Dailyhunt Logo
  • Light mode
    Follow system
    Dark mode
    • Play Story
    • App Story
TOXIC: ಮೊದಲ ದಿನದ ದಾಖಲೆ ಬಳಿಕ 'ಟಾಕ್ಸಿಕ್' ಕಲೆಕ್ಷನ್ ಶೇ. 64ರಷ್ಟು ಕುಸಿತ!

TOXIC: ಮೊದಲ ದಿನದ ದಾಖಲೆ ಬಳಿಕ 'ಟಾಕ್ಸಿಕ್' ಕಲೆಕ್ಷನ್ ಶೇ. 64ರಷ್ಟು ಕುಸಿತ!

Navasamaja.com 2 weeks ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic) ಚಿತ್ರದ ಗಲ್ಲಾಪೆಟ್ಟಿಗೆಯ ಪಯಣದಲ್ಲಿ (Box Office Collection) ಸದ್ಯ ಏರಿಳಿತಗಳು ಕಂಡುಬರುತ್ತಿವೆ.

ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನದ ಬಂಪರ್ ಹಾಗೂ ಐತಿಹಾಸಿಕ ಗಳಿಕೆಯ ನಂತರ, ಎರಡನೇ ದಿನದಿಂದ ಸಿನಿಮಾದ ಕಲೆಕ್ಷನ್‌ನಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ. ಲೈವ್ ಟ್ರ್ಯಾಕಿಂಗ್ ಹಾಗೂ ಟ್ರೇಡ್ ವಿಶ್ಲೇಷಕರ ಅಂಕಿಅಂಶಗಳ ಪ್ರಕಾರ, ಚಿತ್ರದ ಶೋಗಳಿಗೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಶೇಕಡಾ 64ರಷ್ಟು ಗಳಿಕೆಯಲ್ಲಿ ಕುಸಿತ ಕಂಡಿದೆ.

₹36.40 ಕೋಟಿ ರೂಪಾಯಿಗೆ ಕುಸಿದ ಕಲೆಕ್ಷನ್

ಚಿತ್ರದ ದಿನನಿತ್ಯದ ಕಲೆಕ್ಷನ್ ವಿವರಗಳನ್ನು ಗಮನಿಸುವುದಾದರೆ, ಬಿಡುಗಡೆಯಾದ ಮೊದಲ ದಿನದಂದು 'ಟಾಕ್ಸಿಕ್' ಭಾರತದಾದ್ಯಂತ ಎಲ್ಲಾ ಭಾಷೆಗಳಿಂದ ಬರೋಬ್ಬರಿ ₹101.10 ಕೋಟಿ ನಿವ್ವಳ (Net) ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿತ್ತು. ಬೃಹತ್ ಪ್ರಮಾಣದ ಮುಂಗಡ ಬುಕಿಂಗ್ ಹಾಗೂ ಬೆಳಗಿನ ಪ್ರದರ್ಶನಗಳ ಪ್ರೇಕ್ಷಕರ ಬೆಂಬಲದಿಂದ ಈ ಸಾರ್ವಕಾಲಿಕ ದಾಖಲೆ ಸಾಧ್ಯವಾಗಿತ್ತು. ಆದರೆ, ಎರಡನೇ ದಿನಕ್ಕೆ ಬರುವಷ್ಟರಲ್ಲಿ ಭಾರತದಾದ್ಯಂತ ಚಿತ್ರದ ಗಳಿಕೆ ನೇರವಾಗಿ ₹36.40 ಕೋಟಿ ರೂಪಾಯಿಗೆ ಕುಸಿದಿದ್ದು, ಮೊದಲ ದಿನಕ್ಕೆ ಹೋಲಿಸಿದರೆ ಕಲೆಕ್ಷನ್ ಶೇಕಡಾ 64ರಷ್ಟು ಕಡಿಮೆಯಾಗಿದೆ. ವಿಶೇಷವಾಗಿ ಹಿಂದಿ ಮಾರುಕಟ್ಟೆಯಲ್ಲಿ ಮೊದಲ ದಿನ ₹50 ಕೋಟಿ ಗಳಿಸಿದ್ದ ಚಿತ್ರ, ಎರಡನೇ ದಿನ ₹19.50 ಕೋಟಿಗೆ ಇಳಿಕೆಯಾಗಿದೆ. ಇನ್ನು ಮೂರನೇ ದಿನದ ಮಧ್ಯಾಹ್ನದವರೆಗಿನ ಲೈವ್ ಟ್ರ್ಯಾಕಿಂಗ್ ಅಂದಾಜಿನ ಪ್ರಕಾರ, ₹6.87 ಕೋಟಿಯಿಂದ ₹9.60 ಕೋಟಿಯಷ್ಟು ಕಲೆಕ್ಷನ್ ಆಗಿದೆ.

ಆದಾಗ್ಯೂ, ರಕ್ಷಾಬಂಧನದ ಸಾರ್ವಜನಿಕ ರಜಾದಿನವಿರುವುದರಿಂದ ವಾರಾಂತ್ಯದಲ್ಲಿ ಚಿತ್ರದ ಗಳಿಕೆ ಮತ್ತೆ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿ ಚಿತ್ರತಂಡ ಹಾಗೂ ವಿತರಕರಿದ್ದಾರೆ. ಸಾಲು ಸಾಲು ರಜಾದಿನಗಳ ಹಿನ್ನೆಲೆಯಲ್ಲಿ ಸಂಜೆ ಮತ್ತು ರಾತ್ರಿಯ ಪ್ರದರ್ಶನಗಳಿಗೆ ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಹರಿದುಬರುವ ಸಾಧ್ಯತೆಯಿದೆ. ಟ್ರೇಡ್ ವಿಶ್ಲೇಷಕರ ಪ್ರಕಾರ, ಮೂರನೇ ದಿನದ ಅಂತ್ಯಕ್ಕೆ ರಾಷ್ಟ್ರಮಟ್ಟದಲ್ಲಿ 'ಟಾಕ್ಸಿಕ್' ಚಿತ್ರವು ₹45 ಕೋಟಿಯಿಂದ ₹50 ಕೋಟಿವರೆಗೂ ನಿವ್ವಳ ಗಳಿಕೆ ಮಾಡುವ ಸಾಧ್ಯತೆಯಿದೆ.‌

ಮೂರು ದಿನದಲ್ಲಿ ₹145 ರಿಂದ ₹148 ಕೋಟಿ ಗಳಿಕೆ

ಒಟ್ಟಾರೆಯಾಗಿ ಮೂರನೇ ದಿನದ ಮಧ್ಯಾಹ್ನದವರೆಗಿನ ಲೆಕ್ಕಾಚಾರದಂತೆ, 'ಟಾಕ್ಸಿಕ್' ಸಿನಿಮಾ ಭಾರತದಾದ್ಯಂತ ಒಟ್ಟು ₹145 ಕೋಟಿಯಿಂದ ₹148 ಕೋಟಿವರೆಗೂ ನಿವ್ವಳ ಗಳಿಕೆ ಮಾಡಿದೆ. ಇನ್ನು ವಿಶ್ವಾದ್ಯಂತ ಗ್ರಾಸ್ (Worldwide Gross) ಗಳಿಕೆಯಲ್ಲಿ ಚಿತ್ರವು ಈಗಾಗಲೇ ₹190+ ಕೋಟಿ ಗಡಿ ದಾಟಿದ್ದು, ವಾರಾಂತ್ಯದ ನಂತರ ಚಿತ್ರದ ಅಸಲಿ ಬಾಕ್ಸ್ ಆಫೀಸ್ ಭವಿಷ್ಯ ಸ್ಪಷ್ಟವಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja