Saturday, 01 Aug, 10.41 am News Alert 24 x 7

ಟಾಪ್
ಬಿ.ಸಿ.ಪಾಟೀಲ್ ಗೂ ತಗುಲಿತು ಕೊರೊನಾ ವೈರಸ್ ಸೋಂಕು.! ಇವರಿಂದ ಪ್ರಕಟಿಸಲಾಗಿದೆ - News Alert

ಬೆಂಗಳೂರು: ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪತ್ನಿ, ಅಳಿಯ ಹಾಗೂ ಸಿಬ್ಬಂದಿ ವರ್ಗಕ್ಕೆ ಕೊರೊನಾ ವೈರಸ್ ಸೋಂಕು ತಗುಲಿರುವುದು ನಿನ್ನೆಯಷ್ಟೇ ಪತ್ತೆಯಾಗಿತ್ತು. ಇದೀಗ ಹಿರೇಕರೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ.ಪಾಟೀಲ್ ಅವರಿಗೂ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ.

ಈ ವಿಚಾರವನ್ನು ಸ್ವತಃ ಬಿ.ಸಿ.ಪಾಟೀಲ್ ಖಚಿತ ಪಡಿಸಿದ್ದು, ಬೆಂಗಳೂರಿನ ಅವರ ನಿವಾಸದಲ್ಲೇ ಹೋಂ ಕ್ವಾರಂಟೈನ್ ಆಗಿದ್ದಾರೆ.

''ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಕೋವಿಡ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಇರಲಿ'' ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top