Monday, 30 Nov, 12.57 pm News Alert 24 x 7

ಟಾಪ್
ಕೊರೊನಾ ವೈರಸ್ ಗೆ ಬಲಿಯಾದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ

ಜೈಪುರ: ಮಹಮಾರಿ ಕೊರೊನಾ ವೈರಸ್ ನಿಂದ ಪ್ರತಿನಿತ್ಯ ಭಾರತದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೇ ಸಾಲಿಗೆ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಕೂಡ ಸೇರಿರುವುದು ದುರಾದೃಷ್ಟಕರ.


ಕೊರೊನಾ ವೈರಸ್ ಸೋಂಕು ತಗುಲಿದ ಹಿನ್ನಲೆಯಲ್ಲಿ ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ (59) ಗುರುಗ್ರಾಮದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕಿರಣ್ ಮಹೇಶ್ವರಿ ಕೊನೆಯುಸಿರೆಳೆದಿದ್ದಾರೆ.

ದೇಶದಲ್ಲಿ 94 ಲಕ್ಷ ದಾಟಿದ ಕೊರೊನಾ ಮಹಾಮಾರಿ.!

ಕೋವಿಡ್-19 ಪಾಸಿಟಿವ್ ಕಂಡು ಬಂದ ಮೇಲೆ ಕಿರಣ್ ಮಹೇಶ್ವರಿ ಮನೆಯಲ್ಲಿಯೇ ಕೊಂಚ ದಿನ ವಿಶ್ರಾಂತಿ ಪಡೆದಿದ್ದಾರೆ. ಆದರೆ, ಆರೋಗ್ಯ ಕ್ಷೀಣಿಸಿದ ಪರಿಣಾಮ ಆಸ್ಪತ್ರೆಗೆ ದಾಖಲಾದರು.

ಕೊರೊನಾ ಪರೀಕ್ಷೆಯಲ್ಲಿ ಮತ್ತೊಂದು ನೂತನ ದಾಖಲೆ ಬರೆದ ಭಾರತ.!

ಕಿರಣ್ ಮಹೇಶ್ವರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜಸ್ಥಾನದ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top