿನಯದ ಪ್ರಸಿದ್ಧ 'ಗಜನಿ' ಚಿತ್ರದ ಸಿದ್ಧಾಂತವನ್ನು ಬಳಸಿ ಕಾಲೆಳೆದಿದ್ದಾರೆ.

ಸಂದರ್ಶನವೊಂದರಲ್ಲಿ ಈ ವಿಷಯವಾಗಿ ಮಾತನಾಡಿದ ಸೋನಮ್ ವಾಂಗ್‌ಚುಕ್, 2008 ರಲ್ಲೇ ಅಂದರೆ '3 Idiots' ಸಿನಿಮಾ ತೆರೆಕಾಣುವುದಕ್ಕೂ ಒಂದು ವರ್ಷ ಮುಂಚೆಯೇ ತಾವು ಆಮಿರ್ ಖಾನ್ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಹೆಮ್ಮೆಯ ಸನ್ಮಾನ ಸಮಾರಂಭವೊಂದರಲ್ಲಿ ತಮಗೆ ಪ್ರಶಸ್ತಿ ನೀಡಿದಾಗ ಆಮಿರ್ ಖಾನ್ ಕಾರ್ಯಕ್ರಮದಲ್ಲಿದ್ದರು, ತಮ್ಮ ಸಾಧನೆಯ ವಿಡಿಯೋವನ್ನು ವೀಕ್ಷಿಸಿದ್ದರು ಹಾಗೂ ತಾವು ಸಿಯಾಚಿನ್ ಗಡಿ ಸಮಸ್ಯೆಯ ಕುರಿತು ಸಿನಿಮಾ ಮಾಡುವ ಆಲೋಚನೆಯನ್ನು ಆಮಿರ್ ಜೊತೆ ಹಂಚಿಕೊಂಡಿದ್ದಾಗಿ ವಾಂಗ್‌ಚುಕ್ ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲದೆ, 2009 ರಲ್ಲಿ '3 Idiots' ಚಿತ್ರೀಕರಣದ ತಂಡವು ಲಡಾಖ್‌ನ ತಮ್ಮ ಶಾಲೆಗೆ ಬಂದಿದ್ದ ಘಟನೆಯನ್ನೂ ವಾಂಗ್‌ಚುಕ್ ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಚಿತ್ರೀಕರಣದ ತಂಡವು ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳನ್ನು ತರಲು ಯೋಜಿಸಿದ್ದರಿಂದ ಪರಿಸರ ಕಾಳಜಿಯಿಂದ ತಮ್ಮ ಶಾಲೆಯ ಆಡಳಿತ ಮಂಡಳಿಯು ಶೂಟಿಂಗ್‌ಗೆ ಅನುಮತಿ ನಿರಾಕರಿಸಿತ್ತು. ನಂತರ ಅವರು ಬೇರೊಂದು ಹತ್ತಿರದ ಶಾಲೆಯಲ್ಲಿ ಚಿತ್ರೀಕರಣ ನಡೆಸಿದ್ದರು. ಹೀಗಿದ್ದಾಗ ಆಮಿರ್ ಖಾನ್ ಅವರಿಗೆ ತಮ್ಮ ಪರಿಚಯವೇ ಇರಲಿಲ್ಲ ಎನ್ನುವುದು ನಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಗಜನಿ ಸಿದ್ಧಾಂತದ ತಮಾಷೆಯ ಕೌಂಟರ್ ನೀಡಿದ ವಾಂಗ್‌ಚುಕ್, "ಬಹುಶಃ ಆಮಿರ್ ಖಾನ್ ಅವರಿಗೆ ತಮ್ಮ ಗಜನಿ ಚಿತ್ರದ ಪಾತ್ರದಂತೆ ನೆನಪಿನ ಶಕ್ತಿ ಕಡಿಮೆಯಾಗಿರಬಹುದು, ಅದಕ್ಕೆ ಅವರು ಭೇಟಿಯಾಗಿದ್ದನ್ನೇ ಮರೆತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.

ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಮಿರ್ ಖಾನ್ ಅವರು, ತಮ್ಮ '3 Idiots' ಚಿತ್ರದ ಪಾತ್ರ ಹಾಗೂ ವಾಂಗ್‌ಚುಕ್ ಅವರ ಜೀವನಕ್ಕೆ ಯಾವುದೇ ಸಂಬಂಧವಿಲ್ಲ, ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಹಾಗೂ ಬರಹಗಾರ ಅಭಿಸಾತ್ ಜೋಶಿಗೂ ಸಿನಿಮಾ ಮಾಡುವಾಗ ವಾಂಗ್‌ಚುಕ್ ಪರಿಚಯವಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ವಾಂಗ್‌ಚುಕ್ ಅವರು ಈ ಹಳೆಯ ವಿಡಿಯೋ ಸಾಕ್ಷ್ಯಗಳು ಹಾಗೂ ಘಟನೆಗಳನ್ನು ಹೊರಹಾಕುವ ಮೂಲಕ ಆಮಿರ್ ಖಾನ್ ಅವರ ವಾದವನ್ನು ತಳ್ಳಿಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭಾರಿ ಸಂಚಲನ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja