Dailyhunt
SPORTS : ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಡೋಪಿಂಗ್ ಕಳಂಕ: ಭಾರತಕ್ಕೆ ಮೊದಲ ಸ್ಥಾನ

SPORTS : ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಡೋಪಿಂಗ್ ಕಳಂಕ: ಭಾರತಕ್ಕೆ ಮೊದಲ ಸ್ಥಾನ

Navasamaja.com 3 weeks ago

ವದೆಹಲಿ: ವಿಶ್ವ ಅಥ್ಲೆಟಿಕ್ಸ್‌ನ (Athletics) ಉದ್ದೀಪನ ಮದ್ದು ಸೇವನೆ (Doping) ಪ್ರಕರಣಗಳಲ್ಲಿ ಭಾರತ (India) ಈಗ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಥ್ಲೆಟಿಕ್ಸ್ ಸಮಗ್ರತಾ ಘಟಕದ (AIU) ಇತ್ತೀಚಿನ ವರದಿಯ ಪ್ರಕಾರ, ಕೀನ್ಯಾವನ್ನು ಹಿಂದಿಕ್ಕಿರುವ ಭಾರತದ 148 ಕ್ರೀಡಾಪಟುಗಳು (Athletes) ನಿಷೇಧಿತ ಮದ್ದು ಸೇವನೆಯ ಕಾರಣದಿಂದ ಅನರ್ಹಗೊಂಡಿದ್ದಾರೆ.

ಪ್ರಮುಖ ಅಥ್ಲೆಟ್‌ಗಳಾದ ದ್ಯುತಿ ಚಾಂದ್ ಮತ್ತು ಫರ್ವೇಜ್ ಖಾನ್ ಅವರಂತಹ ಸಾಧಕರೂ ಈ ಪಟ್ಟಿಯಲ್ಲಿ ಸೇರಿರುವುದು ಕ್ರೀಡಾ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.

ಕಡಿಮೆ ಅವಧಿಯಲ್ಲಿ ಯಶಸ್ಸು ಹಾಗೂ ಪದಕಗಳನ್ನು ಪಡೆಯುವ ಆಸೆಯಿಂದ ಯುವ ಕ್ರೀಡಾಪಟುಗಳು ಇಂತಹ ತಪ್ಪು ದಾರಿ ತುಳಿಯುತ್ತಿದ್ದಾರೆ. ಇದು ಕೇವಲ ಅವರ ಕ್ರೀಡಾ ಬದುಕನ್ನು ಅಂತ್ಯಗೊಳಿಸುವುದಲ್ಲದೆ, ಹೃದ್ರೋಗ, ಮೂತ್ರಪಿಂಡ ವೈಫಲ್ಯ ಮತ್ತು ಮಾನಸಿಕ ಖಿನ್ನತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಡೋಪಿಂಗ್ ಎಂಬುದು ಕೇವಲ ಕ್ರೀಡೆಯ ಶಿಸ್ತಿನ ಉಲ್ಲಂಘನೆಯಲ್ಲ, ಇದು ಕ್ರೀಡಾಪಟುವಿನ ಭವಿಷ್ಯವನ್ನೇ ಬಲಿಪಡೆಯುವ ಪಿಡುಗು. ಶಾಲಾ ಹಂತದಿಂದಲೇ ದೈಹಿಕ ಶಿಕ್ಷಕರು ಮತ್ತು ಪೋಷಕರು ಈ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಅಡ್ಡದಾರಿಯಲ್ಲಿ ಸಿಗುವ ಯಶಸ್ಸು ತಾತ್ಕಾಲಿಕವಾಗಿದ್ದು, ಆಧುನಿಕ ತಂತ್ರಜ್ಞಾನದ ತಪಾಸಣೆಗಳಲ್ಲಿ ತಪ್ಪಿತಸ್ಥರು ಸಿಕ್ಕಿಬೀಳುವುದು ಖಚಿತ. ಹೀಗಾಗಿ, ಶ್ರಮ ಮತ್ತು ತಾಳ್ಮೆಯ ಹಾದಿಯೇ ಕ್ರೀಡಾ ಸಾಧನೆಗೆ ಏಕೈಕ ಮಾರ್ಗವಾಗಬೇಕು ಎಂಬ ಅರಿವು ಮೂಡಿಸಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja