Saturday, 01 Aug, 12.02 pm News Alert 24 x 7

ಟಾಪ್
ಕೊರೊನಾ 'ಮ'ರಣಕೇಕೆ: ಐದನೇ ಸ್ಥಾನಕ್ಕೆ ಜಿಗಿದ ಭಾರತ.! ಇವರಿಂದ ಪ್ರಕಟಿಸಲಾಗಿದೆ - News Alert

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ರಣಕೇಕೆ ಮುಂದುವರೆದಿದ್ದು, ಈವರೆಗೂ ಕೋವಿಡ್-19 ಗೆ 36,511 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಕೋವಿಡ್ ಸಾವು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನಕ್ಕೆ ಜಿಗಿದಿದೆ.

ಕಳೆದ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಕೊರೊನಾ ವೈರಸ್ ಇಟಲಿಯಲ್ಲಿ ಆರ್ಭಟಿಸುತ್ತಿತ್ತು. ಕೋವಿಡ್-19 ನಿಂದ ಇಟಲಿಯಲ್ಲಿ ಈವರೆಗೂ 35,141 ಮಂದಿ ಉಸಿರು ಚೆಲ್ಲಿದ್ದಾರೆ. ಆದ್ರೀಗ, ಸಾವಿನ ಸಂಖ್ಯೆಯಲ್ಲಿ ಇಟಲಿ ದೇಶವನ್ನೇ ಭಾರತ ಹಿಂದಿಕ್ಕಿದೆ.

ಟಾಪ್ ಐದು ರಾಷ್ಟ್ರಗಳ ಸಾವಿನ ಪ್ರಮಾಣ:

* ಯು.ಎಸ್.ಎ - ಒಟ್ಟು ಸೋಂಕಿತರು-47,06,059, ಒಟ್ಟು ಕೋವಿಡ್ ಸಾವು-156,752

* ಬ್ರೆಜಿಲ್ - ಒಟ್ಟು ಸೋಂಕಿತರು-26,66,298, ಒಟ್ಟು ಕೋವಿಡ್ ಸಾವು-92,568

* ಮೆಕ್ಸಿಕೋ - ಒಟ್ಟು ಸೋಂಕಿತರು-424,637, ಒಟ್ಟು ಕೋವಿಡ್ ಸಾವು-46,688

* ಯುಕೆ - ಒಟ್ಟು ಸೋಂಕಿತರು-303,181, ಒಟ್ಟು ಕೋವಿಡ್ ಸಾವು-46,119

* ಭಾರತ - ಒಟ್ಟು ಸೋಂಕಿತರು-16,95,988, ಒಟ್ಟು ಕೋವಿಡ್ ಸಾವು-36,511


Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top