Dailyhunt Logo
  • Light mode
    Follow system
    Dark mode
    • Play Story
    • App Story
VIRAL NEWS: ಮಧ್ಯರಾತ್ರಿ ಪ್ರೇಯಸಿ ಮನೆಗೆ ಬಂದ ಪ್ರೇಮಿ- ರೆಡ್ ಹ್ಯಾಂಡ್ ಆಗಿ ಹಿಡಿದು ಮದುವೆ ಮಾಡಿಸಿದ ಗ್ರಾಮಸ್ಥರು!

VIRAL NEWS: ಮಧ್ಯರಾತ್ರಿ ಪ್ರೇಯಸಿ ಮನೆಗೆ ಬಂದ ಪ್ರೇಮಿ- ರೆಡ್ ಹ್ಯಾಂಡ್ ಆಗಿ ಹಿಡಿದು ಮದುವೆ ಮಾಡಿಸಿದ ಗ್ರಾಮಸ್ಥರು!

Navasamaja.com 2 weeks ago

ರಾಂಚಿ: ಜಾರ್ಖಂಡ್‌ನ (Jharkhand) ಗರ್ವಾ ಜಿಲ್ಲೆಯಲ್ಲಿ ವಿಚಿತ್ರ ಹಾಗೂ ರೋಚಕ ಘಟನೆಯೊಂದು (Viral News) ನಡೆದಿದೆ. ದೀರ್ಘಕಾಲದಿಂದ ಪ್ರೀತಿಸುತ್ತಿದ್ದ ಯುವಕನೊಬ್ಬ ಮಧ್ಯರಾತ್ರಿ ತನ್ನ ಪ್ರೇಯಸಿಯನ್ನು (Lover) ಭೇಟಿಯಾಗಲು ಆಕೆಯ ಮನೆಗೆ ಬಂದಿದ್ದಾಗ, ಗ್ರಾಮಸ್ಥರು ಮತ್ತು ಕುಟುಂಬದವರು ಆತನನ್ನು ಅಕ್ಕಪಕ್ಕದವರ ಸಹಾಯದಿಂದ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಆದರೆ, ಈ ಕಥೆ ಇಲ್ಲಿಗೆ ಮುಗಿಯಲಿಲ್ಲ. ಮುಂದೆ ನಡೆದ ಟ್ವಿಸ್ಟ್ ಈಗ ಇಡೀ ಭಾಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸ್ಥಳೀಯ ಮೂಲಗಳ ಪ್ರಕಾರ, ಈ ಜೋಡಿ ಕಳೆದ ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಭಾನುವಾರ ತಡರಾತ್ರಿ ಯುವಕ ಯಾರಿಗೂ ತಿಳಿಯದಂತೆ ಪ್ರೇಯಸಿ ಮನೆಗೆ ಬಂದಿದ್ದನು. ಈ ವೇಳೆ ಆತನ ಓಡಾಟವನ್ನು ಗಮನಿಸಿದ ಯುವತಿಯ ಕುಟುಂಬದವರು ಹಾಗೂ ಗ್ರಾಮಸ್ಥರು ಇಬ್ಬರನ್ನೂ ಒಟ್ಟಿಗೆ ಹಿಡಿದಿಟ್ಟಿದ್ದಾರೆ. ಮಧ್ಯರಾತ್ರಿಯ ಈ ಹೈಡ್ರಾಮಾದಿಂದಾಗಿ ಗ್ರಾಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಮರುದಿನ ಬೆಳಗ್ಗೆ ಈ ವಿಷಯದ ಬಗ್ಗೆ ಗ್ರಾಮದಲ್ಲಿ ದೊಡ್ಡ ಪಂಚಾಯಿತಿಯೇ ಜರುಗಿತು. ಉಭಯ ಕುಟುಂಬದವರು ಹಾಗೂ ಗ್ರಾಮದ ಪ್ರಮುಖರು ಸೇರಿ ಈ ಸಮಸ್ಯೆಯನ್ನು ಬಗೆಹರಿಸಲು ಸಭೆ ನಡೆಸಿದರು. ಕೊನೆಗೆ ಪ್ರೇಮಿಗಳಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಮದುವೆಯಾಗಲು ಒಪ್ಪಿಗೆ ಸೂಚಿಸಿದರು.

ಪ್ರೇಮಿಗಳ ಮನಸ್ಸನ್ನು ಅರ್ಥಮಾಡಿಕೊಂಡ ಗ್ರಾಮಸ್ಥರು ಮತ್ತು ಪೋಷಕರು, ಯಾವುದೇ ಗಲಾಟೆ ಮಾಡದೆ ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿದರು. ಅದರಂತೆ ಸೋಮವಾರ ಇಡೀ ಗ್ರಾಮಸ್ಥರ ಸಮ್ಮುಖದಲ್ಲಿ ಈ ಜೋಡಿಯ ಮದುವೆಯನ್ನು ಅತ್ಯಂತ ಸಡಗರದಿಂದ ನೆರವೇರಿಸಲಾಯಿತು. ತಡರಾತ್ರಿ ಪ್ರೇಯಸಿ ಸಿಗಲು ಬಂದು ಸಿಕ್ಕಿಬಿದ್ದ ಯುವಕ, ಮರುದಿನವೇ ಅದೇ ಯುವತಿಯ ಕೈಹಿಡಿದು ಗಂಡನಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಈ ಅಪರೂಪದ ಮದುವೆ ಸದ್ಯ ಜಾರ್ಖಂಡ್‌ನ ಈ ಭಾಗದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja