Saturday, 24 Apr, 10.17 pm News Alert 24 x 7

ಟಾಪ್
ನೊಂದವರ ಪೀಕಬೇಡಿ ಅನ್ನ ಸಿಗದೆ ಸಾಯ್ತೀರಾ? ಬೆನ್ನು ಕೊಟ್ಟು ಕಾಪಾಡಿ ಎಂದು ಜಗ್ಗೇಶ್ ಮನವಿ ಮಾಡಿದ್ದೇಕೆ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹಾವಳಿ ವಿಪರೀತವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ಸಾಮಾನ್ಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ, ಹಲವರು ಇದನ್ನೇ ನೆಪ ಮಾಡಿಕೊಂಡು ಬಡವರಿಂದ ಹಣ ಪೀಕುತ್ತಿರುವ ಅಮಾನವೀಯ ಘಟನೆಗಳು ಕೂಡ ನಡೆಯುತ್ತಿವೆ. ಹೀಗಾಗಿ ಜನ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ನಟ ಜಗ್ಗೇಶ್ ಕೂಡ ಕೆಂಡಾಮಂಡಲವಾಗಿದ್ದಾರೆ.

ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಇಬ್ಬರು ಬಂಧುಗಳು 3 ಜನ ಸ್ನೇಹಿತರಿಗೆ ಕೋವಿಡ್ ಬಂದು, ಇಬ್ಬರು ನಿನ್ನೆ, ಮೊನ್ನೆ ತೀರಿಹೋದರು. ಇನ್ನೂ 3 ಜನ ನರಳುತ್ತಿದ್ದಾರೆ! ಎದ್ದು ಹೋಗಿ ಸಹಾಯ ಮಾಡಲು ಆಗದು ಅಂತಹ ದರಿದ್ರ ಈ ಖಾಯಿಲೆ. ಹೆಣ ಸಂಸ್ಕಾರಕ್ಕೆ ನಾಯಿಗಳಂತೆ ರೂ. 30 ಸಾವಿರ ಹಣ ಪೀಕಿದ್ದಾರೆ. ಅಂಬುಲೆನ್ಸ್ ಹಾಗೂ ಸ್ಮಶಾನದವರನ್ನು ಹೋಗಿ ಚಪ್ಪಲಿಯಲ್ಲಿ ಹೊಡೆಯಬೇಕು ಅನ್ನಿಸಿತು. ಇಂಥವರಿಂದ ಸರ್ಕಾರಕ್ಕೆ ಕೆಟ್ಟಹೆಸರು ಎಂದು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಇನ್ನೊಂದು ಟ್ವೀಟ್ ನಲ್ಲಿ, ಕೋವಿಡ್ ಸಂತ್ರಸ್ತರು ನೊಂದು ಟಿವಿಯಲ್ಲಿ ಮಾತಾಡಿದ್ದು, ನೋಡಿ ಸಂಕಟವಾಯಿತು. ಆಸ್ಪತ್ರೆ, ಅಂಬುಲೆನ್ಸ್, ಔಷಧಿ ಅಂಗಡಿ, ಸ್ಮಶಾನ ಕಾರ್ಯಕರ್ತರು ಹಣಕ್ಕಾಗಿ ಸಾಯಬೇಡಿ,ನೊಂದವರ ಪೀಡಿಸಬೇಡಿ, ತಿನ್ನಲು ಅನ್ನ ಸಿಗದೆ ಸಾಯುತ್ತೀರಿ. ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ, ಸತ್ತರೆ ಹಣ ಬರುವುದಿಲ್ಲ. ಪಾಪ, ಪುಣ್ಯ ಮಾತ್ರ ನಮ್ಮ ಹಿಂದೆ ಬರುವುದು. ದೇವನೊಬ್ಬನಿರುವ ಎಲ್ಲ ನೋಡುತಿರುವ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.


Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top