Dailyhunt
VIRAL NEWS: ಮಗನಿಗೆ 'ಭಾರತ್‌' ಎಂದು ಹೆಸರಿಟ್ಟ ಪಾಕ್ ಮೂಲದ ಸೀಮಾ ಹೈದರ್‌

VIRAL NEWS: ಮಗನಿಗೆ 'ಭಾರತ್‌' ಎಂದು ಹೆಸರಿಟ್ಟ ಪಾಕ್ ಮೂಲದ ಸೀಮಾ ಹೈದರ್‌

Navasamaja.com 1 week ago

ನೋಯ್ಡಾ: ಪಾಕಿಸ್ತಾನದಿಂದ ಭಾರತಕ್ಕೆ ಬಂದು ಭಾರೀ ಚರ್ಚೆಗೆ (Viral News) ಕಾರಣವಾಗಿದ್ದ ಸೀಮಾ ಹೈದರ್, ಈಗ ತಮ್ಮ ನವಜಾತ ಶಿಶುವಿನ ನಾಮಕರಣ ಶಾಸ್ತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ವಿಶೇಷ ಹೆಸರಿಟ್ಟ ಸೀಮಾ
ನೋಯ್ಡಾದ ರಬುಪುರದಲ್ಲಿನ ಅವರ ಮನೆಯಲ್ಲಿ ನಡೆದ ಸಂಪ್ರದಾಯಬದ್ಧ ಸಮಾರಂಭದಲ್ಲಿ, ಸೀಮಾ ಮತ್ತು ಅವರ ಪತಿ ಸಚಿನ್ ಮೀನಾ ತಮ್ಮ ಪುತ್ರನಿಗೆ 'ಭಾರತ್' ಎಂದು ಹೆಸರಿಟ್ಟಿದ್ದಾರೆ.

ನಾಮಕರಣದ ವೇಳೆ ಮಾತನಾಡಿದ ಸೀಮಾ ಹೈದರ್, ಹಿಂದೂ ಧರ್ಮದ ಸಂಪ್ರದಾಯಗಳು ತಮಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಹಿಂದೂ ಧರ್ಮವನ್ನು ಪಾಲಿಸುತ್ತಿರುವುದಕ್ಕೆ ತಮಗೆ ಹೆಮ್ಮೆಯಿದೆ ಎಂದಿರುವ ಅವರು, ಇಂತಹ ಸಣ್ಣ ಪುಟ್ಟ ಹಬ್ಬಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಗುವಿಗೆ ಹೆಸರನ್ನು ಆಯ್ಕೆ ಮಾಡುವ ಬಗ್ಗೆ ಸಹ ಮಾತನಾಡಿದ ಅವರು, ಪುರೋಹಿತರು 'ಭ' ಅಕ್ಷರದಿಂದ ಹೆಸರು ಇಡಲು ಸೂಚಿಸಿದ್ದರು. ಹೀಗಾಗಿ ತಮಗೆ ಅತ್ಯಂತ ಅರ್ಥಪೂರ್ಣ ಮತ್ತು ಸೂಕ್ತ ಎನಿಸಿದ 'ಭಾರತ್' ಎಂಬ ಹೆಸರನ್ನು ಇಡಲು ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ.

ದೇಶದ ಮೇಲಿನ ಪ್ರೀತಿ ವ್ಯಕ್ತಪಡಿಸಿದ ಸೀಮಾ
ಭಾರತದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ ಸೀಮಾ, ಇಲ್ಲಿನ ಜೀವನವನ್ನು ತಾವು ತುಂಬಾ ಎಂಜಾಯ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ವಿಶೇಷವಾಗಿ ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಭಾರತ ತಂಡವನ್ನು ಬೆಂಬಲಿಸುವುದು ಮತ್ತು ಗೆಲುವನ್ನು ಕುಟುಂಬದೊಂದಿಗೆ ಸಂಭ್ರಮಿಸುವುದು ತಮಗೆ ಖುಷಿ ನೀಡುತ್ತದೆ ಎಂದಿದ್ದಾರೆ. ತಮಗೆ ಈ ಸಮುದಾಯದಲ್ಲಿ ಗೌರವ ಸಿಕ್ಕಿದೆ, ಆದ್ದರಿಂದ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಮರಳುವ ಇಚ್ಛೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೀಮಾ ಹೈದರ್ ಅವರಿಗೆ ಮೊದಲ ವಿವಾಹದಿಂದ ನಾಲ್ಕು ಮಕ್ಕಳಿದ್ದು, ಸಚಿನ್ ಮೀನಾ ಅವರನ್ನು ಭೇಟಿಯಾದ ನಂತರ ಈಗ ಇಬ್ಬರು ಮಕ್ಕಳಿದ್ದಾರೆ. 2023ರಲ್ಲಿ ಆನ್‌ಲೈನ್ ಗೇಮ್ ಪಬ್‌ಜಿ ಮೂಲಕ ಪರಿಚಯವಾಗಿದ್ದ ಸಚಿನ್ ಮತ್ತು ಸೀಮಾ, ನಂತರ ನೇಪಾಳದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಸೀಮಾ, ಅಂದಿನಿಂದಲೂ ಭಾರತವೇ ನನ್ನ ಮನೆ ಎಂದು ಹೇಳುತ್ತಾ ಇಲ್ಲಿಯೇ ವಾಸಿಸುತ್ತಿದ್ದಾರೆ. ಈ ನಾಮಕರಣದ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja