News Alert 24 x 7

45k Followers

ಶಾಲೆಗೆ ಗೈರಾಗಿದ್ದರೂ ಹಾಜರಾತಿ ಹಾಕಿದ್ದಕ್ಕೆ ಶಿಕ್ಷಕರ ಅಮಾನತು

12 Aug 2022.09:42 AM

ಬಳ್ಳಾರಿ: ಶಾಲೆಯಲ್ಲಿ ದಾಖಲಾದ 8ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರೂ ಪುಸ್ತಕದಲ್ಲಿ ಹಾಜರಾತಿ ಹಾಕಿ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ಮಿಲ್ಲರ್ ಪೇಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಪ್ರಕಾಶ ಟಿ.

ಹಾಗೂ ಶಿಕ್ಷಕ ಮಲ್ಲಿಕಾರ್ಜುನಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.

8ನೇ ತರಗತಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರಗತಿಗೆ ಗೈರಾಗಿದ್ದರು. ಮಕ್ಕಳ ತಂದೆ ಮಾಡಿರುವ 30 ಸಾವಿರ ರೂ. ಸಾಲ ಮರುಪಾವತಿಗಾಗಿ ದಾದಾವಲಿ ಎಂಬುವವರು ತನ್ನ ಮನೆಯ ಕೆಲಸಕ್ಕೆ ಹಾಗೂ ಬೇರೆಯವರ ಮನೆಯಲ್ಲಿ ದುಡಿಯಲು ಬಿಟ್ಟಿರುವುದರಿಂದ ಬಂದ ಹಣದಿಂದ ಸಾಲ ತೀರಿಸಿಕೊಳ್ಳವುದರ ಮೂಲಕ ದೌರ್ಜನ್ಯ ಎಸಗಿದ್ದಾರೆ.

ಈ ಮಕ್ಕಳು ಶಾಲೆಗೆ ಹಾಜರಾಗದಿದ್ದರೂ ಕೂಡ ಹಾಜರಾತಿ ನೀಡಿರುವುದರಿಂದ ಸದರಿ ಮಿಲ್ಲರಪೇಟೆ ಶಾಲಾ ಶಿಕ್ಷಕರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಸಸ್ಪೆಂಡ್ ಮಾಡಲಾಗಿದೆ. ಸದರಿ ಶಿಕ್ಷಕರು ಕರ್ನಾಟಕ ರಾಜ್ಯ ನಾಗರೀಕ ಸೇವಾ(ನಡತೆ) ನಿಯಮಗಳು 2021ರ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಆ.1 ರಂದು ಅಮಾನುತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: News Alert 24 x 7