Dailyhunt Logo
  • Light mode
    Follow system
    Dark mode
    • Play Story
    • App Story
UT KHADER : ಕಳಪೆ ಸಿಹಿ ತಿಂಡಿ ಪೂರೈಕೆ - ಯಾರು ಸಿಕ್ಕಾಕೊಂಡ್ರೂ ಬಿಡಲ್ಲ ಎಂದ ಯು.ಟಿ. ಖಾದರ್

UT KHADER : ಕಳಪೆ ಸಿಹಿ ತಿಂಡಿ ಪೂರೈಕೆ - ಯಾರು ಸಿಕ್ಕಾಕೊಂಡ್ರೂ ಬಿಡಲ್ಲ ಎಂದ ಯು.ಟಿ. ಖಾದರ್

Navasamaja.com 1 week ago

ಬೆಂಗಳೂರು: ರಾಜ್ಯಾದ್ಯಂತ (Karnataka )ಕಳಪೆ ಹಾಗೂ ಕಲಬೆರಕೆ ಸಿಹಿತಿಂಡಿ (Sweet )ತಯಾರಿಸುವ ಘಟಕಗಳ ಮೇಲೆ ಆಹಾರ ಭದ್ರತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು (Food department )ದಿಢೀರ್ ದಾಳಿ ನಡೆಸಿದ್ದಾರೆ.

ಹಬ್ಬದ ಋತುವಿನಲ್ಲಿ ಸಾರ್ವಜನಿಕರಿಗೆ ನಕಲಿ ಸಿಹಿತಿಂಡಿಗಳು ಸರಬರಾಜಾಗುವುದನ್ನು ತಡೆಯಲು ಈ ಕಟ್ಟುನಿಟ್ಟಿನ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ಪ್ರಮುಖ ನಗರಗಳ ಪ್ರಸಿದ್ಧ ಸ್ವೀಟ್ ಸ್ಟಾಲ್‌ಗಳು ಮತ್ತು ತಯಾರಿಕಾ ಕೇಂದ್ರಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಅಸೈಂಟಿಫಿಕ್ ವಾತಾವರಣದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಳಪೆ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಅವಧಿ ಮುಗಿದ ಎಣ್ಣೆ, ರಾಸಾಯನಿಕ ಬಣ್ಣ ಹಾಗೂ ನಕಲಿ ಖೋವಾ ಬಳಸಿ ಸಿಹಿತಿಂಡಿ ತಯಾರಿಸುತ್ತಿರುವುದು ಕಂಡುಬಂದಿದೆ.

ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವರಾದ ಯು.ಟಿ. ಖಾದರ್ ಅವರು, "ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ನಿಯಮ ಉಲ್ಲಂಘಿಸಿ ಜನರ ಜೀವದ ಜೊತೆ ಆಟವಾಡುವವರು ಯಾರೇ ಆಗಿದ್ದರೂ ನಯಾಪೈಸೆ ಉಪಕಾರ ಅಥವಾ ದಾಕ್ಷಿಣ್ಯ ತೋರುವ ಪ್ರಶ್ನೆಯೇ ಇಲ್ಲ" ಎಂದು ಗರಂ ಆಗಿದ್ದಾರೆ.

ದಾಳಿಗೊಳಗಾದ ಘಟಕಗಳಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹಲವು ಕೇಂದ್ರಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಕೆಲವನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja