Dailyhunt Logo
  • Light mode
    Follow system
    Dark mode
    • Play Story
    • App Story
VIRAL NEWS: ಹೊಸ ಬೈಕ್‌ಗೆ ಹಾಕಬೇಕಿದ್ದ ಹಾರ ಹೆಂಡತಿಯ ಕತ್ತಿಗೇ ಹಾಕಿದ ಮುಗ್ಧ- VIDEO

VIRAL NEWS: ಹೊಸ ಬೈಕ್‌ಗೆ ಹಾಕಬೇಕಿದ್ದ ಹಾರ ಹೆಂಡತಿಯ ಕತ್ತಿಗೇ ಹಾಕಿದ ಮುಗ್ಧ- VIDEO

Navasamaja.com 2 weeks ago

ಹಾರಾಷ್ಟ್ರ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಎಷ್ಟೋ ವಿಚಾರಗಳು ಹರಿದಾಡುತ್ತವೆ. ಆದರೆ ಇಲ್ಲೊಂದು ಮುದ್ದಾದ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು, ಮುಖದಲ್ಲಿ ಮಂದಹಾಸ ಮೂಡಿಸುವಂತಿದೆ. ಹೊಸದಾಗಿ ಖರೀದಿಸಿದ ಬೈಕ್‌ಗೆ (Bike) ಹಾಕಲು ನೀಡಿದ್ದ ಹೂವಿನ ಹಾರವನ್ನು, ವೃದ್ಧರೊಬ್ಬರು ತಮ್ಮ ಪತ್ನಿಗೆ (Wife) ಹಾಕಿ ಗೌರವಿಸಿದ ಅಪರೂಪದ ಹಾಗೂ ತಮಾಷೆಯ ಘಟನೆ ಮಹಾರಾಷ್ಟ್ರದ ಶೋರೂಂ ಒಂದರಲ್ಲಿ ನಡೆದಿದೆ.

ಶೋರೂಂನಲ್ಲಿ ನಡೆದಿದ್ದೇನು?

ವೃದ್ಧ ದಂಪತಿ ತಾವಿಬ್ಬರೂ ಸೇರಿ ಹೊಸ ಬೈಕ್ ಖರೀದಿಸಲು ಶೋರೂಂಗೆ ಬಂದಿದ್ದರು. ಭಾರತೀಯ ಸಂಪ್ರದಾಯದಂತೆ ಹೊಸ ವಾಹನವನ್ನು ಹಸ್ತಾಂತರಿಸುವಾಗ ಪೂಜೆ ಸಲ್ಲಿಸಿ, ಹಾರ ಹಾಕಿ ನೀಡಲಾಗುತ್ತದೆ. ಅದರಂತೆ ಶೋರೂಂ ಸಿಬ್ಬಂದಿ ವೃದ್ಧನ ಕೈಗೆ ಹೂವಿನ ಹಾರವನ್ನು ನೀಡಿದ್ದಾರೆ. ವೃದ್ಧ, ಕ್ಷಣವೂ ಯೋಚಿಸದೇ ಕೈಲಿದ್ದ ಹಾರವನ್ನು ಪಕ್ಕದಲ್ಲೇ ನಿಂತಿದ್ದ ತನ್ನ ಪ್ರೀತಿಯ ಪತ್ನಿಯ ಕತ್ತಿಗೆ ಹಾಕಿದ್ದಾರೆ.

ಪತಿ ತನ್ನ ಕತ್ತಿಗೆ ಹಾರ ಹಾಕುತ್ತಿದ್ದಂತೆ ಪತ್ನಿ ಕ್ಷಣಕಾಲ ಗೊಂದಲಕ್ಕೊಳಗಾದರೂ, ನಂತರ ಮುಗುಳ್ನಕ್ಕಿದ್ದಾರೆ. ಇದನ್ನು ನೋಡಿ ಶೋರೂಂನಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರಲ್ಲಿ ನಗುವಿನ ಅಲೆ ಎದ್ದಿದೆ. ತಕ್ಷಣವೇ ಮುಗುಳ್ನಗುತ್ತಲೇ ಮಧ್ಯಪ್ರವೇಶಿಸಿದ ಸಿಬ್ಬಂದಿ, ಈ ಹಾರವನ್ನು ಬೈಕ್‌ಗೆ ಹಾಕಬೇಕು ಎಂದು ತಿಳಿಹೇಳಿದ್ದಾರೆ. ನಂತರ ಹಾರವನ್ನು ಹೊಸ ಬೈಕ್‌ಗೆ ತೊಡಿಸಿದ್ದಾರೆ.

ನಗರ ಪ್ರದೇಶದ ಜಂಜಾಟಕ್ಕಿಂತ ಭಿನ್ನವಾದ ಗ್ರಾಮೀಣ ಭಾಗದ ಜನರ ಈ ಅಪರೂಪದ ಪ್ರೀತಿ ಮತ್ತು ಮುಗ್ಧತೆ ಎಲ್ಲರ ಗಮನ ಸೆಳೆದಿದೆ. ತಮ್ಮ ಜೀವನದಲ್ಲೇ ಬಹುಶಃ ಮೊದಲ ಬಾರಿಗೆ ಹೊಸ ಬೈಕ್ ಖರೀದಿಸುತ್ತಿದ್ದ ಈ ವೃದ್ಧನಿಗೆ ವಸ್ತುಗಳಿಗಿಂತಲೂ ತನ್ನ ಸಂಗಾತಿಯ ಮೇಲಿದ್ದ ಗೌರವವೇ ಮುಖ್ಯವಾಯಿತು ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja