Dailyhunt Logo
  • Light mode
    Follow system
    Dark mode
    • Play Story
    • App Story
US: ಒದ್ದೋಡಿಸ್ತೀವಿ ಎಂದರೂ ಜಗ್ಗದ ಇರಾನ್ - ಇಬ್ಬರು ರಾಯಭಾರಿಗಳಿಗೆ ಅಮೆರಿಕದಿಂದ ಗಡೀಪಾರ್!

US: ಒದ್ದೋಡಿಸ್ತೀವಿ ಎಂದರೂ ಜಗ್ಗದ ಇರಾನ್ - ಇಬ್ಬರು ರಾಯಭಾರಿಗಳಿಗೆ ಅಮೆರಿಕದಿಂದ ಗಡೀಪಾರ್!

Navasamaja.com 48 mins ago

ವಾಷಿಂಗ್ಟನ್: ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ‌(New York) ಆಗಮಿಸಿದ್ದ ಇರಾನ್ (Iran) ನಿಯೋಗದ ಇಬ್ಬರು ರಾಜತಾಂತ್ರಿಕರನ್ನು (Diplomats) ಅಮೆರಿಕ (US) ತಕ್ಷಣವೇ ದೇಶ ತೊರೆಯುವಂತೆ ಆದೇಶಿಸಿ ಹೊರಹಾಕಿದೆ.

ವಿಶ್ವಸಂಸ್ಥೆಯ ಅಧಿವೇಶನ ಮುಗಿದ ತಕ್ಷಣವೇ ಇರಾನ್ ನಿಯೋಗದ ಎಲ್ಲಾ ಸದಸ್ಯರು ದೇಶ ತೊರೆಯಬೇಕೆಂದು ಅಮೆರಿಕ ವಿದೇಶಾಂಗ ಇಲಾಖೆ ಸೂಚನೆ ನೀಡಿತ್ತು.

ಆದರೆ, ಈ ಆದೇಶವನ್ನು ಮೀರಿ ಇಬ್ಬರು ರಾಯಭಾರಿಗಳು ನ್ಯೂಯಾರ್ಕ್‌ನಲ್ಲೇ ಉಳಿದುಕೊಂಡಿದ್ದರು.

ಅಮೆರಿಕ ಅಧಿಕಾರಿಗಳ ಪ್ರಕಾರ, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಖಡಕ್ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಇಬ್ಬರು ಅಧಿಕಾರಿಗಳು ಇನ್ನೂ ನಗರದಲ್ಲೇ ಇರುವ ವಿಷಯ ತಿಳಿದ ತಕ್ಷಣ ಅಮೆರಿಕ ಆಡಳಿತವು ಇರಾನ್ ಮಿಷನ್‌ಗೆ ಮಾಹಿತಿ ನೀಡಿ, ತಕ್ಷಣವೇ ಜಾಗ ಖಾಲಿ ಮಾಡುವಂತೆ ಎಚ್ಚರಿಸಿತ್ತು. ಇದರ ಬೆನ್ನಲ್ಲೇ ಒಬ್ಬ ರಾಜತಾಂತ್ರಿಕ ಶುಕ್ರವಾರ ರಾತ್ರಿ ದೇಶ ತೊರೆದರೆ, ಮತ್ತೊಬ್ಬರು ಶನಿವಾರ ಬೆಳಗ್ಗೆ ನಿರ್ಗಮಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ಮತ್ತಷ್ಟು ಸಂಕೀರ್ಣಗೊಂಡಿವೆ. ಇತ್ತೀಚೆಗೆ ಎರಡೂ ದೇಶಗಳ ಪ್ರತಿನಿಧಿಗಳು ನ್ಯೂಯಾರ್ಕ್‌ನಲ್ಲಿ ಭೇಟಿಯಾಗಿದ್ದರಾದರೂ, ಮಾತುಕತೆಯ ಮುಂದಿನ ಹಂತದ ಬಗ್ಗೆ ಗೊಂದಲಗಳು ಮುಂದುವರಿದಿವೆ.

ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಇರಾನ್ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಮಾತುಕತೆ ಪುನರಾರಂಭವಾಗಬಹುದು ಎಂದು ಟ್ರಂಪ್ ಭರವಸೆ ವ್ಯಕ್ತಪಡಿಸಿದ್ದರೆ. ಇರಾನ್ ಸರ್ಕಾರಿ ಸುದ್ದಿ ಸಂಸ್ಥೆಯು ಪ್ರಸ್ತುತ ಯಾವುದೇ ನೇರ ಮಾತುಕತೆ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja