Dailyhunt Logo
  • Light mode
    Follow system
    Dark mode
    • Play Story
    • App Story
TOXIC: ಟಾಕ್ಸಿಕ್‌ ಸಿನಿಮಾ ನೋಡ್ತಿದೀನಿ ಎಂದ ವೈಭವ್‌ ಸೂರ್ಯವಂಶಿ - ಚಳಿ ಬಿಡಿಸಿದ ನೆಟ್ಟಿಗರು!

TOXIC: ಟಾಕ್ಸಿಕ್‌ ಸಿನಿಮಾ ನೋಡ್ತಿದೀನಿ ಎಂದ ವೈಭವ್‌ ಸೂರ್ಯವಂಶಿ - ಚಳಿ ಬಿಡಿಸಿದ ನೆಟ್ಟಿಗರು!

Navasamaja.com 3 weeks ago

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ 150 ಕೋಟಿ ರೂ. ಕಲೆಕ್ಷನ್ ಮಾಡಿ ಧೂಳೆಬ್ಬಿಸುತ್ತಿದೆ. ಇದರ ನಡುವೆ, ಇದೀಗ ಈ ಸಿನಿಮಾ ಬೇರೊಂದು ವಿವಾದದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಭಾರತದ 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Sooryavanshi) ಅವರು ತಾವು 'ಟಾಕ್ಸಿಕ್' ಸಿನಿಮಾ ನೋಡುತ್ತಿರುವುದಾಗಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಈ ಚರ್ಚೆಗೆ ಕಾರಣವಾಗಿದೆ.

ಟಾಕ್ಸಿಕ್ ಸಿನಿಮಾ ಸೆನ್ಸಾರ್ ಮಂಡಳಿಯಿಂದ 'ಎ' (A) ಸರ್ಟಿಫಿಕೇಟ್ ಪಡೆದಿದೆ. ಹೀಗಿರುವಾಗ, ಕೇವಲ 15 ವರ್ಷದ ಬಾಲಕನಿಗೆ ವಯಸ್ಕರಿಗೆ ಮಾತ್ರ ಸೀಮಿತವಾದ ಈ ಸಿನಿಮಾವನ್ನು ನೋಡಲು ಬಿಟ್ಟವರು ಯಾರು? ಚಿತ್ರಮಂದಿರದೊಳಗೆ ಅವರಿಗೆ ಪ್ರವೇಶ ಸಿಕ್ಕಿದ್ದಾದರೂ ಹೇಗೆ ಎಂದು ನೆಟ್ಟಿಗರು ತೀವ್ರವಾಗಿ ಪ್ರಶ್ನಿಸಲು ಶುರುಮಾಡಿದ್ದಾರೆ.

ಆದರೆ, ಈ ಇಡೀ ಗೊಂದಲದ ಹಿಂದಿನ ಅಸಲಿ ವಿಚಾರ ಬೇರೆಯೇ ಇದೆ. 'ಟಾಕ್ಸಿಕ್ ನೋಡುತ್ತಿದ್ದೇನೆ' ಎಂದು ವೈರಲ್ ಆಗಿರುವ ಆ ಎಕ್ಸ್ ಖಾತೆಗೂ, ಕ್ರಿಕೆಟಿಗ ವೈಭವ್ ಸೂರ್ಯವಂಶಿಗೂ ಯಾವುದೇ ಸಂಬಂಧವಿಲ್ಲ. ಹೌದು, ಅದೊಂದು ಕೇವಲ ಫ್ಯಾನ್ ಪೇಜ್ (ಅಭಿಮಾನಿಗಳ ಖಾತೆ) ಆಗಿದ್ದು, ಅದಕ್ಕೆ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಹಾಗಾಗಿ ಜನರು ಇದನ್ನೇ ವೈಭವ್ ಅವರ ಅಧಿಕೃತ ಖಾತೆ ಎಂದು ತಪ್ಪಾಗಿ ಭಾವಿಸಿ ಟ್ವೀಟ್ ಅನ್ನು ಶೇರ್ ಮಾಡಿದ್ದಾರೆ.

ಒಟ್ಟಿನಲ್ಲಿ ಅಭಿಮಾನಿಯೊಬ್ಬ ಮಾಡಿದ ಪೋಸ್ಟ್‌ನಿಂದಾಗಿ ಯುವ ಕ್ರಿಕೆಟಿಗನ ಹೆಸರು ತಳುಕುಹಾಕಿಕೊಂಡಿದೆ. ಈ ಚರ್ಚೆಯ ಬೆನ್ನಲ್ಲೇ, ಹಿಂದೆ ವೈಭವ್ ಅವರು 'ಧುರಂಧರ್ 2' ತಮ್ಮ ನೆಚ್ಚಿನ ಸಿನಿಮಾ ಎಂದು ಹೇಳಿದ್ದ ಹಳೆಯ ವಿಚಾರವೂ ಈಗ ಮತ್ತೆ ವೈರಲ್ ಆಗುತ್ತಿದೆ. ಅಚ್ಚರಿ ಎಂದರೆ ಆ ಸಿನಿಮಾಗೆ ಕೂಡ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Navasamaja