Tuesday, 11 Aug, 6.44 pm Navayuga News

ಅಂತಾರಾಷ್ಟ್ರೀಯ
ಗುಡ್ ನ್ಯೂಸ್ : ಕೋವಿದ್-19 ಲಸಿಕೆಗೆ ಒಪ್ಪಿಗೆ ಕೊಟ್ಟ ವಿಶ್ವದ ಮೊದಲ ರಾಷ್ಟ್ರ ರಷ್ಯಾ, ಪ್ರಧಾನಿ ಪುಟೀನ್ ಪುತ್ರಿ ಮೇಲು ನಡೆದ ಪ್ರಯೋಗ

ಮಾಸ್ಕೋ (ರಷ್ಯಾ) : ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯಲು ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಪ್ರಯತ್ನಿಸುತ್ತಿದೆ. ಇದರ ನಡುವೆ ಆಶಾದಾಯಕ ಸುದ್ದಿಯೊಂದು ರಷ್ಯಾದಿಂದ ಬಂದಿದ್ದು. ಕೋವಿದ್-19 ವಾಕ್ಸಿನ್ ಗೆ ಇಲ್ಲಿನ ಅಧ್ಯಕ್ಷ ವಾಡ್ಲಿಮೀರ್ ಪುಟೀನ್ ಅನುಮತಿ ನೀಡಿದ್ದಾರೆ.

ಮಾಸ್ಕೋ ಮೂಲದ ಗಮಾಲೆಯಾ ಎಂಬ ಸಂಸ್ಥೆ ಅಭಿವೃದ್ಧಿ ಪಡಿಸಿದ ಈ ಕೋವಿದ್ ವಾಕ್ಸಿನ್ ಅನ್ನು 2 ತಿಂಗಳಗಿಂತ ಕಡಿಮೆ ಅವಧಿಯಲ್ಲಿ ಮಾನವನ ಪ್ರಯೋಗ ನಡೆಸಿ ಯಶಸ್ವಿಯಾಗಿದೆ. ಪ್ರಧಾನಿ ಪುಟಿನ್ ಮಗಳ ಮೇಲೂ ಈ ಲಸಿಕೆ ಪ್ರಯೋಗಿಸಲಾಗಿದೆ ಎನ್ನುವುದು ಕೂಡ ಇಲ್ಲಿ ವಿಶೇಷ. ಈ ಮೂಲಕ ಕೋವಿದ್ ಲಸಿಕೆಗೆ ಅನುಮತಿ ನೀಡಿದ ಮೊದಲ ರಾಷ್ಟ್ರವಾಗಿ ರಷ್ಯಾ ಹೊರಹೊಮ್ಮಿದೆ.

ಈಗ ಗಮಾಲೆಯಾ ಸಂಸ್ಥೆ ಕೋವಿದ್ ಚುಚ್ಚುಮದ್ದು ಉತ್ಪಾದನೆ ಪ್ರಾರಂಭ ಮಾಡಬೇಕಿದೆ. ಇದು ಕೊರೋನಾ ಸೋಂಕಿತರಲ್ಲಿ ಅತಿ ವೇಗವಾಗಿ ರೋಗನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಪುಟಿನ್ ತಿಳಿಸಿದ್ದಾರೆ.

ರಷ್ಯಾದಲ್ಲೂ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಅತಿ ಹೆಚ್ಚು ಸೋಂಕಿತ ರಾಷ್ಟ್ರಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇಲ್ಲಿಯವರೆಗೂ 9 ಲಕ್ಷ ಸೋಂಕಿತರ ಸಂಖ್ಯೆ ದಾಖಲಾಗಿದ್ದು, 15130 ಮಂದಿ ಸಾವನ್ನಪ್ಪಿದ್ದಾರೆ. ಫೆಬ್ರವರಿ 10ರಂದು ಇಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಏಪ್ರಿಲ್ 10ಕ್ಕೆ 12 ಸಾವಿರ ಸೋಂಕಿತರಾಗಿದ್ದರು. ಆನಂತರ ಸೋಂಕಿತರ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಾಯಿತು. ದಿನವೊಂದಕ್ಕೆ 11500 ಸೋಂಕಿತರು ಪತ್ತೆಯಾಗಿದ್ದು ದಾಖಲೆಯಾಗಿದ್ದರೆ. ಈಗ ಪ್ರತಿ ದಿನ 5-6 ಸಾವಿರ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಈಗಲೂ 1.77 ಲಕ್ಷ ಜನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಒಟ್ಟು ಜನಸಂಖ್ಯೆ 14.45 ಕೋಟಿಯಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Navayuga News
Top