ಶಿವಕಾಶಿ: ತಮಿಳುನಾಡಿನ (Tamil Nadu) ಪ್ರಸಿದ್ಧ ಪಟಾಕಿ ನಗರಿ ಶಿವಕಾಶಿ ಸಮೀಪದ ಪಟಾಕಿ ಕಾರ್ಖಾನೆಯೊಂದರಲ್ಲಿ ಗುರುವಾರ (Tragedy) ಮಧ್ಯಾಹ್ನ ಭೀಕರ ಅಗ್ನಿ ಅನಾಹುತ (Fire Mishap) ಸಂಭವಿಸಿದ್ದು, ಮೂವರು ದುರ್ಮರಣಕ್ಕೀಡಾಗಿದ್ದಾರೆ. ತಿರುತಂಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಮಸ್ಕಾರಿತನ್‌ಪಟ್ಟಿ ಗ್ರಾಮದಲ್ಲಿರುವ 'ಶ್ರೀ ಕೃಷ್ಣ ಪೈರೋಟೆಕ್ನಿಕ್ಸ್' ಪಟಾಕಿ ತಯಾರಿಕಾ ಘಟಕದಲ್ಲಿ ಈ ಕರುಣಾಜನಕ ಘಟನೆ ನಡೆದಿದೆ.
ಇದ್ದಕ್ಕಿದ್ದಂತೆ ಸ್ಫೋಟಗೊಂಡ ರಾಸಾಯನಿಕ ದುರಂತದಲ್ಲಿ ಮೃತಪಟ್ಟವರನ್ನು ಶಿವಕಾಶಿ ಮೂಲದ ಎಸ್. ಬಾಲಮುರುಗನ್ (40) ಹಾಗೂ ತಿರುನೆಲ್ವೇಲಿ ನಿವಾಸಿ ಕೆ. ಅಹಮದ್ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಕಾರ್ಖಾನೆಯಲ್ಲಿ ಪಟಾಕಿ ತಯಾರಿಕೆಗೆ ಬಳಸುವ ರಾಸಾಯನಿಕಗಳನ್ನು ಮಿಶ್ರಣ ಮಾಡುವ ಹೊಸ ಯಂತ್ರೋಪಕರಣಗಳನ್ನು ಅಳವಡಿಸುವ ಮತ್ತು ಅದರ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ (ಟೆಸ್ಟಿಂಗ್) ಕೆಲಸದಲ್ಲಿ ಈ ಇಬ್ಬರು ತೊಡಗಿಸಿಕೊಂಡಿದ್ದರು. ಮಧ್ಯಾಹ್ನ ಸುಮಾರು 1:30ರ ಅವಧಿಯಲ್ಲಿ ಕೆಲಸ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ರಾಸಾಯನಿಕ ಸ್ಫೋಟಗೊಂಡು ಇಡೀ ಕೊಠಡಿಗೆ ಬೆಂಕಿ ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಬಾಲಮುರುಗನ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮತ್ತೊಬ್ಬ ತಂತ್ರಜ್ಞ ಅಹಮದ್ ಇಬ್ರಾಹಿಂ ಅವರು ನೂರಕ್ಕೆ ನೂರರಷ್ಟು ತೀವ್ರ ಸುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಲ್ಲಿದ್ದರು. ತಕ್ಷಣವೇ ಅವರನ್ನು ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ವಿಲ್ಲುಪುರಂನ ವಿರುದುನಗರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಧಾವಿಸಿರುವ ತಿರುತಂಗಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಫೋಟಕ್ಕೆ ನಿಖರ ಕಾರಣ ಏನೆಂಬುದರ ಕುರಿತು ತೀವ್ರ ತನಿಖೆ ಕೈಗೊಂಡಿದ್ದಾರೆ. ಬಟ್ಟೆ ಕೊಡಿಸಿಲ್ಲ ಎಂದು ನೇ*ಣಿಗೆ ಶರಣಾದ ಸಹೋದರಿಯರು! ಕಲಬುರಗಿ : ಹಬ್ಬಕ್ಕೆ ಬಟ್ಟೆ ಕೊಡಿಸಿಲ್ಲ ಎಂದು ಸಹೋದರಿಯರಿಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು (Tragedy) ಆತ್ಮಹತ್ಯೆ (Self Harm) ಮಾಡಿಕೊಂಡಿರುವ ದುರ್ಘಟನೆ ಕಲಬುರಗಿ (Kalburgi) ಜಿಲ್ಲೆಯ ಶಹಾಬಾದ್ ಪಟ್ಟಣದ ಶಾಂತನಗರದಲ್ಲಿ ನಡೆದಿದೆ. ಮೃತರನ್ನು ಪೂಜಾ (17) ಹಾಗೂ ಹಣಮಂತಿ (16) ಎಂದು ಗುರುತಿಸಲಾಗಿದೆ. ಇಬ್ಬರೂ ಮನೆಯಲ್ಲಿದ್ದ ವೇಲ್ ಬಳಸಿ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಸಹೋದರಿಯರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ತಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಶಹಾಬಾದ್‌ನಲ್ಲೇ ವಾಸವಾಗಿದ್ದರು. ಸಹೋದರ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪೂಜಾ ಹಾಗೂ ಹಣಮಂತಿ ಇಬ್ಬರೂ ಶಹಾಬಾದ್ ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಒಬ್ಬರು ಪಿಯುಸಿ ಪ್ರಥಮ ವರ್ಷ ಹಾಗೂ ಮತ್ತೊಬ್ಬರು ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಕೊಡಿಸುವಂತೆ ಸಹೋದರಿಯರು ತಂದೆಯನ್ನು ಕೇಳಿದ್ದರು ಎನ್ನಲಾಗಿದೆ. ಆದರೆ ಬಟ್ಟೆ ಕೊಡಿಸದ ಹಿನ್ನೆಲೆಯಲ್ಲಿ ಇಬ್ಬರೂ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ತಂದೆಗೆ ಕುಡಿತದ ಚಟವಿತ್ತು ಎಂಬ ಮಾಹಿತಿಯೂ ಇದೆ. ಘಟನೆ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಹೋದರಿಯರ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದನ್ನು ತನಿಖೆಯ ಬಳಿಕ ತಿಳಿಯಬೇಕಿದೆ.

