Dailyhunt Logo
  • Light mode
    Follow system
    Dark mode
    • Play Story
    • App Story
TESLA CAR: ಹೇ ಗ್ರೋಕ್ ಅಂದ್ರೆ ಕನ್ನಡದಲ್ಲೇ ರಿಯಾಕ್ಟ್ ಮಾಡುತ್ತೆ ಟೆಸ್ಲಾ!..ಇದರ ಬೆಲೆ ಮತ್ತು ಮೈಲೇಜ್ ವಿವರ ಇಲ್ಲಿದೆ..

TESLA CAR: ಹೇ ಗ್ರೋಕ್ ಅಂದ್ರೆ ಕನ್ನಡದಲ್ಲೇ ರಿಯಾಕ್ಟ್ ಮಾಡುತ್ತೆ ಟೆಸ್ಲಾ!..ಇದರ ಬೆಲೆ ಮತ್ತು ಮೈಲೇಜ್ ವಿವರ ಇಲ್ಲಿದೆ..

Navasamaja.com 1 week ago

ಬೆಂಗಳೂರು: ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಯಾದ ಎಲಾನ್ ಮಸ್ಕ್ (Elon musk) ಒಡೆತನದ (Tesla modely) ಟೆಸ್ಲಾ, ಭಾರತೀಯ ಮಾರುಕಟ್ಟೆಯಲ್ಲಿ ತನ್ನ 'ವೈ ಮಾಡೆಲ್' ಎಲೆಕ್ಟ್ರಿಕ್ ಕಾರಿನ (EV cars) ಮೂಲಕ ಹೊಸ ಸಂಚಲನ ಸೃಷ್ಟಿಸಿದೆ.

ಇದೀಗ ಈ ಕಾರು ಭಾರತದ ಗ್ರಾಹಕರಿಗಾಗಿ ಕನ್ನಡ ಸೇರಿದಂತೆ ಒಟ್ಟು 6 ಪ್ರಾದೇಶಿಕ ಭಾಷೆಗಳಲ್ಲಿ ವಾಯ್ಸ್ ಕಮಾಂಡ್ ಸ್ವೀಕರಿಸಿ, ಸಂಭಾಷಣೆ ನಡೆಸುವ ವಿಶೇಷ ತಂತ್ರಜ್ಞಾನವನ್ನು ಪರಿಚಯಿಸಿದೆ.

ಸಾಮಾನ್ಯವಾಗಿ ಪ್ರೀಮಿಯಂ ಕಾರುಗಳಲ್ಲಿ ಕನೆಕ್ಟೆಡ್ ಫೀಚರ್‌ಗಳಿಗಾಗಿ ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸಬೇಕಿತ್ತು. ಆದರೆ ಟೆಸ್ಲಾ ಕಾರಿಗೆ xAI ಸಂಸ್ಥೆಯ 'ಗ್ರೋಕ್ AI' (Grok AI) ತಂತ್ರಜ್ಞಾನವನ್ನು ಸಂಯೋಜಿಸಿರುವುದರಿಂದ, ಇದು ಗ್ರಾಹಕರ ಸ್ಥಳೀಯ ಭಾಷೆಯಲ್ಲೇ ಸೂಚನೆಗಳನ್ನು ಗ್ರಹಿಸಿ, ಅದೇ ಭಾಷೆಯಲ್ಲಿ ಉತ್ತರ ನೀಡಲಿದೆ.

ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟೆಸ್ಲಾ ವೈ ಮಾಡೆಲ್ ಕಾರು, ಪ್ರಾದೇಶಿಕ ಭಾಷೆಯ ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ದೇಶದ ಪ್ರಥಮ ಪ್ರೀಮಿಯಂ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರೋಕ್ AI ಇಂಟಿಗ್ರೇಷನ್ ಮೂಲಕ ಈ ಕಾರು ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ ಮತ್ತು ಬೆಂಗಾಲಿ ಭಾಷೆಗಳನ್ನು ಬೆಂಬಲಿಸುತ್ತದೆ.

ರಿಯಲ್-ಟೈಮ್ ಮಾಹಿತಿ ಹಾಗೂ ಸುಧಾರಿತ ಸೇವೆಗಳು
ಈ ಗ್ರೋಕ್ AI ನೆರವಿನಿಂದ ಪ್ರಯಾಣದ ವೇಳೆಯಲ್ಲಿ ರಿಯಲ್-ಟೈಮ್ ಟ್ರಾಫಿಕ್ ಅಪ್‌ಡೇಟ್‌ಗಳು, ಸಮೀಪದ ಇವಿ (EV) ಚಾರ್ಜಿಂಗ್ ಸ್ಟೇಷನ್‌ಗಳ ಮಾಹಿತಿ, ಅತ್ಯುತ್ತಮ ರೂಟ್ ಮ್ಯಾಪ್ ಮಾರ್ಗದರ್ಶನ ಹಾಗೂ ಚಾಲಕರು ಕೇಳುವ ವಿವಿಧ ಪ್ರಶ್ನೆಗಳಿಗೆ ನಿಖರ ಉತ್ತರಗಳು ಚಾಲಕನ ಸ್ಥಳೀಯ ಭಾಷೆಯಲ್ಲೇ ದೊರೆಯಲಿವೆ. ಈಗಾಗಲೇ ಈ ಕಾರನ್ನು ಖರೀದಿಸಿರುವ ಗ್ರಾಹಕರು ತಮ್ಮ ವಾಹನದಲ್ಲಿ 'Over-The-Air' (OTA) ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಈ ಹೊಸ ಫೀಚರ್ ಪಡೆದುಕೊಳ್ಳಬಹುದು.

ಮೈಲೇಜ್ ಮತ್ತು ಬೆಲೆ ವಿವರ
ಇನ್ನು ಸಾಮರ್ಥ್ಯ ವಿಷಯಕ್ಕೆ ಬಂದರೆ, ಟೆಸ್ಲಾ ವೈ ಮಾಡೆಲ್ ಕಾರನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 500 ಕಿಲೋಮೀಟರ್ ವ್ಯಾಪ್ತಿ ಕ್ರಮಿಸಬಹುದಾಗಿದ್ದು, ಭಾರತದಲ್ಲಿ ಇದರ ಶೋರೂಮ್ ಬೆಲೆ 50.89 ರೂ. ಲಕ್ಷಗಳಿಂದ ಪ್ರಾರಂಭವಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja