ಟಾಪ್
ಕೊರೊನಾ ಪರೀಕ್ಷೆಯಲ್ಲಿ ಮತ್ತೊಂದು ನೂತನ ದಾಖಲೆ ಬರೆದ ಭಾರತ.!

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಅಬ್ಬರ ಮುಂದುವರೆದಿದ್ದು, ಕೋವಿಡ್ ಪರೀಕ್ಷೆಯಲ್ಲಿ ನೂತನ ದಾಖಲೆ ನಿರ್ಮಾಣವಾಗಿದೆ. ಭಾರತದಲ್ಲಿ ಈವರೆಗೂ 14 ಕೋಟಿಗೂ ಅಧಿಕ ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ.
ನಿನ್ನೆಯವರೆಗೂ.. ಅಂದ್ರೆ ನವೆಂಬರ್ 29 ರವರೆಗೂ ಭಾರತದಲ್ಲಿ 14,03,79,976 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 8,76,173 ಸ್ಯಾಂಪಲ್ ಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.
ಕೊರೊನಾ ಅಂಕಿ-ಅಂಶ:
ಒಟ್ಟು ಸೋಂಕಿತರು: 94,31,692
ಗುಣಮುಖರಾದವರು: 88,47,600
ಮೃತಪಟ್ಟವರು: 1,37,139
ಸಕ್ರಿಯ ಸೋಂಕಿತರು: 4,46,952
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/Msxvz13qsb
— ICMR (@ICMRDELHI) November 30, 2020