Dailyhunt Logo
  • Light mode
    Follow system
    Dark mode
    • Play Story
    • App Story
TOXIC: 'ಟಾಕ್ಸಿಕ್' ಪ್ರಯೋಗಕ್ಕೆ ಸುದೀಪ್ ಸಲಾಮ್.. ಕಮರ್ಷಿಯಲ್ ಫಾರ್ಮುಲಾ ಬಿಟ್ಟ ಯಶ್ ಧೈರ್ಯ  ಕೊಂಡಾಡಿದ ಕಿಚ್ಚ!

TOXIC: 'ಟಾಕ್ಸಿಕ್' ಪ್ರಯೋಗಕ್ಕೆ ಸುದೀಪ್ ಸಲಾಮ್.. ಕಮರ್ಷಿಯಲ್ ಫಾರ್ಮುಲಾ ಬಿಟ್ಟ ಯಶ್ ಧೈರ್ಯ ಕೊಂಡಾಡಿದ ಕಿಚ್ಚ!

Navasamaja.com 1 week ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic) ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಚಿತ್ರದ ವಿಭಿನ್ನ ನಿರೂಪಣೆ ಮತ್ತು ಪ್ರಯೋಗಾತ್ಮಕ ಹಾದಿಗೆ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಮುಕ್ತಕಂಠದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಳೆಯ ಯಶಸ್ವಿ ಫಾರ್ಮುಲಾವನ್ನೇ ನೆಚ್ಚಿಕೊಳ್ಳದೆ, ತೀರ ವಿಭಿನ್ನವಾದ ಕಥಾಹಂದರವನ್ನು ಆಯ್ಕೆ ಮಾಡಿಕೊಂಡ ಯಶ್ ಅವರ ಸಾಹಸಕ್ಕೆ ಸುದೀಪ್ ಜೈ ಎಂದಿದ್ದಾರೆ.

ಯಶ್‌ ಧೈರ್ಯವನ್ನ ಹಾಡಿ ಹೊಗಳಿದ ಕಿಚ್ಚ

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ಪೋಸ್ಟ್ ಹಂಚಿಕೊಂಡಿರುವ ಕಿಚ್ಚ ಸುದೀಪ್, "ನನ್ನ ಸ್ನೇಹಿತ ಯಶ್, ನಿಮ್ಮ ಪೂರ್ವಾಪರ ಬ್ಲಾಕ್‌ಬಸ್ಟರ್ ಸಿನಿಮಾದ ಯಶಸ್ಸಿನ ನಂತರ ಪ್ರೇಕ್ಷಕರು ನಿರೀಕ್ಷಿಸುವ ಅದೇ ಹಳೆಯ, ಸಾಂಪ್ರದಾಯಿಕ ಹಾಗೂ ಫಾರ್ಮುಲಾ ಹಾದಿಯನ್ನು ತುಳಿಯದೆ, ಚೌಕಟ್ಟಿನಿಂದ ಹೊರಬಂದು ಹೊಸದನ್ನೇನೋ ಮಾಡಲು ನಿಜಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದೀರಿ. ಇಂತಹ ಸಾಹಸಕ್ಕೆ ಕೈಹಾಕಲು ವಿಶಿಷ್ಟ ಮನಸ್ಥಿತಿ, ದೃಢವಾದ ನಂಬಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭಾರಿ ಧೈರ್ಯ ಬೇಕಾಗುತ್ತದೆ" ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, ಅವರು, "'ಟಾಕ್ಸಿಕ್' ಸಿನಿಮಾ ಒಂದು ಅಸಾಧಾರಣ ಹಾಗೂ ಶ್ಲಾಘನೀಯ ಪ್ರಯತ್ನವಾಗಿದೆ. ಸಿನಿಮಾದ ಹಲವು ಭಾಗಗಳು ನಿಜಕ್ಕೂ ಕುತೂಹಲಕಾರಿಯಾಗಿದ್ದು, ಆಳವಾದ ಚರ್ಚೆ ಹಾಗೂ ಆಲೋಚನೆಗಳಿಗೆ ನಾಂದಿ ಹಾಡುತ್ತವೆ. ಸಾಮಾನ್ಯ ಹಾದಿಯಿಂದ ಹೊರಬಂದು ಇಂತಹ ಪ್ರಯೋಗಾತ್ಮಕ ಸಿನಿಮಾ ಮಾಡಲು ಧೈರ್ಯ ತೋರಿದ್ದಕ್ಕೆ ಅಭಿನಂದನೆಗಳು. ನಿಮಗೆ ನನ್ನ ಕಡೆಯಿಂದ ಶುಭ ಹಾರೈಕೆಗಳು" ಎಂದು ಯಶ್‌ಗೆ ಬೆಂಬಲ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದ ಇಬ್ಬರು ಅಗ್ರನಟರ ನಡುವಿನ ಈ ಪರಸ್ಪರ ಗೌರವ ಹಾಗೂ ಪ್ರೀತಿಯ ನಡೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳ ಮನ ಗೆದ್ದಿದೆ. ಕಮರ್ಷಿಯಲ್ ಗೆಲುವಿನ ಜೊತೆಗೆ ಹೊಸ ಬಗೆಯ ಸಿನಿಮಾ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತಿರುವ ಸುದೀಪ್ ಅವರ ಪೋಸ್ಟ್ ಇದೀಗ ವೈರಲ್ ಆಗಿದೆ.

'ಟಾಕ್ಸಿಕ್' ಸಿನಿಮಾ ಬೆಂಬಲಿಸಿ ಟ್ವೀಟ್ ಮಾಡಿದ ನಟ ಉಪೇಂದ್ರ, ರಿಯಲ್ ಸ್ಟಾರ್ ವಿಮರ್ಶೆಗೆ ನೆಟ್ಟಿಗರಿಂದ ಟ್ರೋಲ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಬುಧವಾರ (ಆಗಸ್ಟ್ 26) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಈ ಮಧ್ಯೆ 'ರಿಯಲ್ ಸ್ಟಾರ್' ಉಪೇಂದ್ರ (Upendra) ಅವರು ಚಿತ್ರವನ್ನು ವೀಕ್ಷಿಸಿ ಸೋಶಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಪ್ರಶಂಸಿಸಿದ್ದು, ಇದೀಗ ಉಪ್ಪಿ ಅವರ ಈ ವಿಮರ್ಶೆ ನೆಟ್ಟಿಗರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಟಾಕ್ಸಿಕ್‌ ಸಿನಿಮಾಗೆ ಸಾಥ್‌ ನೀಡಿದ ಉಪೇಂದ್ರ

ವಿಶೇಷವಾಗಿ ಉತ್ತರ ಭಾರತ ಸೇರಿದಂತೆ ತಮಿಳು ಹಾಗೂ ತೆಲುಗು ಭಾಷಿಗರಿಂದ 'ಟಾಕ್ಸಿಕ್' ಚಿತ್ರಕ್ಕೆ ನೆಗೆಟಿವ್ ರಿವ್ಯೂಗಳು ಮತ್ತು ಟ್ರೋಲ್‌ಗಳು ವ್ಯಕ್ತವಾಗುತ್ತಿದ್ದವು. ಇಂತಹ ಕಷ್ಟದ ಸಮಯದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟ-ನಟಿಯರು ಚಿತ್ರದ ಬೆಂಬಲಕ್ಕೆ ನಿಲ್ಲುತ್ತಿಲ್ಲ ಎಂಬ ಅಪಸ್ವರಗಳು ಕೇಳಿಬರುತ್ತಿದ್ದಾಗ, ನಟ ಉಪೇಂದ್ರ ಅವರು ಸೋಷಿಯಲ್ ಮೀಡಿಯಾ 'ಎಕ್ಸ್'ನಲ್ಲಿ (ಟ್ವಿಟರ್) ಪೋಸ್ಟ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದರು.

ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದ ಉಪೇಂದ್ರ, "ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ, ಅದೂ ದೊಡ್ಡವರಿಗಾಗಿ! ಸಿನಿಮಾ ನೋಡಿದೆ, ವಾವ್ ಎಂತಹ ಸಿನಿಮಾ! ಇದೊಂದು ಸಂಪೂರ್ಣ ಹೊಸ ಲೋಕ ಹಾಗೂ ಸಂಪೂರ್ಣ ಹೊಸ ಅನುಭವ. ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ. ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್" ಎಂದು ಮುಕ್ತವಾಗಿ ಹೊಗಳಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja