Dailyhunt
TRAI : ಮೊಬೈಲ್ ಗ್ರಾಹಕರಿಗೆ ಸಿಹಿ ಸುದ್ದಿ: ಇನ್ಮುಂದೆ ಡೇಟಾ ರಹಿತ 'ವಾಯ್ಸ್ ಮತ್ತು ಎಸ್‌ಎಂಎಸ್' ಪ್ಯಾಕ್‌ಗಳು ಕಡ್ಡಾಯ!

TRAI : ಮೊಬೈಲ್ ಗ್ರಾಹಕರಿಗೆ ಸಿಹಿ ಸುದ್ದಿ: ಇನ್ಮುಂದೆ ಡೇಟಾ ರಹಿತ 'ವಾಯ್ಸ್ ಮತ್ತು ಎಸ್‌ಎಂಎಸ್' ಪ್ಯಾಕ್‌ಗಳು ಕಡ್ಡಾಯ!

Navasamaja.com 1 week ago

ವದೆಹಲಿ: ಮೊಬೈಲ್ ಗ್ರಾಹಕರ ಹಿತರಕ್ಷಣೆಗಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕೇವಲ ಕರೆ (Voice call) ಮತ್ತು ಎಸ್‌ಎಂಎಸ್ (SMS)ಸೌಲಭ್ಯವನ್ನು ಬಯಸುವ ಗ್ರಾಹಕರಿಗಾಗಿ ಪ್ರತ್ಯೇಕ ರೀಚಾರ್ಜ್ ವೋಚರ್‌ಗಳನ್ನು ನೀಡುವಂತೆ ಟೆಲಿಕಾಂ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಮುಂದಾಗಿದೆ.

ಡೇಟಾ ರಹಿತ ರಿಜಾರ್ಜ್‌ ಪ್ಯಾಕ್‌

ಈ ಸಂಬಂಧ 'ದೂರಸಂಪರ್ಕ ಗ್ರಾಹಕ ರಕ್ಷಣೆ (13ನೇ ತಿದ್ದುಪಡಿ) ನಿಯಮಾವಳಿ-2026'ರ ಕರಡನ್ನು ಟ್ರಾಯ್ ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಬಹುತೇಕ ರೀಚಾರ್ಜ್ ಪ್ಯಾಕ್‌ಗಳು ಡೇಟಾ (ಇಂಟರ್ನೆಟ್), ಕರೆ ಮತ್ತು ಎಸ್‌ಎಂಎಸ್ ಎಂಬ ಮೂರೂ ಸೌಲಭ್ಯಗಳನ್ನು ಒಳಗೊಂಡಿರುತ್ತವೆ.
ಇಂಟರ್ನೆಟ್ ಬಳಸದ ಗ್ರಾಹಕರಿಗೂ ಅನಿವಾರ್ಯವಾಗಿ ಡೇಟಾ ಪ್ಯಾಕ್‌ಗೆ ಹಣ ಪಾವತಿಸಬೇಕಾದ ಪರಿಸ್ಥಿತಿ ಇದೆ. ಇದನ್ನು ಗಮನಿಸಿರುವ ಪ್ರಾಧಿಕಾರವು, ಡೇಟಾ ರಹಿತವಾದ ಅಗ್ಗದ ದರದ ಪ್ಯಾಕ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ.

ಕರಡು ನಿಯಮಾವಳಿಯ ಮುಖ್ಯಾಂಶಗಳು: ದೂರಸಂಪರ್ಕ ಕಂಪನಿಗಳು ಡೇಟಾ ಒಳಗೊಂಡಿರುವ ಪ್ರತಿಯೊಂದು ಅವಧಿಯ (Validity) ಪ್ಯಾಕ್‌ಗಳ ಜೊತೆಗೆ, ಕೇವಲ ವಾಯ್ಸ್ ಮತ್ತು ಎಸ್‌ಎಂಎಸ್ ಮಾತ್ರವಿರುವ ಸಮಾನ ಅವಧಿಯ ಪ್ಯಾಕ್‌ಗಳನ್ನು ಗ್ರಾಹಕರಿಗೆ ಒದಗಿಸಬೇಕು. ಉದಾಹರಣೆಗೆ, ಡೇಟಾ ಇರುವ 28 ದಿನಗಳ ಪ್ಯಾಕ್ ಇದ್ದರೆ, ಅಷ್ಟೇ ದಿನಗಳ ಕಾಲಾವಕಾಶವಿರುವ ಡೇಟಾ ರಹಿತ ಪ್ಯಾಕ್ ಕೂಡ ಇರಬೇಕು. ಈ ವೋಚರ್‌ಗಳ ದರವು ಡೇಟಾ ಪ್ಯಾಕ್‌ಗಳಿಗಿಂತ ಕಡಿಮೆ ಇರಲಿದ್ದು, ಗ್ರಾಹಕರಿಗೆ ಹಣ ಉಳಿತಾಯವಾಗಲಿದೆ.
ಈ ಹಿಂದೆ 2024ರಲ್ಲಿಯೇ ಟ್ರಾಯ್ ಇಂತಹದೊಂದು ನಿಯಮವನ್ನು ಜಾರಿಗೆ ತಂದಿತ್ತು. ಆದರೆ ಕಂಪನಿಗಳು ಈ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು.

ಸಾರ್ವಜನಿಕರು ಮತ್ತು ವಿವಿಧ ಸಂಸ್ಥೆಗಳಿಂದ ಬಂದ ಮನವಿಗಳನ್ನು ಪುರಸ್ಕರಿಸಿರುವ ಟ್ರಾಯ್, ಈಗ ಈ ನಿಯಮವನ್ನು ಕಡ್ಡಾಯಗೊಳಿಸಲು ಮುಂದಾಗಿದೆ. ಈ ಹೊಸ ಕರಡು ನಿಯಮದ ಬಗ್ಗೆ ಅಭಿಪ್ರಾಯ ತಿಳಿಸಲು ಜನಸಾಮಾನ್ಯರು ಮತ್ತು ಸಂಬಂಧಪಟ್ಟವರಿಗೆ ಈ ತಿಂಗಳ 28ರವರೆಗೆ ಕಾಲಾವಕಾಶ ನೀಡಲಾಗಿದೆ. ಶೀಘ್ರದಲ್ಲೇ ಈ ನಿಯಮ ಜಾರಿಗೆ ಬಂದರೆ, ಇಂಟರ್ನೆಟ್ ಬಳಸದ ಲಕ್ಷಾಂತರ ಗ್ರಾಹಕರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭವಾಗಲಿದೆ.

ರಿಚಾರ್ಜ್‌ ಮಾಡಿಸದಿದ್ರೂ 90 ದಿನ ಸಿಮ್‌ ಸಕ್ರಿಯ - ಟ್ರಾಯ್‌ ಹೊಸ ನಿಯಮ

ಹಿಂದಿನ ವರ್ಷ ಭಾರತೀಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಸಿಮ್ ಕಾರ್ಡ್ ಮಾನ್ಯತೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು, ಜಿಯೋ, ಏರ್‌ಟೆಲ್, ವಿಐ ಮತ್ತು ಬಿಎಸ್‌ಎನ್‌ಎಲ್‌ನ ಸಿಮ್ ಕಾರ್ಡ್‌ಗಳನ್ನು ದೀರ್ಘಾವಧಿಯವರೆಗೆ ರೀಚಾರ್ಜ್ ಮಾಡದೆಯೇ ಸಕ್ರಿಯವಾಗಿರಿಸಲು TRAI ಹೊಸ ನಿಯಮ ಜಾರಿಗೆ ತರಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Navasamaja