Dailyhunt Logo
  • Light mode
    Follow system
    Dark mode
    • Play Story
    • App Story
VIRAL: ಆಟೋ ಚಾಲಕನಿಗೆ ತನ್ನ ಲ್ಯಾಂಬೋರ್ಗಿನಿ ಕಾರ್ ಕೀ ಕೊಟ್ಟು ಆಟೋ ಹತ್ತಿದ ಕೋಟ್ಯಾಧಿಪತಿ!-VIDEO

VIRAL: ಆಟೋ ಚಾಲಕನಿಗೆ ತನ್ನ ಲ್ಯಾಂಬೋರ್ಗಿನಿ ಕಾರ್ ಕೀ ಕೊಟ್ಟು ಆಟೋ ಹತ್ತಿದ ಕೋಟ್ಯಾಧಿಪತಿ!-VIDEO

Navasamaja.com 3 months ago

ಬೆಂಗಳೂರು:ನಗರದ ರಸ್ತೆಯೊಂದರಲ್ಲಿ ಆಟೋ (Auto) ಚಾಲಕನೊಬ್ಬ ತನ್ನ ಕನಸನ್ನು ಹೇಳಿಕೊಂಡಾಗ, ಉದ್ಯಮಿಯೋಬ್ಬ (Businessman) ಕೋಟ್ಯಂತರ ಮೌಲ್ಯದ ಲ್ಯಾಂಬೋರ್ಗಿನಿ (Lamborghini) ಸೂಪರ್‌ಕಾರ್ ಕೀಯನ್ನು ಆತನ ಕೈಗಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ತಾವು ಸ್ವತಃ ಆಟೋ ಹತ್ತಿ ಪ್ರಯಾಣ ಬೆಳೆಸಿದ್ದಾರೆ.

ಸದ್ಯ ಈ ವಿಡಿಯೋ ( viral video) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಧೂಳೆಬ್ಬಿಸುತ್ತಿದೆ.

ಬೆಂಗಳೂರಿನ ರಸ್ತೆಯಲ್ಲಿ ಉದ್ಯಮಿಯೊಬ್ಬರು ತಮ್ಮಲ್ಯಾಂಬೋರ್ಗಿನಿ ಕಾರಿನಲ್ಲಿ ಸಾಗುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಆಟೋ ಚಾಲನೆ ಮಾಡಿಕೊಂಡು ಬಂದ ಚಾಲಕನೊಬ್ಬ, ಕಾರಿನಲ್ಲಿದ್ದ ಉದ್ಯಮಿಯನ್ನು ಗುರುತಿಸಿದ್ದಾನೆ. "ಸರ್, ನಾನು ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ವಿಡಿಯೋಗಳನ್ನು ಸದಾ ನೋಡುತ್ತಿರುತ್ತೇನೆ. ನನಗೂ ಒಂದು ದಿನ ಇಂತಹ ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸಬೇಕು ಎಂಬ ದೊಡ್ಡ ಕನಸಿದೆ" ಎಂದು ತನ್ನ ಆಸೆಯನ್ನು ಬಿಚ್ಚಿಟ್ಟಿದ್ದಾನೆ.

ಸಾಮಾನ್ಯವಾಗಿ ಇಂತಹ ಮಾತುಗಳನ್ನು ಕೇಳಿದರೆ ಯಾರಾದರೂ ನಕ್ಕು ಸುಮ್ಮನಾಗುತ್ತಾರೆ. ಆದರೆ ಈ ಉದ್ಯಮಿ ಹಾಗೆ ಮಾಡಲಿಲ್ಲ. ತಕ್ಷಣವೇ ರಸ್ತೆ ಬದಿಗೆ ಕಾರು ನಿಲ್ಲಿಸುವಂತೆ ಆಟೋ ಚಾಲಕನಿಗೆ ಸೂಚಿಸಿದರು. ಕಾರಿನಿಂದ ಕೆಳಗಿಳಿದ ಉದ್ಯಮಿ, ಕಿಂಚಿತ್ತೂ ಯೋಚಿಸದೆ ಕೋಟಿ ಮೌಲ್ಯದ ಕಾರಿನ ಕೀಯನ್ನು ಅಪರಿಚಿತ ಆಟೋ ಚಾಲಕನ ಕೈಗಿಟ್ಟು ಸರ್ಪ್ರೈಸ್ ನೀಡಿದ್ದಾರೆ. ಇದಾದ ಬಳಿಕ ರಸ್ತೆಯಲ್ಲಿ ದಾರಿಹೋಕರೆಲ್ಲ ಕಣ್ಣುರಳಿಸಿ ನೋಡುವಂತಹ ದೃಶ್ಯ ಕಂಡುಬಂದಿದೆ. ಇಬ್ಬರೂ ತಮ್ಮ ವಾಹನಗಳನ್ನು ಪರಸ್ಪರ ಬದಲಾಯಿಸಿಕೊಂಡಿದ್ದಾರೆ. ಆಟೋ ಚಾಲಕ ಅತ್ಯಂತ ಎಚ್ಚರಿಕೆಯಿಂದ, ಮುಖದಲ್ಲಿ ಕೋಟಿ ರೂಪಾಯಿ ಗೆದ್ದ ನಗುವಿನೊಂದಿಗೆ ಜಗತ್ತಿನ ಅತ್ಯಾಧುನಿಕ ಸೂಪರ್‌ಕಾರ್ ಅನ್ನು ಡ್ರೈವ್ ಮಾಡಿಕೊಂಡು ಸಾಗಿದ್ದಾನೆ. ಇತ್ತ ಕೋಟ್ಯಧಿಪತಿ ಉದ್ಯಮಿ ಆಟೋ ಸೀಟಿನಲ್ಲಿ ಕುಳಿತು ನಗುತ್ತಾ ಸವಾರಿ ಮಾಡಿದ್ದಾರೆ. ಇಬ್ಬರೂ ಪಕ್ಕಪಕ್ಕದಲ್ಲೇ ತಮ್ಮ ವಾಹನಗಳಲ್ಲಿ ಸಾಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಅಪರೂಪದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಉದ್ಯಮಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಆಟೋದಲ್ಲಿ ಕುಳಿತ ತಕ್ಷಣವೇ ನನ್ನ ಹಳೆಯ ಕಷ್ಟದ ದಿನಗಳು ಕಣ್ಣಮುಂದೆ ಬಂದವು. ವೃತ್ತಿಜೀವನದ ಆರಂಭದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೆ. ಆ ದಿನಗಳಲ್ಲಿ ಆಟೋ ಬಾಡಿಗೆ ನೀಡಲು ಕೂಡ ನನ್ನ ಬಳಿ ಹಣವಿರುತ್ತಿರಲಿಲ್ಲ. ಹಲವು ವರ್ಷಗಳ ನಂತರ ಇಂದು ಮತ್ತೆ ಆಟೋದಲ್ಲಿ ಪ್ರಯಾಣಿಸಿದಾಗ, ಜೀವನದಲ್ಲಿ ನಾನು ಎಷ್ಟು ದೂರ ಸಾಗಿಬಂದಿದ್ದೇನೆ ಎಂಬುದು ನನಗೆ ಅರಿವಾಯಿತು ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರ ದಿಲ್ ಗೆದ್ದ ಶ್ರೀಮಂತನ ಸರಳತೆ!
ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದು, ಲಕ್ಷಾಂತರ ಮಂದಿ ಉದ್ಯಮಿಯ ಸರಳತೆ ಹಾಗೂ ವಿಶ್ವಾಸಕ್ಕೆ ಫಿದಾ ಆಗಿದ್ದಾರೆ. ಬ್ರೋ, ನೀವು ಹಣದ ಜೊತೆಗೆ ಜನರ ಗೌರವವನ್ನೂ ಸಂಪಾದಿಸಿದ್ದೀರಿ ಕಾಮೆಂಟ್ ಮಾಡಿದ್ದಾರೆ.

: CRIME: ಅಕ್ರಮವಾಗಿ ರಸಗೊಬ್ಬರ ದಾಸ್ತಾನು, ವಿವಿಧ ಮಾರಾಟ ಕೇಂದ್ರಗಳ ಮೇಲೆ ಅಧಿಕಾರಿಗಳಿಂದ ದಾಳಿ

Dailyhunt
Disclaimer: This content has not been generated, created or edited by Dailyhunt. Publisher: Navasamaja