Dailyhunt Logo
  • Light mode
    Follow system
    Dark mode
    • Play Story
    • App Story
SRIRAMULU : ನನ್ನನ್ನು ನೋಡಿ ರಾಹುಲ್ ಗಾಂಧಿ ಪಾಠ ಕಲಿಯಬೇಕು ಎಂದ ಶ್ರೀರಾಮುಲು!-VIDEO

SRIRAMULU : ನನ್ನನ್ನು ನೋಡಿ ರಾಹುಲ್ ಗಾಂಧಿ ಪಾಠ ಕಲಿಯಬೇಕು ಎಂದ ಶ್ರೀರಾಮುಲು!-VIDEO

Navasamaja.com 1 week ago

ಳ್ಳಾರಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಗುರಿಯಾಗಿಸಿಕೊಂಡು ಮಾಜಿ ಸಚಿವ ಬಿ. ಶ್ರೀರಾಮುಲು (Sriramulu) ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ರಾಹುಲ್ ಗಾಂಧಿಯನ್ನು ನೋಡಿ ನಾನೇನು ಕಲಿಯಬೇಕಿಲ್ಲ.

ನನ್ನನ್ನು ನೋಡಿ ಅವರು ಕಲಿಯಬೇಕು' ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪಟ್ಟಣದಲ್ಲಿ ನಡೆದ 'ಬಳ್ಳಾರಿ ಚಲೋ' ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು, ತಮ್ಮ ಉಡುಪಿನ ಬಗ್ಗೆಯೂ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದರು. 'ನೋಡಿ, ನಾನು ಹೇಗೆ ರೆಡಿಯಾಗಿ ಬಂದಿದ್ದೇನೆ. ನಾಯಕರೆಲ್ಲ ಏನು, ರಾಮುಲು ರಾಹುಲ್ ಗಾಂಧಿ ಟಿ-ಶರ್ಟ್ ಹಾಕಿಕೊಂಡ ಹಾಗೆ ಹಾಕಿಕೊಂಡಿದ್ದೀಯಾ ಅಂತ ಹೇಳುತ್ತಿದ್ದಾರೆ. ಅದಕ್ಕೆ, ನನ್ನನ್ನು ನೋಡಿ ರಾಹುಲ್ ಗಾಂಧಿ ಕಲಿಯಬೇಕು, ಆತನನ್ನು ನೋಡಿ ನಾನು ಕಲಿಯಬೇಕಿಲ್ಲ ಎಂದು ಏಕವಚನದಲ್ಲಿ ಮಾತನಾಡಿದರು.

ಇದೇ ವೇಳೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧವೂ ಶ್ರೀರಾಮುಲು ಆರೋಪಗಳ ಸುರಿಮಳೆಗೈದರು. ಜನರಿಗೆ ನೀಡಬೇಕಾದ ಗ್ಯಾರಂಟಿ ಹಣದ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದ ಅವರು, ಗ್ಯಾರಂಟಿ ಯೋಜನೆಗಳ ಹಣವೇ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆ ಸೇರಿದೆ ಎಂದು ದೂರಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ₹5,000 ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ ಶ್ರೀರಾಮುಲು, ಈ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

'ಡಿಕೆಶಿ ಅವರ ಸರ್ಕಾರ ಅರಮನೆಯಲ್ಲಿ ಕುಳಿತು ಆಡಳಿತ ನಡೆಸುತ್ತಿದೆ. ಆದರೆ ರಾಜ್ಯದ ಜನರು ಮೂಲಭೂತ ಸೌಲಭ್ಯಗಳಿಗಾಗಿ ಬೀದಿಯಲ್ಲಿ ಗೋಳಾಡುವ ಪರಿಸ್ಥಿತಿ ಬಂದಿದೆ' ಎಂದು ಅವರು ಟೀಕಿಸಿದರು.

ಕಲ್ಯಾಣ ಕರ್ನಾಟಕದ ಸಮಸ್ಯೆಗಳನ್ನೂ ಪ್ರಸ್ತಾಪಿಸಿದ ಶ್ರೀರಾಮುಲು, ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ ಎಂದು ಹೇಳಿದರು. ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಗ್ರಾಮೀಣ ಭಾಗದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಶಿಕ್ಷಣದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ವಿಚಾರದಲ್ಲೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.7ರಷ್ಟು ಮೀಸಲಾತಿ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ಮತ್ತೆ ಶೇ.3ಕ್ಕೆ ಇಳಿಸಿದೆ ಎಂದು ಆರೋಪಿಸಿದರು. 'ಇಂತಹ ಸರ್ಕಾರ ನಮಗೆ ಬೇಕೇ?' ಎಂದು ಪ್ರಶ್ನಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja