Tuesday, 11 Aug, 8.14 pm Navayuga News

ಮುಖ್ಯ ಸುದ್ದಿಗಳು
ಭಾಗಮಂಡಲ ಭೂಕುಸಿತದ ವೇಳೆ ಕಣ್ಮರೆಯಾಗಿದ್ದ ಪ್ರಧಾನ ಅರ್ಚಕ ನಾರಾಯಣ ಆಚಾರ್ ಮೃತದೇಹ 6 ದಿನಗಳ ನಂತರ ಪತ್ತೆ

ಮಡಿಕೇರಿ, ಆ-11 : ಆಗಸ್ಟ್, 06 ರಂದು ಮಡಿಕೇರಿ ತಾಲ್ಲೂಕು ಭಾಗಮಂಡಲದ ತಲಕಾವೇರಿಯಲ್ಲಿ ಉಂಟಾದ ಭೂಕುಸಿತದಿಂದ 05 ಜನರು ಕಣ್ಮರೆಯಾಗಿದ್ದರು. ಈ ಸಂಬಂಧ ಜಿಲ್ಲಾ ಪ್ರಕೃತಿ ವಿಕೋಪ ತಂಡ ಎನ್‍ಡಿಆರ್'ಎಫ್, ಎಸ್‍ಡಿಆರ್'ಎಫ್, ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ಇಲಾಖಾ ತಂಡಗಳು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದರು.

ಮಂಗಳವಾರವು ಸಹ ಎನ್‍ಡಿಆರ್'ಎಫ್, ಎಸ್‍ಡಿಆರ್'ಎಫ್, ಪೊಲೀಸ್, ಅರಣ್ಯ ಮತ್ತು ಅಗ್ನಿಶಾಮಕ ಇಲಾಖಾ ತಂಡಗಳು ಮಳೆಯ ನಡುವೆಯೂ ಕಾರ್ಯಾಚರಣೆ ನಡೆಸಿದ್ದು, ಕಾಣೆಯಾದವರ ಪೈಕಿ ನಾರಾಯಣ ಆಚಾರ್ ಎಂಬುವವರ ಮೃತ ದೇಹವು ಅವರ ಮನೆ ಇದ್ದ ಪ್ರದೇಶದಿಂದ ಸುಮಾರು 02.50 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಕಾಣೆಯಾದ 05 ಜನರ ಪೈಕಿ 02 ಜನರ ಮೃತದೇಹಗಳು ಪತ್ತೆಯಾಗಿದೆ. ಉಳಿದ ಮೂವರ ಹುಡುಕಾಟಕ್ಕೆ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Navayuga News
Top