Monday, 10 Aug, 10.44 pm Navayuga News

ರಾಷ್ಟ್ರೀಯ
ಐಪಿಎಲ್ ಅಖಾಡಕ್ಕಿಳಿಯಲು ಮುಂದಾದ ಪತಂಜಲಿ ಸಂಸ್ಥೆ..!

ನವದೆಹಲಿ, ಆ.10- ಇಂಡಿಯನ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯ ಮುಖ್ಯ ಪ್ರಾಯೋಜಕತ್ವ ವಹಿಸಲು ದೇಶದ ಹೆಸರಾಂತ ಆಯುರ್ವೇದ ಸಂಸ್ಥೆ ಮತ್ತು ಯೋಗ ಗುರು ಬಾಬಾ ರಾಮದೇವ್ ಒಡೆತನದ ಪತಂಜಲಿ ಸಿದ್ಧವಾಗಿದೆ.

ಭಾರತದೊಂದಿಗೆ ತೀವ್ರ ಭಿನ್ನಾಭಿಪ್ರಾಯದಿಂದ ಚೀನಾದ ಹೆಸರಾಂತ ಸಂಸ್ಥೆ ವಿವೋ ಮುಖ್ಯ ಪ್ರಯೋಜಕತ್ವದಿಂದ ಹಿಂದೆ ಸರಿದಿದೆ.

ಈ ಹಿನ್ನೆಲೆಯಲ್ಲಿ ಟೈಟಲ್ ಸ್ಪಾನ್ಸರ್‍ಶಿಪ್ ವಹಿಸಿಕೊಳ್ಳಲು ಹರಿದ್ವಾರ ಮೂಲದ ಪತಂಜಲಿ ಆಯುರ್ವೇದ ಸಂಸ್ಥೆ ಗಂಭೀರ ಪರಿಶೀಲನೆ ನಡೆಸುತ್ತಿದೆ ಎಂದು ಸಂಸ್ಥೆಯ ವಕ್ತಾರ ಎಸ್.ಕೆ. ತಿಜರ್‍ವಾಲಾ ತಿಳಿಸಿದ್ದಾರೆ.

ಪತಂಜಲಿ ಉತ್ಪನ್ನಗಳು ದೇಶಾದ್ಯಂತ ಬಾರಿ ಜನಪ್ರಿಯತೆ ಪಡೆದಿದೆ. ಲೋಕಪ್ರಿಯಗೊಳಿಸಲು ಸಂಸ್ಥೆ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಪತಂಜಲಿ ಮುಖ್ಯ ಪ್ರಯೋಜಕತ್ವಕ್ಕಾಗಿ ಬಿಡ್ ಮಾಡಲಿದೆ ಎಂದು ವಕ್ತಾರರು ಹೇಳಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Navayuga News
Top