Tuesday, 11 Aug, 7.11 pm Navayuga News

ಮುಖ್ಯ ಸುದ್ದಿಗಳು
ಗ್ರಾಮ ಪಂಚಾಯತ್ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ, ಆ.15ರೊಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಾಕಾಶ

ಬೆಂಗಳೂರು, ಆಗಸ್ಟ್ 11 : ರಾಜ್ಯ ಚುನಾವಾಣಾ ಆಯೋಗದ ಮಾರ್ಗದರ್ಶನದಂತೆ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2020ರ ಮತದಾರರ ಕರಡು ಪಟ್ಟಿ ತಯಾರಿಸಿ ಪ್ರಕಟಿಸಲಾಗಿದೆ.

ತಹಶೀಲ್ದಾರ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಕಾರ್ಯಾಲಯಗಳಲ್ಲಿ ಹಾಗೂ ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಸಾರ್ವಜನಿಕರ ಹಾಗೂ ಮತದಾರರ ವೀಕ್ಷಣೆಗೆ ಕರಡು ಪ್ರತಿಯನ್ನು ಇರಿಸಲಾಗಿದೆ. ಪ್ರಕಟಿಸಲಾದ ಮತದಾರ ಪಟ್ಟಿಯ ಬಗ್ಗೆ ಆ.14ರೊಳಗೆ ಮತದಾರರು ಹೆಸರು, ವಾಸವಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಇರದೆ ಬೇರೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಆ ಬಗ್ಗೆ ಆಕ್ಷೇಪಣಗಳನ್ನು ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಲ್ಲಿಸಬಹುದು.

ನಗರ ಪ್ರದೇಶದ ಮತದಾರರ ಹೆಸರು ಅಥವಾ ವಿಧಾನಸಭೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ಗ್ರಾಮ ಪಂಚಾಯತಿಗೆ ತಯಾರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮಾತ್ರ ಆಕ್ಷೇಪಣೆಗೆ ಅವಕಾಶವಿರುತ್ತದೆ. ಸ್ವೀಕೃತವಾದ ಆಕ್ಷೇಪಣಗಳನ್ನು ಇತ್ಯರ್ಥಪಡಿಸಿ ಅಂತಿಮ ಮತದಾರರ ಪಟ್ಟಿಯನ್ನು ಆಗಸ್ಟ್ 31 ರಂದು ಪ್ರಕಟಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Navayuga News
Top