Dailyhunt Logo
  • Light mode
    Follow system
    Dark mode
    • Play Story
    • App Story
TUMKUR: ಚಾಲಕನ ನಿಯಂತ್ರಣ ತಪ್ಪಿ KMF​ ಟ್ಯಾಂಕರ್ ಪಲ್ಟಿ, ಹೆದ್ದಾರಿಯಲ್ಲಿ 21 ಸಾವಿರ ಲೀಟರ್ ಹಾಲು ಪೋಲು-VIDEO

TUMKUR: ಚಾಲಕನ ನಿಯಂತ್ರಣ ತಪ್ಪಿ KMF​ ಟ್ಯಾಂಕರ್ ಪಲ್ಟಿ, ಹೆದ್ದಾರಿಯಲ್ಲಿ 21 ಸಾವಿರ ಲೀಟರ್ ಹಾಲು ಪೋಲು-VIDEO

Navasamaja.com 1 week ago

ಶಿರಾ: ಚಾಲಕನ ನಿಯಂತ್ರಣ ತಪ್ಪಿದ (Milk Tanker) ಹಾಲಿನ ಟ್ಯಾಂಕರ್ (Road Mishap) ಲಾರಿಯೊಂದು ರಸ್ತೆಗೆ ಪಲ್ಟಿಯಾಗಿ, ಸುಮಾರು 21 ಸಾವಿರ ಲೀಟರ್ ಹಾಲು ಪೂರ್ತಿಯಾಗಿ ವ್ಯರ್ಥವಾಗಿರುವ ಅಘಾತಕಾರಿ ಘಟನೆ ತುಮಕೂರು (Tumkuru) ಜಿಲ್ಲೆಯ ಶಿರಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಬೈಪಾಸ್‌ನಲ್ಲಿ ಗುರುವಾರ ಸಾಯಂಕಾಲ ಸಂಭವಿಸಿದೆ.

ಈ ಅಪಘಾತದಲ್ಲಿ ಟ್ಯಾಂಕರ್ ಸಂಪೂರ್ಣವಾಗಿ ಜಖಂಗೊಂಡಿದೆಯಾದರೂ, ಅದೃಷ್ಟವಶಾತ್ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಯಾವುದೇ ಪ್ರಾಣಾಪಾಯವಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

8 ಲಕ್ಷ ರೂಪಾಯಿ ಮೌಲ್ಯದ ಹಾಲು ವ್ಯರ್ಥ

ಸಿಕ್ಕಿರುವ ಮಾಹಿತಿಯ ಪ್ರಕಾರ, ಸುಮಾರು 8 ಲಕ್ಷ ರೂಪಾಯಿ ಮೌಲ್ಯದ 21 ಸಾವಿರ ಲೀಟರ್ ಹಾಲನ್ನು ಟ್ಯಾಂಕರ್ ಲಾರಿಯಲ್ಲಿ ತುಂಬಿಕೊಂಡು ತುಮಕೂರಿನಿಂದ ಮುಂಬೈ ಕಡೆಗೆ ಸಾಗಿಸಲಾಗುತ್ತಿತ್ತು. ಲಾರಿಯು ಶಿರಾ ಬೈಪಾಸ್ ರಸ್ತೆಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆಯೇ ಬಿದ್ದಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್ ಮೇಲಿದ್ದ ಮುಚ್ಚಳ ತೆರೆದುಕೊಂಡು ಹಾಗೂ ವಾಹನ ಹಾನಿಗೊಳಗಾಗಿ ಅದರಲ್ಲಿದ್ದ ಸಾವಿರಾರು ಲೀಟರ್ ಹಾಲು ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಕಾಲುವೆಯಂತೆ ಹರಿದು ಪೋಲಾಗಿದೆ.

ಹಾಲಿಗಾಗಿ ಕ್ಯಾನ್‌ ಹಿಡಿದು ಬಂದ ಜನ

ಇನ್ನು ಹಾಲಿನ ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಹಾಲು ಹರಿಯುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹಾದಿಹೋಕರು ಬಕೆಟ್, ಪ್ಲಾಸ್ಟಿಕ್ ಕ್ಯಾನ್, ಚೊಂಬು ಹಾಗೂ ಬಾಟಲಿಗಳನ್ನು ಹಿಡಿದುಕೊಂಡು ಅಪಘಾತದ ಸ್ಥಳಕ್ಕೆ ದೌಡಾಯಿಸಿದ್ದಾರೆ. ರಸ್ತೆಯಲ್ಲಿ ಹರಿಯುತ್ತಿದ್ದ ಹಾಲನ್ನು ತುಂಬಿಸಿಕೊಳ್ಳಲು ಜನರು ಮುಗಿಬಿದ್ದಿದ್ದರಿಂದ ಹೆದ್ದಾರಿಯಲ್ಲಿ ಕೆಲ ಕಾಲ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ವಾಹನ ಸಂಚಾರದಲ್ಲೂ ವ್ಯತ್ಯಯ ಉಂಟಾಯಿತು.

ಘಟನಾ ಸ್ಥಳಕ್ಕೆ ತುಮಕೂರು ಹಾಲು ಒಕ್ಕೂಟದ (ತುಮುಲ್) ನಿರ್ದೇಶಕರಾದ ಎಸ್.ಆರ್. ಗೌಡ ಹಾಗೂ ಶಿರಾ ಉಪ ವಿಭಾಗದ ವ್ಯವಸ್ಥಾಪಕರಾದ ಗಿರೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಷ್ಟದ ಪ್ರಮಾಣವನ್ನು ಅಂದಾಜಿಸಿದ ಅಧಿಕಾರಿಗಳು, ಬರ್ಯಾಯ ವ್ಯವಸ್ಥೆ ಹಾಗೂ ಸ್ಥಳ ತೆರವು ಕಾರ್ಯಕ್ಕೆ ಕ್ರಮ ಕೈಗೊಂಡರು. ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಂಚಾರ ಸುಗಮಗೊಳಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja