Friday, 31 Jul, 7.34 pm News Alert 24 x 7

ದೇಶ
ಭಾರತೀಯ ವಾಯುಸೇನೆ ಬಲ ಹೆಚ್ಚಿಸಲು ಬಂದ್ವು ರಫೇಲ್ ಯುದ್ಧ ವಿಮಾನಗಳು.! ಇವರಿಂದ ಪ್ರಕಟಿಸಲಾಗಿದೆ - News Alert

ಫ್ರಾನ್ಸ್ ದೇಶದ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದಿಳಿದಿದೆ. ಹರಿಯಾಣದ ಅಂಬಾಲಾ ವಾಯುನೆಲೆಗೆ ರಫೇಲ್ ಯುದ್ಧ ವಿಮಾನಗಳು ಬಂದಿಳಿದಿವೆ.

ಮೊದಲ ಹಂತದಲ್ಲಿ ಐದು ರಫೇಲ್ ಯುದ್ಧ ವಿಮಾನಗಳು ಇಂದು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದ್ದು, ರಫೇಲ್ ಯುದ್ಧ ವಿಮಾನಗಳನ್ನು ವಾಯುಸೇನಾ ಮುಖ್ಯಸ್ಥ ಆರ್.ಕೆ.ಎಸ್ ಬದೌರಿಯಾ ಸ್ವಾಗತಿಸಿದ್ದಾರೆ.

Haryana: The first batch of Rafale fighter jets that took off from France on Monday lands at the Ambala airbase. https://t.co/5K0H6Fgmx5

ರಫೇಲ್ ಆಗಮನವಾಗುತ್ತಿದ್ದಂತೆಯೇ, ಅವುಗಳಿಗೆ ವಾಟರ್ ಸಲ್ಯೂಟ್ ನೀಡಲಾಗಿದೆ.

#WATCH Haryana: Touchdown of Rafale fighter aircraft at Ambala airbase. Five jets have arrived from France to be inducted in Indian Air Force. (Source - Office of Defence Minister) pic.twitter.com/vq3YOBjQXu

ಅಸಲಿಗೆ, ಇಷ್ಟೊತ್ತಿಗಾಗಲೇ ರಫೇಲ್ ಯುದ್ಧ ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಗೊಳ್ಳಬೇಕಿತ್ತು. ಆದ್ರೆ, ಕೊರೊನಾ ವೈರಸ್ ಭೀತಿಯಿಂದಾಗಿ ಭಾರತಕ್ಕೆ ಮೊದಲ ಹಂತದ ರಫಲ್ ಯುದ್ಧ ವಿಮಾನಗಳ ವಿತರಣೆ ತಡವಾಗಿದೆ.

ವಿವಾದದ ಕೇಂದ್ರಬಿಂದು: ರಫೇಲ್ ಯುದ್ಧ ವಿಮಾನಗಳ ಖರೀದಿ ಸಂಬಂಧ ಬಹುಕೋಟಿ ಹಗರಣ ನಡೆದಿದೆ ಎನ್ನಲಾಗಿದೆ. ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳ ಖರೀದಿ ಸಂಬಂಧ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಕೇಳಿಬರುತ್ತಲೇ ಇದೆ.

36 ವಿಮಾನಗಳು:

ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ನಿರ್ಮಿಸಿರುವ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತ ಖರೀದಿಸಿದೆ.

ಈಗಾಗಲೇ ಭಾರತದ ವಾಯುಸೇನೆ ಸೇರಿರುವ ಮಿರಾಜ್ 2000 ಅನ್ನೂ ನಿರ್ಮಿಸಿದ್ದು ಡಸಾಲ್ಟ್ ಏವಿಯೇಷನ್ ಸಂಸ್ಥೆಯೇ.

ಐತಿಹಾಸಿಕ ಒಪ್ಪಂದ:

36 ರಫೇಲ್ ಯುದ್ಧ ವಿಮಾನ ವ್ಯವಹಾರ ಒಪ್ಪಂದಕ್ಕೆ ಸೆಪ್ಟೆಂಬರ್ 23, 2016 ರಂದು ಉಭಯ ದೇಶಗಳ ಪ್ರತಿನಿಧಿಗಳು ಸಹಿ ಹಾಕಿದ್ದರು. ಸುಮಾರು 780 ಕೋಟಿ ರೂಪಾಯಿ ಮೌಲ್ಯದ ಈ ಒಪ್ಪಂದಕ್ಕೆ ಅಂದಿನ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಸಹಿ ಹಾಕಿದ್ದರು.

#WATCH: Five #Rafale jets in the Indian airspace, flanked by two Su-30MKIs (Source: Raksha Mantri's Office) pic.twitter.com/hCoybNQQOv

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top