Monday, 19 Apr, 10.33 am News Alert 24 x 7

ಟಾಪ್
ದೇಶದಲ್ಲಿ ನಿನ್ನೆ ಒಂದೇ ದಿನಕ್ಕೆ 2.73 ಲಕ್ಷ ಕೊರೊನಾ ಕೇಸ್ ಪತ್ತೆ, 1,619 ಸಾವು

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಜೊತೆಜೊತೆಗೆ ಕೊರೊನಾದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ನಿನ್ನೆ ಒಂದೇ ದಿನದಲ್ಲಿ 2,73,810 ಜನರಲ್ಲಿ ಕೊರೊನಾ ಕಾಣಿಸಿಕೊಂಡರೆ, 1,619 ಜನರು ಕೊರೊನಾಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಅನೇಕ ರಾಜ್ಯಗಳು ಲಸಿಕೆ, ಆಮ್ಲಜನಕದ ಕೊರತೆ ಎದುರಿಸುತ್ತಿರುವುದರಿಂದ ವೈದ್ಯರು ಕೂಡ ಅಸಹಾಯಕರಾಗಿ ನಿಲ್ಲುವಂತಾಗಿದೆ.

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ:-

  • ಪ್ರಸ್ತುತ ಭಾರತದಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ- 1,50,61,919
  • ಮೃತರ ಸಂಖ್ಯೆ - 1,78,769
  • ಈವರೆಗೆ ಚೇತರಿಸಿಕೊಂಡವರ ಸಂಖ್ಯೆ- 1,29,53,821
  • ನಿನ್ನೆ ಚೇತರಿಸಿಕೊಂಡವರ ಸಂಖ್ಯೆ- 1,44,178

ಕೊರೊನಾ ವ್ಯಾಕ್ಸಿನೇಷನ್​ ಅಭಿಯಾನದಡಿ ಜ. 16 ರಿಂದ ನಿನ್ನೆಯವರೆಗೂ ಒಟ್ಟು 12,38,52,566 ಜನರಿಗೆ ಲಸಿಕೆ ನೀಡಲಾಗಿದೆ.

ತುಂಬಾ ವಿಶೇಷ ಹಾಗೂ ನಿಖರತೆ ಹೊಂದಿರುವ ಈ ನ್ಯೂಸ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ...

https://play.google.com/store/apps/details?id=com.newsalert24x7

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top