Dailyhunt Logo
  • Light mode
    Follow system
    Dark mode
    • Play Story
    • App Story
ಇಟಲಿಯಲ್ಲಿ 'ಕನ್ನಡತಿ' ರಂಜನಿ ರಾಘವನ್ ಸೋಲೋ ಟ್ರಿಪ್: ಪ್ರವಾಸದ ಫಿಲಾಸಫಿ ಜೊತೆ ಕಣ್ಮನ ಸೆಳೆಯುವ ಸುಂದರ ಚಿತ್ರಗಳು ವೈರಲ್!

ಇಟಲಿಯಲ್ಲಿ 'ಕನ್ನಡತಿ' ರಂಜನಿ ರಾಘವನ್ ಸೋಲೋ ಟ್ರಿಪ್: ಪ್ರವಾಸದ ಫಿಲಾಸಫಿ ಜೊತೆ ಕಣ್ಮನ ಸೆಳೆಯುವ ಸುಂದರ ಚಿತ್ರಗಳು ವೈರಲ್!

Navayuga News 3 days ago

ಬೆಂಗಳೂರು: ಕಿರುತೆರೆಯ ಜನಪ್ರಿಯ 'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ಮತ್ತು ಲೇಖಕಿ ರಂಜನಿ ರಾಘವನ್ ಇತ್ತೀಚೆಗೆ ಯುರೋಪ್‌ನ ಸುಂದರ ದೇಶವಾದ ಇಟಲಿಗೆ ಒಂಟಿಯಾಗಿ ಪ್ರವಾಸ (Solo Trip) ಕೈಗೊಂಡಿದ್ದಾರೆ. ತಾವು ಇಟಲಿಯ ಬೇರೆ ಬೇರೆ ರೋಮಾಂಚನಕಾರಿ ಊರುಗಳಿಗೆ ಭೇಟಿ ನೀಡಿ ಕಳೆದಿರುವ ಅದ್ಭುತ ಕ್ಷಣಗಳ ಚಿತ್ರಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಇವು ಅಭಿಮಾನಿಗಳ ಗಮನ ಸೆಳೆದಿವೆ.

ಚಿತ್ರಗಳ ಜೊತೆಗೆ ತಮ್ಮ ಪ್ರವಾಸದ ಅನುಭವವನ್ನು ಹಂಚಿಕೊಂಡಿರುವ ರಂಜನಿ, "ಪ್ರವಾಸಗಳು ಹೊಸ ಸ್ಥಳಗಳನ್ನು ತೋರಿಸುವುದಕ್ಕಿಂತ… ನಮ್ಮೊಳಗಿನ ಹೊಸ ವ್ಯಕ್ತಿಯನ್ನು ಪರಿಚಯಿಸುತ್ತದೆ" ಎಂಬ ಅತ್ಯಂತ ಅರ್ಥಪೂರ್ಣ ಸಾಲನ್ನು ಬರೆದುಕೊಂಡಿದ್ದಾರೆ. ಇಟಲಿಯ ಜಾಗತಿಕ ಪ್ರವಾಸಿ ತಾಣವಾದ ಅಮಾಲ್ಫಿ ಕೋಸ್ಟ್ (Amalfi Coast) ಕರಾವಳಿ ತೀರದ ಸುಂದರ ಹಿನ್ನೆಲೆಯ ಚಿತ್ರಗಳನ್ನು ಅವರು ಪ್ರಕಟಿಸಿದ್ದಾರೆ. ಅಲ್ಲಿಂದ ಬೋಟ್ ರೈಡ್ ಮೂಲಕ ಸಮುದ್ರದ ಬಂಡೆಗಳ ಮಧ್ಯೆ ಇರುವ 'ಬ್ಲೂ ಗ್ರಾಟೊ' (Blue Grotto) ಎಂಬ ಮ್ಯಾಜಿಕಲ್ ಗುಹೆಯೊಳಗೆ ಹೋದ ರೋಮಾಂಚಕ ಅನುಭವವನ್ನು ಹಂಚಿಕೊಂಡಿದ್ದಾರೆ. ಗುಹೆಯಿಂದ ಹೊರಬರುವಾಗ ತಮಗಾದ ಆಶ್ಚರ್ಯದ ಎಕ್ಸ್‌ಪ್ರೆಶನ್ ಫೋಟೋವನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ.

ಬೆಟ್ಟಗಳ ಮೇಲೆ ಕಡಿದಾಗಿ ನಿರ್ಮಾಣವಾಗಿರುವ ಸುಂದರ ವರ್ಟಿಕಲ್ ಸಿಟಿ 'ಸೊರೆಂಟೊ' ಹಿನ್ನೆಲೆಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವ ಅವರು, ಚಕ್ಕೋತದಷ್ಟು ದೊಡ್ಡ ದೊಡ್ಡ ನಿಂಬೆಹಣ್ಣು ಬೆಳೆಯುವ ಆ ಜಾಗದಲ್ಲಿ ಅಲ್ಲಿನ ಪ್ರಸಿದ್ಧ 'ಲೈಮ್ ಗೆಲೆಟೋ' ಸವಿದಿದ್ದಾಗಿ ತಿಳಿಸಿದ್ದಾರೆ. ವಿಶೇಷವೆಂದರೆ ಸೋಲೋ ಟ್ರಿಪ್ ಆಗಿರುವುದರಿಂದ ತಾವೇ ಸ್ವತಃ ಟ್ರಿಪಾಡ್ (Tripod) ಇಟ್ಟು, ಫ್ರೇಮ್ ಸೆಟ್ ಮಾಡಿ ನಡೆದುಬಂದು ಪೋಸ್ ನೀಡಿ ಫೋಟೋಗಳನ್ನು ತೆಗೆದುಕೊಂಡಿರುವುದಾಗಿ ರಂಜನಿ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಅನಾ ಕ್ಯಾಪ್ರಿ ಹಾಗೂ ಫ್ಯಾಷನ್ ನಗರಿ ಮಿಲನ್‌ಗೆ ಬಂದಾಗ ತೆಗೆದ ಪ್ರಮುಖ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ.

Dailyhunt
Disclaimer: This content has not been generated, created or edited by Dailyhunt. Publisher: Navayuga News