Dailyhunt Logo
  • Light mode
    Follow system
    Dark mode
    • Play Story
    • App Story
YATHINDRA SIDDARAMAIAH: ಅಪ್ಪನ ಸ್ಥಾನ ಹೋಗಿದ್ದಕ್ಕೆ ಕಣ್ಣೀರು, ಮಂತ್ರಿಯಾದದ್ದಕ್ಕೆ ಹರ್ಷ! ಸಂಪುಟ ಸೇರಿದ ಬೆನ್ನಲ್ಲೇ ಯತೀಂದ್ರ ಹೇಳಿದ್ದೇನು?

YATHINDRA SIDDARAMAIAH: ಅಪ್ಪನ ಸ್ಥಾನ ಹೋಗಿದ್ದಕ್ಕೆ ಕಣ್ಣೀರು, ಮಂತ್ರಿಯಾದದ್ದಕ್ಕೆ ಹರ್ಷ! ಸಂಪುಟ ಸೇರಿದ ಬೆನ್ನಲ್ಲೇ ಯತೀಂದ್ರ ಹೇಳಿದ್ದೇನು?

Navasamaja.com 4 months ago

ಬೆಂಗಳೂರು: ಹೊಸ ಸರ್ಕಾರದ ಈ ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು ಮಾತ್ರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪುತ್ರ ಹಾಗೂ ನೂತನ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ನೀಡಿರುವ ಹೈ-ಎಮೋಷನಲ್ ಹೇಳಿಕೆ.

ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಾ. ಯತೀಂದ್ರ ಸಿದ್ದರಾಮಯ್ಯ ನಮ್ಮಪ್ಪ ಸಿಎಂ ಆಗಿರಬೇಕಿತ್ತು ಎಂಬ ಹೇಳಿಕೆ ನೀಡಿದ್ದಾರೆ

ಲೋಕಭವನದ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಈ ಕ್ಷಣದಲ್ಲಿ ತಮಗೆ ಒಂದು ಕಡೆ ಅತ್ಯಂತ ಸಂತೋಷವಾಗುತ್ತಿದ್ದರೆ, ಮತ್ತೊಂದು ಕಡೆ ಅಷ್ಟೇ ದುಃಖವೂ ಆಗುತ್ತಿದೆ ಎಂದು ಭಾವುಕರಾಗಿ ನುಡಿದಿದ್ದಾರೆ.

5 ವರ್ಷ ನಮ್ಮಪ್ಪನೇ ಸಿಎಂ ಎಭ ವಿಶ್ವಾಸವಿತ್ತು!

ತಮ್ಮ ತಂದೆಯವರಾದ ಸಿದ್ದರಾಮಯ್ಯ ಅವರು ಪೂರ್ಣ ಪ್ರಮಾಣದ 5 ವರ್ಷಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರೈಸಲಿದ್ದಾರೆ ಎಂಬ ಬಲವಾದ ವಿಶ್ವಾಸ ಮತ್ತು ಆಸೆ ತಮಗಿತ್ತು ಎಂದು ಒಪ್ಪಿಕೊಂಡ ಯತೀಂದ್ರ, ಹೈಕಮಾಂಡ್ ಸೂಚನೆಯಂತೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಅವರ ಜಾಗಕ್ಕೆ ತಮ್ಮನ್ನು ಮಂತ್ರಿ ಮಾಡಿರುವುದು ಮನಸ್ಸಿಗೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ತಮ್ಮ ತಂದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಸಹ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿಯುವುದಿಲ್ಲ, ಬದಲಿಗೆ ಇಲ್ಲೇ ಉಳಿದು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ತಮಗೆ ಒಲಿದುಬಂದಿರುವ ಸಚಿವ ಸ್ಥಾನದ ಬಗ್ಗೆ ಮಾತನಾಡಿದ ಅವರು, ತಾವು ಹೈಕಮಾಂಡ್ ಅಥವಾ ಹೊಸ ಸಿಎಂ ಬಳಿ ಇಂತಹದ್ದೇ ನಿರ್ದಿಷ್ಟ ಖಾತೆ ಬೇಕು ಎಂದು ಯಾವುದೇ ಬೇಡಿಕೆ ಇಟ್ಟಿಲ್ಲ, ಜವಾಬ್ದಾರಿಯುತ ಅಧಿಕಾರಿಯಾಗಿ ಸರ್ಕಾರ ತಮಗೆ ಯಾವುದೇ ಖಾತೆಯನ್ನು ನೀಡಿದರೂ ಅದನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾರಿ ಮಾಡಿಕೊಟ್ಟಿದ್ದಾರೆ. ತಂದೆಯ ತ್ಯಾಗದ ಬೆನ್ನಲ್ಲೇ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಡಿಕೆಶಿ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿ ಸ್ಥಾನ ಪಡೆದುಕೊಂಡಿರುವುದು ಸದ್ಯ ಸಚಿವಾಲಯ ಮತ್ತು ರಾಜಕೀಯ ಕಾರಿಡಾರ್‌ನಲ್ಲಿ ಅತ್ಯಂತ ಭಾವುಕ ಹಾಗೂ ಬಿಸಿಬಿಸಿ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja