Thursday, 01 Oct, 3.49 pm News Alert 24 x 7

ಟ್ರೆಂಡಿಂಗ್
ಮೈಸೂರು ಮೃಗಾಲಯಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ ಇವರಿಂದ ಪ್ರಕಟಿಸಲಾಗಿದೆ - News Alert

ಮೈಸೂರು: ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದರು. ಪತ್ನಿ ಗೀತಾ, ಇಬ್ಬರು ಮಕ್ಕಳು ಹಾಗೂ ಅಳಿಯನ ಜೊತೆಗೆ ಮೃಗಾಲಯಕ್ಕೆ ಬಂದ ಶಿವಣ್ಣ, ತಾವು ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿ ಖುಷಿ ಪಟ್ಟರು.


ಆಗಸ್ಟ್ ತಿಂಗಳಲ್ಲಿ ಆನೆ ದತ್ತು ಪಡೆದಿದ್ದ ಶಿವಣ್ಣ

ಕಳೆದ ಆಗಸ್ಟ್ ತಿಂಗಳಲ್ಲಿ ಮೈಸೂರು ಮೃಗಾಲಯದ 'ಪಾರ್ವತಿ' ಆನೆಯನ್ನು ನಟ ಶಿವರಾಜ್ ಕುಮಾರ್ ದತ್ತು ಪಡೆದಿದ್ದರು. ಒಂದು ವರ್ಷದ ಅವಧಿಗೆ ನಟ ಶಿವಣ್ಣ ಆನೆಯನ್ನು ದತ್ತು ಪಡೆದಿದ್ದಾರೆ.


ಖುಷಿ ವಿಚಾರ

ಇದೇ ವೇಳೆ ಥಿಯೇಟರ್ ಓಪನ್ ಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವ ಬಗ್ಗೆ ಶಿವರಾಜ್ ಕುಮಾರ್ ಸಂತಸ ವ್ಯಕ್ತಪಡಿಸಿದರು. ''ಸಿನಿಮಾ ಥಿಯೇಟರ್ ಓಪನ್ ಆಗ್ತಿರೋದು ಖುಷಿ ವಿಚಾರ. ಆದರೆ, ಎಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡಬೇಕು ಎಂಬುದರ ಬಗ್ಗೆ ನಾನು ಹೇಳೋಕೆ ಆಗಲ್ಲ'' ಎಂದರು.

ಥಿಯೇಟರ್ ಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರ ಅನುಮತಿ: ವಿರೋಧ ವ್ಯಕ್ತಪಡಿಸಿದ ನಿರ್ಮಾಪಕರ ಸಂಘ.!

ಭರವಸೆ ಇದೆ

''ಚಿತ್ರರಂಗ ಸಂಕಷ್ಟಕ್ಕೀಡಾಗಿರುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ರವರೊಂದಿಗೆ ಮಾತನಾಡಿದ್ವಿ. ಅವರು ನೀಡಿದ ಭರವಸೆಯ ನಿರೀಕ್ಷೆಯಲ್ಲಿದ್ದೇವೆ. ಚಿತ್ರರಂಗಕ್ಕೆ ಸಿಎಂ ನೆರವಾಗುತ್ತಾರೆ ಎಂಬ ನಿರೀಕ್ಷೆ ಇದೆ'' ಅಂತ ಶಿವಣ್ಣ ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top