Dailyhunt Logo
  • Light mode
    Follow system
    Dark mode
    • Play Story
    • App Story
VIRAL: 700 ರೂಪಾಯಿ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡ್ತಿದೆಯಾ ಆರ್‌ಬಿಐ?

VIRAL: 700 ರೂಪಾಯಿ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡ್ತಿದೆಯಾ ಆರ್‌ಬಿಐ?

Navasamaja.com 4 months ago

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಕರೆನ್ಸಿ ನೋಟುಗಳನ್ನು ಬದಲಾಯಿಸಲು ಸಿದ್ಧತೆ ನಡೆಸುತ್ತಿದೆಯಾ ಮತ್ತು ಶೀಘ್ರದಲ್ಲೇ 700 ರೂಪಾಯಿಯ ಹೊಸ ನೋಟುಗಳನ್ನು ಮಾರುಕಟ್ಟೆಗೆ ತರಲಿದೆಯಾ ಎಂಬ ಚರ್ಚೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Viral News) ಜೋರಾಗಿ ನಡೆಯುತ್ತಿದೆ.

ವೈರಲ್‌ ಆಗುತ್ತಿದೆ 700 ರೂಪಾಯಿ ನೋಟಿನ ಫೋಟೋ
ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ 700 ರೂಪಾಯಿ ಮುಖಬೆಲೆಯ ಹೊಸ ವಿನ್ಯಾಸದ ನೋಟಿನ ಚಿತ್ರವನ್ನು ನೋಡಿ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಈ ಹೊಸ ಬದಲಾವಣೆಯ ಬಗ್ಗೆ ಭಾರೀ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಆರ್‌ಬಿಐ ಇಂತಹ ಯಾವುದೇ ಹೊಸ ನೋಟುಗಳನ್ನು ಬಿಡುಗಡೆ ಮಾಡುತ್ತಿಲ್ಲ ಎನ್ನುವುದೇ ಅಸಲಿ ಸಂಗತಿಯಾಗಿದೆ.

ನಕಲಿ ಫೋಟೋ ಸಖತ್‌ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿರುವ ಈ 700 ರೂಪಾಯಿ ನೋಟಿನ ಚಿತ್ರ ಸಂಪೂರ್ಣವಾಗಿ ನಕಲಿಯಾಗಿದ್ದು, ಇದನ್ನು ಕಂಪ್ಯೂಟರ್ ಅಥವಾ ಮೊಬೈಲ್ ಆಪ್‌ಗಳ ಮೂಲಕ ಎಡಿಟ್ ಮಾಡಿ ಸೃಷ್ಟಿಸಲಾಗಿದೆ. ಆರ್‌ಬಿಐ ನಿಯಮಗಳ ಪ್ರಕಾರ ಪ್ರಸ್ತುತ ಭಾರತದಲ್ಲಿ 10, 20, 50, 100, 200 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿವೆ. ದೇಶದ ಹಣಕಾಸು ವ್ಯವಸ್ಥೆಯಲ್ಲಿ 700 ರೂಪಾಯಿಯ ಹೊಸ ನೋಟನ್ನು ಪರಿಚಯಿಸುವ ಯಾವುದೇ ಪ್ರಸ್ತಾಪ ಅಥವಾ ಯೋಜನೆ ಕೇಂದ್ರ ಬ್ಯಾಂಕ್‌ನ ಮುಂದಿಲ್ಲ ಎಂದು ಬ್ಯಾಂಕಿಂಗ್ ಮೂಲಗಳು ಸ್ಪಷ್ಟಪಡಿಸಿವೆ.

ಸಾಮಾನ್ಯವಾಗಿ ಇಂಟರ್ನೆಟ್‌ನಲ್ಲಿ ಜನರ ಗಮನ ಸೆಳೆಯಲು ಮತ್ತು ಲೈಕ್ಸ್ ಗಿಟ್ಟಿಸಿಕೊಳ್ಳಲು ಕೆಲವರು ಇಂತಹ ಕಾಲ್ಪನಿಕ ವಿನ್ಯಾಸದ ನೋಟುಗಳನ್ನು ಸೃಷ್ಟಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಾರೆ. ಆರ್‌ಬಿಐ ಯಾವುದೇ ಹೊಸ ನೋಟು ಅಥವಾ ಬದಲಾವಣೆಯನ್ನು ತರುವ ಮುನ್ನ ತನ್ನ ಅಧಿಕೃತ ವೆಬ್‌ಸೈಟ್ ಮತ್ತು ಸರ್ಕಾರಿ ಪ್ರಕಟಣೆಗಳ ಮೂಲಕ ದೇಶದ ಜನರಿಗೆ ಅಧಿಕೃತವಾಗಿ ಮಾಹಿತಿ ನೀಡುತ್ತದೆ. ಆದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಇಂತಹ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು ಮತ್ತು ಇವುಗಳನ್ನು ಇತರರಿಗೆ ಹಂಚಿಕೊಳ್ಳಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕಾಗದದ ನೋಟು ಮುದ್ರಣ ವೆಚ್ಚಕ್ಕೆ ಬ್ರೇಕ್; ಪ್ಲಾಸ್ಟಿಕ್ ಕರೆನ್ಸಿ ತರಲು ಆರ್‌ಬಿಐ ಗಂಭೀರ ಚಿಂತನೆ

ದೇಶದಲ್ಲಿ ನಗದು ಹಣದ ಬೇಡಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ನಡುವೆ ಬ್ಯಾಂಕ್ ನೋಟುಗಳ ಮುದ್ರಣ ವೆಚ್ಚವನ್ನು ತಗ್ಗಿಸಲು ಮತ್ತು ಅವುಗಳ ಬಾಳಿಕೆಯನ್ನ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೆ 'ಪಾಲಿಮರ್' ಅಂದರೆ ಪ್ಲಾಸ್ಟಿಕ್ ನೋಟುಗಳನ್ನು (Plastic Note) ಪರಿಚಯಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಿದೆ.

ಪ್ಲಾಸ್ಟಿಕ್ ನೋಟುಗಳ ಮುದ್ರಣ ವೆಚ್ಚ ತೀರಾ ಕಡಿಮೆ
ಇತ್ತೀಚೆಗೆ ಪಾಟ್ನಾ ಮತ್ತು ಮುಂಬೈನಲ್ಲಿ ನಡೆದ ಆರ್‌ಬಿಐನ ಸತತ ಎರಡು ಆಡಳಿತ ಮಂಡಳಿ ಸಭೆಗಳಲ್ಲಿ ಈ ಪ್ರಸ್ತಾಪದ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿದೆ. ಸದ್ಯ ಚಲಾವಣೆಯಲ್ಲಿರುವ ಕಾಗದದ ನೋಟುಗಳಿಗೆ ಹೋಲಿಸಿದರೆ ಪ್ಲಾಸ್ಟಿಕ್ ನೋಟುಗಳ ಮುದ್ರಣ ವೆಚ್ಚ ತೀರಾ ಕಡಿಮೆ ಇರಲಿದ್ದು, ಇವುಗಳು ಸುಲಭವಾಗಿ ಹರಿದು ಹೋಗುವುದಿಲ್ಲ. ಅಷ್ಟೇ ಅಲ್ಲದೆ, ಎಟಿಎಂ ಯಂತ್ರಗಳ ಮೂಲಕವೇ ಈ ಪ್ಲಾಸ್ಟಿಕ್ ನೋಟುಗಳನ್ನು ವಿತರಿಸಲು ಬೇಕಾದ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಯೋಜನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja