Dailyhunt Logo
  • Light mode
    Follow system
    Dark mode
    • Play Story
    • App Story
VB-G RAM G: ಆರಂಭದಲ್ಲೇ ರಾಮ್ ರಾಮ್ ಎಂದ ಜಿ ರಾಮ್ ಜಿ ಯೋಜನೆ - ರಾಜ್ಯದಲ್ಲಿ ಕೆಲಸದ ಪ್ರಮಾಣ ಶೇ 78 ಕುಸಿತ!

VB-G RAM G: ಆರಂಭದಲ್ಲೇ ರಾಮ್ ರಾಮ್ ಎಂದ ಜಿ ರಾಮ್ ಜಿ ಯೋಜನೆ - ರಾಜ್ಯದಲ್ಲಿ ಕೆಲಸದ ಪ್ರಮಾಣ ಶೇ 78 ಕುಸಿತ!

Navasamaja.com 1 week ago

ಬೆಂಗಳೂರು: ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ (MGNREGA) ಯೋಜನೆಯ ಸ್ವರೂಪವನ್ನು ಬದಲಿಸಿ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ತಂದಿರುವ ನೂತನ 'ವಿಬಿ ಜಿ ರಾಮ್‌ ಜಿ' ಯೋಜನೆಗೆ (VB-G RAM G Bill) ಕರ್ನಾಟಕದಲ್ಲಿ (Karnataka) ಮೊದಲ ತಿಂಗಳಲ್ಲೇ ಭಾರಿ ಹಿನ್ನಡೆಯಾಗಿದೆ.

ಹೊಸ ಕಾಯ್ದೆಯಿಂದ ಕೂಲಿ ಕಾರ್ಮಿಕರಿಗೆ ಹಾಗೂ ಗ್ರಾಮೀಣ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತಾದರೂ, ಅನುಷ್ಠಾನಗೊಂಡ ಮೊದಲ ತಿಂಗಳಲ್ಲೇ ಮಾನವ ದಿನಗಳ ಸೃಜನೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ. ರಾಜ್ಯದ 5,958 ಗ್ರಾಮಗಳ 4,991 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 11,555 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಜುಲೈ 1 ರಿಂದ 31ರವರೆಗೆ ಕೇವಲ 13.06 ಲಕ್ಷ ಮಾನವ ದಿನಗಳು ಮಾತ್ರ ಸೃಷ್ಟಿಯಾಗಿವೆ.

ಕಳೆದ ವರ್ಷದ ಜುಲೈ ತಿಂಗಳಲ್ಲಿ ಮ-ನರೇಗಾ ಯೋಜನೆಯಡಿ 61.49 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೆಲಸ ಸೃಷ್ಟಿಯ ಪ್ರಮಾಣದಲ್ಲಿ ಶೇಕಡಾ 78.77ರಷ್ಟು ಭಾರಿ ಇಳಿಕೆಯಾಗಿದ್ದು, ನೂತನ ಯೋಜನೆಯ ಆರಂಭಿಕ ಯಶಸ್ಸಿನ ಕುರಿತು ಸಾರ್ವಜನಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಹಲವು ಅನುಮಾನ ಮತ್ತು ಪ್ರಶ್ನೆಗಳು ಮೂಡುವಂತೆ ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja