Sunday, 13 Sep, 8.49 am News Alert 24 x 7

ಟಾಪ್
ಶಾಲಾ, ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ - ಹಲವು ಮಾರ್ಗಸೂಚಿಗಳ ಬಿಡುಗಡೆ! ಇವರಿಂದ ಪ್ರಕಟಿಸಲಾಗಿದೆ - News Alert

ಬೆಂಗಳೂರು : ಶಾಲಾ - ಕಾಲೇಜು ಆರಂಭಿಸಲು ಸರ್ಕಾರ ದಿನಾಂಕ ನಿಗದಿಪಡಿಸಿದ್ದು, ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಸೆ. 21 ರಿಂದ ರಾಜ್ಯದಲ್ಲಿ ಶಾಲಾ - ಕಾಲೇಜುಗಳು ಪ್ರಾರಂಭವಾಗಲಿದ್ದು, 9-12 ನೇ ತರಗತಿ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕೇಂದ್ರ ಸರ್ಕಾರದ ಅನುಮತಿಯ ಮೇಲೆ ಶಾಲಾ - ಕಾಲೇಜು ಪ್ರಾರಂಭಕ್ಕೆ ಇಲಾಖೆ ನಿರ್ಧಾರ ಮಾಡಿದ್ದು, ಆರೋಗ್ಯ ಇಲಾಖೆ ಶಾಲಾ - ಕಾಲೇಜುಗಳ ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. 2-3 ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆ ಮಾರ್ಗಸೂಚಿ ಪಾಲಿಸಿ ಶಾಲೆಗಳ ಪ್ರಾರಂಭ ಮಾಡಲು ಇಲಾಖೆ ತೀರ್ಮಾನಿಸಿದೆ.

ಮಕ್ಕಳು ಶಾಲೆಗೆ ಕಡ್ಡಾಯವಾಗಿ ಬರುವಂತೆ ಒತ್ತಾಯಿಸುವಂತಿಲ್ಲ. ಪೋಕಷಕರಿಂದ ಒಪ್ಪಿಗೆ ಪ್ತರವನ್ನು ಮಕ್ಕಳು ತರಬೇಕು. ತರಗತಿಯಲ್ಲಿ ಸಮಾಜಿಕ ಅಂತರ ವ್ಯವಸ್ಥೆ. ಪ್ರತಿ ದಿನವೂ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಯ್ಕಾನಿಂಗ್ ವ್ಯವಸ್ಥೆ ಮಾಡಬೇಕು. ಮಕ್ಕಳು ಹಾಗೂ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸ್ ಬಳಸುವುದು ಕಡ್ಡಾಯ.

ಪ್ರತಿ ಕೊಠಡಿಗಳು ನಿತ್ಯ ಸ್ಯಾನಿಟೈಸ್ ಆಗಬೇಕು. ಮಕ್ಕಳು ಶಾಲಾ-ಆವರಣದಲ್ಲಿ ಗುಂಪು ಕಟ್ಟದಂತೆ ಎಚ್ಚರವಹಿಸುವುದು ಸೇರಿದಂತೆ ಇನ್ನೂ ಹಲವು ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.


Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top