Dailyhunt
UTTAR PRADESH: ಟೈಪಿಂಗ್‌ ಟೆಸ್ಟ್‌ನಲ್ಲಿ ಫೇಲ್‌, ಕ್ಲರ್ಕ್‌ನಿಂದ ಅಟೆಂಡರ್ ಹುದ್ದೆಗೆ ಇಳಿಕೆ

UTTAR PRADESH: ಟೈಪಿಂಗ್‌ ಟೆಸ್ಟ್‌ನಲ್ಲಿ ಫೇಲ್‌, ಕ್ಲರ್ಕ್‌ನಿಂದ ಅಟೆಂಡರ್ ಹುದ್ದೆಗೆ ಇಳಿಕೆ

Navasamaja.com 3 weeks ago

ತ್ತರ ಪ್ರದೇಶ: ಕಾನ್ಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮೂವರು ನೌಕರರು ಟೈಪಿಂಗ್‌ ಟೆಸ್ಟ್‌ (Uttar Pradesh) ಪಾಸ್‌ ಆಗದ ಕಾರಣ ಅವರನ್ನು ಕೆಳದರ್ಜೆಯ ಹುದ್ದೆಗೆ ಇಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಅನುಕಂಪದ ಆಧಾರದ ಮೇಲೆ ನೇಮಕವಾಗಿದ್ದ ನೌಕರರು
ನಿಗದಿತ ವೇಗದಲ್ಲಿ ಟೈಪಿಂಗ್ ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಈ ನೌಕರರನ್ನ ಗ್ರೂಪ್-ಡಿ ಅಥವಾ ನಾಲ್ಕನೇ ದರ್ಜೆಯ ಹುದ್ದೆಗಳಿಗೆ ವರ್ಗಾಯಿಸಲಾಗಿದೆ. ಅನುಕಂಪದ ಆಧಾರದ ಮೇಲೆ ನೇಮಕಗೊಂಡಿದ್ದ ಪ್ರೇಮ್‌ನಾಥ್ ಯಾದವ್, ಅಮಿತ್ ಕುಮಾರ್ ಯಾದವ್ ಮತ್ತು ನೇಹಾ ಶ್ರೀವಾಸ್ತವ ಎಂಬುವವರೇ ಈ ಕಟ್ಟುನಿಟ್ಟಿನ ಕ್ರಮಕ್ಕೆ ಒಳಗಾದವರು.

ನಿಯಮಗಳ ಪ್ರಕಾರ, ಕಿರಿಯ ಸಹಾಯಕರಾಗಿ ನೇಮಕಗೊಂಡವರು ಒಂದು ವರ್ಷದೊಳಗೆ ನಿಮಿಷಕ್ಕೆ ಕನಿಷ್ಠ 25 ಪದಗಳನ್ನು ಟೈಪ್ ಮಾಡುವ ಪರೀಕ್ಷೆಯಲ್ಲಿ ಪಾಸ್ ಆಗುವುದು ಕಡ್ಡಾಯವಾಗಿತ್ತು. ಕಳೆದ 2024ರಲ್ಲಿ ನಡೆದ ಮೊದಲ ಪರೀಕ್ಷೆಯಲ್ಲಿ ಇವರು ಫೇಲ್ ಆದಾಗ ಎಚ್ಚರಿಕೆ ನೀಡಿದ್ದ ಜಿಲ್ಲಾಡಳಿತ, ಇವರ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿದಿತ್ತು.

ಎರಡನೇ ಅವಕಾಶ ನೀಡಿದ್ದ ಜಿಲ್ಲಾಡಳಿತ

ಬಳಿಕ 2025ರಲ್ಲಿ ಇವರಿಗೆ ಮತ್ತೊಂದು ಅವಕಾಶ ನೀಡಲಾಯಿತಾದರೂ, ಮೂವರು ನೌಕರರು ಎರಡನೇ ಬಾರಿಯೂ ಪರೀಕ್ಷೆಯಲ್ಲಿ ನಿಗದಿತ ವೇಗ ತಲುಪಲು ಸಾಧ್ಯವಾಗಲಿಲ್ಲ. ಸತತ ಎರಡು ಬಾರಿ ವಿಫಲರಾದ ನೌಕರರ ವಿರುದ್ಧ ಜಿಲ್ಲಾಧಿಕಾರಿ ಜಿತೇಂದ್ರ ಪ್ರತಾಪ್ ಸಿಂಗ್ ಅವರು ಕಠಿಣ ನಿಲುವು ತಳೆದಿದ್ದಾರೆ. ಅರ್ಹತೆ ಇಲ್ಲದಿದ್ದರೂ ಅದೇ ಹುದ್ದೆಯಲ್ಲಿ ಮುಂದುವರಿಸಲು ಸಾಧ್ಯವಿಲ್ಲದ ಕಾರಣ, ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಲ್ಕನೇ ದರ್ಜೆಯ ನೌಕರರನ್ನಾಗಿ ನೇಮಿಸಿ ಆದೇಶಿಸಿದ್ದಾರೆ. ಸದ್ಯ ಪ್ರೇಮ್‌ನಾಥ್ ಯಾದವ್ ಜಿಲ್ಲಾಧಿಕಾರಿಗಳ ಕ್ಯಾಂಪ್ ಕಚೇರಿಯಲ್ಲಿ ಹಾಗೂ ಉಳಿದ ಇಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿ ದರ್ಜೆ ನೌಕರರಾಗಿ ಕೆಲಸ ಮುಂದುವರಿಸಬೇಕಿದೆ. ಸರ್ಕಾರಿ ಕೆಲಸದಲ್ಲಿ ದಕ್ಷತೆ ಮತ್ತು ಅರ್ಹತೆ ಮುಖ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

ವೃದ್ಧೆಗೆ ತಲುಪದ ಸರ್ಕಾರಿ ಸೌಲಭ್ಯ - ಕಣ್ಣೀರಿಟ್ಟರೂ ಕೇಳೋರಿಲ್ಲ!

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿದ್ದರೂ, ಬಡವರಿಗಾಗಿ ಸರ್ಕಾರ ಹತ್ತಾರು ಯೋಜನೆಗಳನ್ನು ಘೋಷಿಸುತ್ತಿದ್ದರೂ, ತುಮಕೂರು (Tumkur) ಜಿಲ್ಲೆಯ ಸೋಮನಹಳ್ಳಿಯ 70 ವರ್ಷದ ದಲಿತ ವೃದ್ಧೆ ಕರಿಯಮ್ಮ (Old Women) ಅವರಿಗೆ ಮಾತ್ರ ಇನ್ನೂ ಬದುಕುವ ಹಕ್ಕು ಸಿಕ್ಕಿಲ್ಲ. ಮತ ಕೇಳಲು ಬರುವ ರಾಜಕಾರಣಿಗಳಿಗೆ ಈಕೆಯ ಓಟು ಬೇಕು, ಆದರೆ ಆಕೆಯ ಕಣ್ಣೀರು ಒರೆಸಲು ಮಾತ್ರ ಯಾರೂ ಇಲ್ಲದಂತಾಗಿದೆ.

ರಾಜ್ಯ ಸರ್ಕಾರ ಅಬ್ಬರದ ಪ್ರಚಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಈ ಅಜ್ಜಿಯ ಪಾಲಿಗೆ ಕೇವಲ ಜಾಹೀರಾತುಗಳಿಗಷ್ಟೇ ಸೀಮಿತವಾಗಿವೆ. ಇಂದಿನವರೆಗೂ ಕರಿಯಮ್ಮ ಅವರಿಗೆ ಅನ್ನಭಾಗ್ಯದ ಅಕ್ಕಿಯಾಗಲಿ ಅಥವಾ ಗೃಹಲಕ್ಷ್ಮಿಯ ಹಣವಾಗಲಿ ಕೈಸೇರಿಲ್ಲ. ದಿನದ ತುತ್ತು ಅನ್ನಕ್ಕೂ ಪರದಾಡುವಂತಾಗಿರುವ ಅಜ್ಜಿಯ ಬದುಕು ಈಗ ಬೀದಿಗೆ ಬಿದ್ದಿದೆ. ಸರ್ಕಾರದ ಸೌಲಭ್ಯಗಳು ಮನೆ ಬಾಗಿಲಿಗೆ ತಲುಪುತ್ತವೆ ಎಂಬ ಭರವಸೆ ಕರಿಯಮ್ಮನ ಪಾಲಿಗೆ ಬರೀ ಮರೀಚಿಕೆಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja