Dailyhunt Logo
  • Light mode
    Follow system
    Dark mode
    • Play Story
    • App Story
YADGIRI : ಸಿಎಂ ಸಿದ್ದು ಅಭಿಮಾನಿಯ ಮೌನ ಪ್ರತಿಭಟನೆ.. ರಾಜೀನಾಮೆ ವಿಚಾರ ಕೇಳಿ ಕಣ್ಣೀರು..!

YADGIRI : ಸಿಎಂ ಸಿದ್ದು ಅಭಿಮಾನಿಯ ಮೌನ ಪ್ರತಿಭಟನೆ.. ರಾಜೀನಾಮೆ ವಿಚಾರ ಕೇಳಿ ಕಣ್ಣೀರು..!

Navasamaja.com 2 weeks ago

Cm siddaramaiah fan protest in yadgiri

ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah )ರಾಜೀನಾಮೆ (Resignation )ನೀಡಲಿದ್ದಾರೆ ಎಂಬ ವಿಚಾರ ಹೊರಬರ್ತಿದ್ದಂತೆ ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ದಾರೆ.

ಯಾದಗಿರಿಯಲ್ಲಿ ಅಭಿಮಾನಿಯೊಬ್ಬರು ವಿಶಿಷ್ಟವಾಗಿ ಆಕ್ರೋಶ ಹೊರಹಾಕಿದ್ದಾರೆ.

ನಗರದ ಸುಭಾಷ್ ವೃತ್ತದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದು ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದ್ದಾರೆ.

ಅಭಿಮಾನಿ ರಾಜಕುಮಾರ ಗಣೀರ ಸಿದ್ದರಾಮಯ್ಯನವರ ಮುಖ್ಯಮಂತ್ರಿ ರಾಜೀನಾಮೆ ಹಿನ್ನೆಲೆ ಕಣ್ಣೀರು ಹಾಕುತ್ತಿದ್ದಾರೆ.ಯಾರೊಂದಿಗೂ ಮಾತಾಡದೆ ಕುಂತಲ್ಲೇ ಕುಳಿತಿದ್ದಾರೆ.

ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ಪದತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿಗಳಿಂದ ತೀವ್ರ ಬೇಸರಗೊಂಡಿರುವ ಅಭಿಮಾನಿ, ಸಾರ್ವಜನಿಕರ ಎದುರಲ್ಲೇ ಕಣ್ಣೀರಿಟ್ಟು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಆಗಲಿದ್ದಾರೆ ಎಂಬ ಚರ್ಚೆಗಳು ದಟ್ಟವಾಗಿರುವ ಬೆನ್ನಲ್ಲೇ, ರಾಜ್ಯದಾದ್ಯಂತ ಅಹಿಂದ ವರ್ಗ ಹಾಗೂ ಸಿದ್ದರಾಮಯ್ಯ ಬೆಂಬಲಿಗ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿದೆ. ಯಾದಗಿರಿಯ ಈ ಭಾವನಾತ್ಮಕ ಪ್ರತಿಭಟನೆಯ ದೃಶ್ಯಗಳು ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja