Wednesday, 16 Sep, 10.19 am News Alert 24 x 7

ಟಾಪ್
ಕೊರೊನಾ ಸಂಕಷ್ಟ - 50 ಲಕ್ಷದ ಗಡಿ ದಾಟಿದ ಎರಡನೇ ರಾಷ್ಟ್ರವಾಗಿ ಹೊರ ಹೊಮ್ಮಿದ ಭಾರತ! ಇವರಿಂದ ಪ್ರಕಟಿಸಲಾಗಿದೆ - News Alert

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆತಂಕ ಮನೆ ಮಾಡುತ್ತಿದೆ. ಸದ್ಯ ದೇಶದಲ್ಲ 50 ಲಕ್ಷದ ಗಡಿಯನ್ನು ಸೋಂಕಿತರ ಸಂಖ್ಯೆ ತಲುಪಿದೆ. ಈ ಮೂಲಕ ಈ ಗಡಿ ದಾಟಿದ ಎರಡನೇ ರಾಷ್ಟ್ರವಾಗಿ ಭಾರತ ಹೊರ ಹೊಮ್ಮಿದೆ.

ಅಮೆರಿಕ ರಾಷ್ಟ್ರವು 50 ಲಕ್ಷದ ಗಡಿ ದಾಟಿದ ಮೊದಲ ರಾಷ್ಟ್ರವಾಗಿದೆ. ಅದರ ಹಿಂದೆ ಭಾರತ ಸಾಗುತ್ತಿದೆ. ಆದರೆ, ಅಮೆರಿಕಗಿಂತಲೂ ಭಾರತದಲ್ಲಿ ಸೋಂಕಿತರ ಸಂಖ್ಯೆ ತೀವ್ರ ವೇಗದಲ್ಲಿ ಸಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 90,123 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50,20,360ಕ್ಕೆ ಏರಿಕೆ ಕಂಡಿದೆ.

ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 1,290 ಜನ ಬಲಿಯಾಗಿದ್ದಾರೆ. ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆ 82,066ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

50,20,360 ಜನ ಸೋಂಕಿತರ ಪೈಕಿ, ಇಲ್ಲಿಯವರೆಗೂ 39,42,361 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶಲ್ಲಿನ್ನೂ 9,95,933 ಸಕ್ರಿಯ ಪ್ರಕರಣಗಳಿವೆ.


Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top