Dailyhunt
TRAGEDY: ಸಾವಿನಲ್ಲೂ ಸಾರ್ಥಕತೆ ಮೆರೆದ ಭಾರತೀಯ ವಿದ್ಯಾರ್ಥಿನಿ, ಅಂಗಾಂಗ ದಾನದ ಮೂಲಕ ಚಿರಸ್ಥಾಯಿ

TRAGEDY: ಸಾವಿನಲ್ಲೂ ಸಾರ್ಥಕತೆ ಮೆರೆದ ಭಾರತೀಯ ವಿದ್ಯಾರ್ಥಿನಿ, ಅಂಗಾಂಗ ದಾನದ ಮೂಲಕ ಚಿರಸ್ಥಾಯಿ

Navasamaja.com 3 weeks ago

ಮೆರಿಕ: ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ (America) ತೆರಳಿದ್ದ ಭಾರತೀಯ (India) ಮೂಲದ ವಿದ್ಯಾರ್ಥಿನಿ (Student) ನೀಲಂ ಶಿಂಧೆ, ಕಳೆದ 14 ತಿಂಗಳುಗಳಿಂದ ಕೋಮಾದಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಅಂತಿಮವಾಗಿ ಇಹಲೋಕ ತ್ಯಜಿಸಿದ್ದಾರೆ. ಸುದೀರ್ಘ ಕಾಲದ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದು, ಕುಟುಂಬಸ್ಥರು ಅತೀವ ದುಃಖದಲ್ಲಿ ಮುಳುಗಿದ್ದಾರೆ.

ಹೌದು, ವಿದೇಶಿ ನೆಲದಲ್ಲಿ ಕನಸುಗಳನ್ನು ಹೊತ್ತು ಹೋದ ಯುವತಿಯ ಈ ಸಾವು ಆಕೆಯ ಕುಟುಂಬಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ. ಆಕೆಯ ಅಕಾಲಿಕ ನಿಧನವು ಅವರ ಹಿತೈಷಿಗಳಲ್ಲಿ ಮತ್ತು ಅನಿವಾಸಿ ಭಾರತೀಯರಲ್ಲಿ ತೀವ್ರ ನೋವನ್ನುಂಟು ಮಾಡಿದೆ.

ಈ ದುರದೃಷ್ಟಕರ ಘಟನೆಯ ನಡುವೆಯೂ ಮಗಳ ಸಾವಿನ ನೋವಿನಲ್ಲೂ ಪೋಷಕರು ತೆಗೆದುಕೊಂಡ ದಿಟ್ಟ ನಿರ್ಧಾರ. ನೀಲಂ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ನೀಡಿದ್ದಾರೆ. ಆಕೆಯ ಈ ಅಂಗಾಂಗ ದಾನ ಇತರ ಹಲವು ರೋಗಿಗಳಿಗೆ ಮರುಜೀವ ನೀಡಲಿದ್ದು, ಸಾವಿನಲ್ಲೂ ನೀಲಂ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಾನವೀಯತೆಯ ದೃಷ್ಟಿಯಿಂದ ಕೈಗೊಂಡ ಈ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja