Dailyhunt
ಕ್ರೇಜಿ-ಬ್ರಹ್ಮ: ರವಿಚಂದ್ರನ್-ಹಂಸಲೇಖ ಜೋಡಿಯ ಅದ್ಭುತ ಯುಗದ ಸ್ಮರಣೆ - ಮೇ 30ಕ್ಕೆ ಭವ್ಯ ಸಮಾರಂಭ

ಕ್ರೇಜಿ-ಬ್ರಹ್ಮ: ರವಿಚಂದ್ರನ್-ಹಂಸಲೇಖ ಜೋಡಿಯ ಅದ್ಭುತ ಯುಗದ ಸ್ಮರಣೆ - ಮೇ 30ಕ್ಕೆ ಭವ್ಯ ಸಮಾರಂಭ

Navayuga News 1 week ago

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿರುವ 'ಕ್ರೇಜಿಸ್ಟಾರ್' ವಿ. ರವಿಚಂದ್ರನ್ ಮತ್ತು 'ನಾದಬ್ರಹ್ಮ' ಹಂಸಲೇಖ ಅವರ ದಶಕಗಳ ಅಪೂರ್ವ ದೃಶ್ಯಕಾವ್ಯ ಹಾಗೂ ಸಂಗೀತದ ಪಯಣವನ್ನು ಕೊಂಡಾಡಲು 'ಕ್ರೇಜಿ-ಬ್ರಹ್ಮ' ಎಂಬ ವಿನೂತನ ಮೆಗಾ ಇವೆಂಟ್ ಸಜ್ಜಾಗಿದೆ.

ಕನ್ನಡ ಸಿನಿಪ್ರಿಯರಿಗೆ ಅದ್ಭುತ ಹಾಡುಗಳು ಹಾಗೂ ರಂಗಿನ ಲೋಕವನ್ನು ಪರಿಚಯಿಸಿದ ಈ ದಿಗ್ಗಜ ಜೋಡಿಗೆ ಅದ್ದೂರಿ ಗೌರವ (ಟ್ರಿಬ್ಯೂಟ್) ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ದಕ್ಷಿಣ ಭಾರತದ ಖ್ಯಾತ ಕಲಾವಿದರು ಸೇರಿದಂತೆ ಕನ್ನಡ ಚಿತ್ರರಂಗದ ಹೆಸರಾಂತ ನಟ-ನಟಿಯರು ಹಾಗೂ ಪೋಷಕ ಕಲಾವಿದರು ಈ ಸಮಾರಂಭದಲ್ಲಿ ಪಾಲ್ಗೊಂಡು ರವಿ-ಹಂಸ ಜೋಡಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.

ಮನೋರಂಜನೆಯ ಮಹಾಪೂರ:

ಈ ಕಾರ್ಯಕ್ರಮವು ಕೇವಲ ಸಮಾರಂಭವಾಗಿರದೆ, ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ರವಿಚಂದ್ರನ್-ಹಂಸಲೇಖ ಕಾಂಬಿನೇಷನ್‌ನ ಸಾರ್ವಕಾಲಿಕ ಹಿಟ್ ಹಾಡುಗಳು, ಆಕರ್ಷಕ ನೃತ್ಯಗಳು, ನಾಟಕ, ಮಿಮಿಕ್ರಿ ಹಾಗೂ ಏಕವ್ಯಕ್ತಿ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಲಿವೆ.

ಸ್ಥಳ ಮತ್ತು ಸಮಯ:

ಈ ಮೆಗಾ ಕಾರ್ಯಕ್ರಮವು ಇದೇ ಮೇ 30ರ ಶನಿವಾರ ಬೆಂಗಳೂರಿನ ಮೈಸೂರು ರಸ್ತೆಯ ಕೆಂಗೇರಿ ಬಳಿಯಿರುವ 'ಜೆ.ಕೆ ಗ್ರಾಂಡ್ ಅರೇನಾ'ದಲ್ಲಿ ನಡೆಯಲಿದೆ. ಸಂಜೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಸತತ ಆರು ಗಂಟೆಗಳ ಕಾಲ ಈ ಸಂಭ್ರಮ ಮೇಳೈಸಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navayuga News