Friday, 31 Jul, 7.34 pm News Alert 24 x 7

ದೇಶ
ಅನ್ ಲಾಕ್ 3.0 ಮಾರ್ಗಸೂಚಿ: ನೀವು ಗಮನಿಸಬೇಕಾದ ಅಂಶಗಳಿವು ಇವರಿಂದ ಪ್ರಕಟಿಸಲಾಗಿದೆ - News Alert

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸೋಂಕು ಹೆಚ್ಚು ವ್ಯಾಪಿಸುತ್ತಿದ್ದರೂ, ಕೇಂದ್ರ ಸರ್ಕಾರ ಅನ್ ಲಾಕ್ 3.0 ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜುಲೈ 31 ಕ್ಕೆ ಅನ್ ಲಾಕ್ 2.0 ಅವಧಿ ಅಂತ್ಯವಾಗಲಿದ್ದು, ಆಗಸ್ಟ್ 1 ರಿಂದ 31 ರವರೆಗೆ ಅನ್ ಲಾಕ್ 3.0 ಜಾರಿಯಲ್ಲಿರಲಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನ್ ಲಾಕ್ 3.0 ಮಾರ್ಗಸೂಚಿಯ ಪ್ರಮುಖ ಅಂಶಗಳು ಇಲ್ಲಿವೆ:

* ದೇಶದಾದ್ಯಂತ ರಾತ್ರಿ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧ (ರಾತ್ರಿ ಕರ್ಫ್ಯೂ) ತೆರವು.

* ಆಗಸ್ಟ್ 5 ರಿಂದ ಜಿಮ್ ಮತ್ತು ಯೋಗ ಸೆಂಟರ್ ತೆರೆಯಬಹುದು.

* ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ

* ಆಗಸ್ಟ್ 31 ರವರೆಗೂ ಶಾಲಾ-ಕಾಲೇಜು ಬಂದ್.

* ವಂದೇ ಭಾರತ್ ಮಿಷನ್ ಅಡಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಅವಕಾಶ.

* ಮೆಟ್ರೋ ಸಂಚಾರ ಆರಂಭಿಸಬಹುದು.

* ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್, ಮನರಂಜನಾ ಉದ್ಯಾನವನ, ಬಾರ್, ಆಡಿಟೋರಿಯಂ, ಮಲ್ಟಿಪ್ಲೆಕ್ಸ್, ಸಿನಿಮಾ ಹಾಲ್ ತೆರೆಯಬಹುದು.

* ಸಾಂಸ್ಕೃತಿಕ/ಮನರಂಜನಾ/ಕ್ರೀಡಾ/ರಾಜಕೀಯ/ಸಾಮಾಜಿಕ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ನಡೆಸಬಹುದು.

ಕಂಟೇನ್ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್

ಆಗಸ್ಟ್ 31 ರವರೆಗೆ ಕಂಟೇನ್ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮುಂದುವರೆಯಲಿದೆ. ಅನ್ ಲಾಕ್ 3.0 ಮಾರ್ಗಸೂಚಿಯಲ್ಲಿ ಅನುಮತಿ ನೀಡಲಾಗಿರುವ ಯಾವ ಚಟುವಟಿಕೆಗಳೂ ಕಂಟೇನ್ಮೆಂಟ್ ಝೋನ್ ಗಳಿಗೆ ಅನ್ವಯವಾಗುವುದಿಲ್ಲ.

ಅಂದ್ಹಾಗೆ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿ ಮುಂದುವರೆಯಲಿದೆ.


Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top