Dailyhunt
ಆಟೋ ಗ್ಯಾಸ್ ಕೊರತೆ ಕೇವಲ ವದಂತಿ: ಸಾರ್ವಜನಿಕರು ಆತಂಕಪಡಬೇಡಿ

ಆಟೋ ಗ್ಯಾಸ್ ಕೊರತೆ ಕೇವಲ ವದಂತಿ: ಸಾರ್ವಜನಿಕರು ಆತಂಕಪಡಬೇಡಿ

Navayuga News 3 weeks ago

ಬೆಂಗಳೂರು: ರಾಜ್ಯದಲ್ಲಿ ಆಟೋ ಎಲ್‌ಪಿಜಿ (LPG) ಅನಿಲದ ತೀವ್ರ ಅಭಾವವಿದೆ ಎಂಬ ಸುದ್ದಿಗಳು ಕೇವಲ ವದಂತಿಗಳಾಗಿದ್ದು, ಚಾಲಕರು ಮತ್ತು ಮಾಲೀಕರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ.

ಕಳೆದ ಕೆಲವು ದಿನಗಳಿಂದ ಗ್ಯಾಸ್ ಬಂಕ್‌ಗಳ ಮುಂದೆ ಆಟೋಗಳ ಸುದೀರ್ಘ ಸಾಲು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕಟಣೆ ಹೊರಡಿಸಿದೆ.

ಕೆಲವು ಖಾಸಗಿ ಪೂರೈಕೆದಾರರಲ್ಲಿ ಕಂಡುಬಂದ ಅಲ್ಪಮಟ್ಟದ ವ್ಯತ್ಯಯವನ್ನೇ ದೊಡ್ಡ ಕೊರತೆ ಎಂದು ಬಿಂಬಿಸಲಾಗುತ್ತಿದೆ. ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ಐಓಸಿ (IOC), ಬಿಪಿಸಿ (BPC) ಮತ್ತು ಹೆಚ್‌ಪಿಸಿ (HPC) ಕಂಪನಿಗಳು ಈಗ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಿಸಿವೆ.

ಹೆಚ್ಚಿದ ಪೂರೈಕೆ ಪ್ರಮಾಣ:

ಹಿಂದೆ ಪ್ರತಿದಿನ ಸರಾಸರಿ 56.67 ಮೆಟ್ರಿಕ್ ಟನ್ ಅನಿಲ ಪೂರೈಕೆಯಾಗುತ್ತಿತ್ತು. ಆದರೆ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಇದನ್ನು ಸರಾಸರಿ 83.58 ಮೆಟ್ರಿಕ್ ಟನ್‌ಗೆ ಏರಿಸಲಾಗಿದೆ. ಕಳೆದ ಐದು ದಿನಗಳ ಅಂಕಿಅಂಶಗಳನ್ನು ಗಮನಿಸಿದರೆ, ಏಪ್ರಿಲ್ 2 ರಿಂದ 6 ರವರೆಗೆ ನಿರಂತರವಾಗಿ 83 ರಿಂದ 94 ಮೆಟ್ರಿಕ್ ಟನ್ ಗ್ಯಾಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಸರ್ಕಾರದ ಮನವಿ:

"ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ, ವ್ಯವಸ್ಥೆ ಸುಗಮವಾಗಿದೆ. ಆದ್ದರಿಂದ ಚಾಲಕರು ವದಂತಿಗಳಿಗೆ ಕಿವಿಗೊಟ್ಟು ಬಂಕ್‌ಗಳ ಮುಂದೆ ಗಂಟೆಗಟ್ಟಲೆ ಸಾಲು ನಿಂತು ಆತಂಕ ಸೃಷ್ಟಿಸಿಕೊಳ್ಳಬಾರದು" ಎಂದು ಇಲಾಖೆಯು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದೆ.

Dailyhunt
Disclaimer: This content has not been generated, created or edited by Dailyhunt. Publisher: Navayuga News