Wednesday, 16 Sep, 6.17 pm News Alert 24 x 7

ಟಾಪ್
ಶೀಘ್ರವೇ ಭಾರತೀಯರ ಕೈ ಸೇರಲಿದೆ ಕೊರೊನಾ ಲಸಿಕೆ ಇವರಿಂದ ಪ್ರಕಟಿಸಲಾಗಿದೆ - News Alert

ನವದೆಹಲಿ: ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯುವ ಪ್ರಯೋಗದಲ್ಲಿ ಮಹತ್ವದ ಯಶಸ್ಸನ್ನು ಸಾಧಿಸಿದ್ದೇವೆ ಎನ್ನುತ್ತಿರುವ ರಷ್ಯಾ, ತನ್ನ ಲಸಿಕೆಯ 10 ಕೋಟಿ ಡೋಸ್ ಗಳನ್ನು ಭಾರತಕ್ಕೆ ನೀಡಲಿದೆ.ಈ ಕುರಿತು ರಷ್ಯನ್ ಡೈರೆಕ್ಟ್ ಇನ್ ವೆಸ್ಟ್ ಮೆಂಟ್ ಫಂಡ್ ಅಧಿಕೃತ ಘೋಷಣೆಯನ್ನು ಹೊರಡಿಸಿದೆ.

ಇದರ ಅನ್ವಯ ಆರ್‌ಡಿಐಎಫ್ ನೂತನ ಕೋವಿಡ್ - 19 ಲಸಿಕೆ ಸ್ಪುಟ್ನಿಕ್-ಗಿ ಅನ್ನು ಭಾರತದೊಂದಿಗೆ ಹಂಚಿಕೊಳ್ಳಲು ಡಾ.ರೆಡ್ಡೀಸ್ ಲ್ಯಾಬೊರೇಟರಿಯೊಂದಿಗೆ ಒಪ್ಪಂದವನ್ನೂ ಸಹ ಮಾಡಿಕೊಂಡಿದ್ದು, ರಷ್ಯಾದ ರಾಷ್ಟ್ರೀಯ ಸಂಪತ್ತು ನಿಧಿಯಾಗಿರುವ ಆರ್‌ಡಿಐಎಫ್ ಹೇಳಿಕೆ ಪ್ರಕಾರ ತನ್ನ ದೇಶದಲ್ಲಿ ಅಭಿವೃದ್ಧಪಡಿಸಲಾಗಿರುವ ಕೋವಿಡ್ - 19 ಲಸಿಕೆ ಸ್ಪುಟ್ನಿಕ್-ಗಿನ್ನು ಭಾರತದಲ್ಲಿ ಚಿಕಿತ್ಸಕ ಪ್ರಯೋಗಕ್ಕೆ ಒಳಪಡಿಸಲು ಆ ಬಳಿಕ ಇಲ್ಲಿ ಆ ಲಸಿಕೆಯ ವಿತರಣೆಗಾಗಿ ಡಾ. ರೆಡ್ಡೀಸ್ ಲ್ಯಾಬೊರೇಟರಿಗೆ ಸಹಕಾರ ನೀಡಲಿದೆ. ಹಾಗೂ ಶಾಸನಾತ್ಮಕ ಒಪ್ಪಿಗೆ ದೊರೆತ ತಕ್ಷಣವೇ ಈ ಚಟುವಟಿಕೆ ಕಾರ್ಯರೂಪಕ್ಕೆ ಬರಲಿದೆ ಎಂದೂ ಸಹ ಆರ್‌ಡಿಐಎಫ್ ತಿಳಿಸಿದೆ.

ಭಾರತದಿಂದ ಶಾಸನಾತ್ಮಕ ಒಪ್ಪಿಗೆಯೆಲ್ಲಾ ದೊರೆತ ಬಳಿಕ ಆರ್‌ಡಿಐಎಫ್ 100 ಮಿಲಿಯನ್ ಡೋಸ್ ಲಸಿಕೆಯನ್ನು ಡಾ. ರೆಡ್ಡೀಸ್ ಗೆ ಪೂರೈಕೆ ಮಾಡಲಿದ್ದು, ಸುರಕ್ಷತಾ ಒಪ್ಪಿಗೆಯನ್ನು ಪಡೆದುಕೊಂಡಿರುವ ಸ್ಪುಟ್ನಿಕ್-ಗಿ ಮನುಷ್ಯ ದೇಹದ ರೋಗನಿರೋಧಕ ಶಕ್ತಿಯ ಕೋಶಗಳ ಮೇಲೆ ಸೂಕ್ತ ಹಾಗೂ ಸುರಕ್ಷಿತ ರೀತಿಯಲ್ಲಿ ಅಧ್ಯಯನಕ್ಕೊಳಪಟ್ಟಿದ್ದು, ಕೋವಿಡ್ - 19 ಮಹಾಮಾರಿಗೆ ಲಸಿಕೆ ರೂಪದಲ್ಲಿ ಚಿಕಿತ್ಸಕ ಪ್ರಯೋಗಕ್ಕೆ ಒಳಪಟ್ಟಿದೆ ಎಂದು ಆರ್‌ಡಿಐಎಫ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: News Alert 24 x 7
Top